Advertisement
ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ವತಿಯಿಂದ ಈ ತುಳು ಚಿತ್ರ ಶತೋತ್ಸವ ನಡೆಯಲಿದೆ. ಹಲವು ಸಮಯಗಳಿಂದಲೇ ಈ ಉತ್ಸವ ಕ್ಕಾಗಿ ತಯಾರಿಗಳು ನಡೆದಿವೆ. ಶನಿವಾರ ಮಧ್ಯಾಹ್ನದ ವೇಳೆಗೆ ತಯಾರಿ ಬಹುತೇಕ ಪೂರ್ಣಗೊಂಡಿದೆ. ರವಿವಾರ ನಿರಂತರ ಸಭಾ ಕಾರ್ಯಕ್ರಮ, ಸಮ್ಮಾನ, ಮನೋ ರಂಜನ ಕಾರ್ಯಕ್ರಮಗಳು ನಡೆಯಲಿವೆ. ಕೋಸ್ಟಲ್‌ವುಡ್‌ನ ಸಂಭ್ರಮಕ್ಕೆ ಸ್ಯಾಂಡಲ್‌ವುಡ್‌ನ ಕೆಲವು ನಟ- ನಟಿಯರೂ ಭಾಗವಹಿಸುವುದು ಕಾರ್ಯಕ್ರಮದ ಅಂದ ಹೆಚ್ಚಿಸಲಿದೆ.
ಕಾರ್ಯಕ್ರಮಕ್ಕಾಗಿ ನೆಹರೂ ಮೈದಾನ ದಲ್ಲಿ ವಿಶಾಲ ವೇದಿಕೆಯನ್ನು ಸಿದ್ಧಗೊಳಿಸ ಲಾಗಿದೆ. 60 ಅಡಿ ಅಗಲ, 40 ಅಡಿ ಉದ್ದ ಹೊಂದಿರುವ ವೇದಿಕೆ ತುಳು ಚಿತ್ರ ಶತೋತ್ಸವಕ್ಕೆ ಸಾಕ್ಷಿಯಾಗಲಿದೆ. ಕಾರ್ಯ ಕ್ರಮದಲ್ಲಿ ಸುಮಾರು 3 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಎರಡು ಸಾವಿರದಷ್ಟು ಆಸನ ವ್ಯವಸ್ಥೆಯನ್ನು ಮಾಡಲಾಗಿದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಶಾಮಿಯಾನ ಅಳವಡಿಸಲಾಗಿದೆ. ಸ್ವಯಂ ಸೇವಕರು, ಅತಿಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಇರಲಿದೆ ಎಂದು ಒಕ್ಕೂಟದ ಗೌರವಾಧ್ಯಕ್ಷ ಕಿಶೋರ್ ಡಿ. ಶೆಟ್ಟಿ ತಿಳಿಸಿದ್ದಾರೆ. 100 ಮಂದಿಗೆ ಸಮ್ಮಾನ
‘ತುಳು ಚಿತ್ರ ಶತೋತ್ಸವ’ದಲ್ಲಿ ತುಳು ಚಿತ್ರದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರ ಸಹಿತ 100 ಮಂದಿಗೆ ಸಮ್ಮಾನ ನಡೆಯಲಿದೆ. ಅಲ್ಲದೆ, ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ತುಳು ಚಿತ್ರ ನಿರ್ಮಾಪಕರು, ನಿರ್ದೇಶಕರು, ಕಲಾವಿರನ್ನು ಗೌರವಿಸುವ ಕಾರ್ಯಕ್ರಮವೂ ಇದೆ.
Related Articles
Advertisement
ಎನ್ನ ತಂಗಡಿಯಿಂದ ಕರ್ಣೆವರೆಗೆ1971ರಲ್ಲಿ ತೆರೆಕಂಡ ‘ಎನ್ನ ತಂಗಡಿ’ ಚಿತ್ರದಿಂದ ಮೊದಲ್ಗೊಂಡು 2018ರಲ್ಲಿ ತೆರೆ ಕಂಡ ‘ಕರ್ಣೆ’ ಚಿತ್ರದವರೆಗೆ ಸುಮಾರು 48 ವರ್ಷಗಳಲ್ಲಿ ಕೋಸ್ಟಲ್‌ವುಡ್ ನಡೆದು ಬಂದ ದಾರಿ ಅದ್ಭುತ. ಪ್ರಾದೇಶಿಕ ಭಾಷಾ ಚಲನಚಿತ್ರವನ್ನು ವಿದೇಶಗಳಲ್ಲಿ ಯೂ ಪಸ ರಿಸಿ ಯಶಸ್ವಿಯಾದ ಖ್ಯಾತಿ ತುಳು ಚಿತ್ರರಂಗಕ್ಕಿದೆ. ಲಭ್ಯ ತಂತ್ರಜ್ಞಾನಗಳನ್ನೇ ಬಳಸಿ ಕೊಂಡು ಅಭಿಮಾನಿಗಳ ಮನಸ್ಸಿಗೆ ಮುದ ನೀಡುವಂತಹ ಚಿತ್ರಗಳನ್ನೇ ನೀಡುತ್ತಾ ಬೆಳೆದ ಚಿತ್ರರಂಗ, ಆಧುನಿಕ ತಂತ್ರಜ್ಞಾನ ಯುಗವನ್ನೂ ಸಮರ್ಥವಾಗಿ ಬಳಸಿ ಕೊಂಡು ಅತ್ಯುತ್ತಮ ಚಿತ್ರಗಳನ್ನು ನೀಡುವ ಮೂಲಕ ಚಿತ್ರರಂಗದಲ್ಲಿ ಹೊಸಚರಿತ್ರೆ ಯನ್ನೇ ನಿರ್ಮಿಸಿದೆ. ಹಾಗೆ ಬಿಡುಗಡೆಗೊಂಡ ಚಿತ್ರಗಳ ಸಂಖ್ಯೆ ಈಗ ನೂರಾಗಿದೆ.