Advertisement
ಪ್ರತಿಯೊಂದು ದೇಶಕ್ಕೂ ಅದರದ್ದೇ ಆದ ರಾಜಕೀಯ, ಸಾಂಸ್ಕೃತಿಕ ಇತಿಹಾಸಗಳಿರುತ್ತವೆ. ಕಾಲಾನಂತರದಲ್ಲಿ ಈ ಅವುಗಳು ಚರಿತೆಯಲ್ಲಿ ಹುದುಗಿ ಹೋಗಿಬಿಡುತ್ತವೆ. ಅಲ್ಲಿನ ಜನರಲ್ಲಿ ಕೇವಲ ಅದೊಂದು ಕಟ್ಟು ಕಥೆಯಾಗಿ ಚಾಲ್ತಿಯಲ್ಲಿರುತ್ತವೆ. ಆದರೆ ಈ ಇತಿಹಾಸಗಳು ನಾಶವಾಗಿ ಹೋಗದಂತೆ ತಡೆಯುವ ಕೆಲಸ ವಸ್ತು ಸಂಗ್ರಹಾಲಯಗಳು ಮಾಡುತ್ತವೆ. ಯಾವುದೋ ಐತಿಹಾಸಿಕ ಘಟನೆಗೆ ಸಂಬಂಧಿಸಿದ ವಿಚಾರಗಳು ಉತ್ಕನದ ವೇಳೆ ಲಭಿಸಿದರೆ ಅವುಗಳನ್ನು ಸುರಕ್ಷಿತವಾಗಿ ಕಾಪಾಡಲು ವಸ್ತು ಸಂಗ್ರಹಾಲಯವೊಂದೇ ಮಾರ್ಗ.
ಮೇ 18ರಂದು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ. ಚರಿತ್ರೆಯನ್ನು ಜತನವಾಗಿ ಕಾಪಾಡುವ ಸಂಗ್ರಹಾಲಯಗಳ ಮಹತ್ವವನ್ನು ತಿಳಿಸುವುದಕ್ಕೆ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ವಸ್ತು ಸಂಗ್ರಹಾಲಯ ಕೌನ್ಸಿಲ್ 1977ರಲ್ಲಿ ಮೊದಲ ಬಾರಿಗೆ ಮ್ಯೂಸಿಯಂ ಡೇ ಅಥವಾ ವಸ್ತು ಸಂಗ್ರಹಾಲಯವನ್ನು ಆಚರಿಸಲು ನಿರ್ಧರಿಸುತ್ತದೆ. ಅದರ ಪ್ರಕಾರ ಪ್ರತಿ ವರ್ಷ ಮೇ 18ರಂದು ವಿಶ್ವಾದ್ಯಂತ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತದೆ.
Related Articles
Advertisement
ಉಚಿತ ಪ್ರವಾಸಕೆಲವು ಸಂಸ್ಥೆಗಳು ಈ ದಿನದಂದು ವಸ್ತು ಸಂಗ್ರಹಾಲಯಗಳಿಗೆ ಉಚಿತ ಪ್ರವಾಸವನ್ನು ಆಯೋಜಿಸುವುದರ ಮೂಲಕ ದಿನದ ಮಹತ್ವವನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. ಐತಿಹಾಸಿಕ ಪರಂಪರೆ, ಸಂಸ್ಕೃತಿ, ಆರ್ಥಿಕ, ಸಾಮಾಜಿಕ, ರಾಜಕೀಯ ಬದುಕಿಗೆ ಕನ್ನಡಿ ಹಿಡಿಯುವಂಥದ್ದು ವಸ್ತು ಸಂಗ್ರಹಾಲಯಗಳು. ಪ್ರೇರಣಾದಾಯಿಯಾಗಿರುವ ಪುರಾತನ ವಸ್ತುಗಳು ಹಿಂದಿನ ತಲೆಮಾರುಗಳ ಸ್ಪಷ್ಟ ಚಿತ್ರಣ ನೀಡುತ್ತವೆ. ಇವುಗಳಿಗೆ ಭದ್ರತೆ ಸಿಗಬೇಕೆಂದೇ ವಸ್ತು ಸಂಗ್ರಹಾಲಯವನ್ನು ಕಟ್ಟಲಾಗಿದೆ. ಇಂಥ ವಸ್ತು ಸಂಗ್ರಹಾಲಯಗಳಿಗೆ ಜನರನ್ನು ಕರೆತರುವ, ಇಲ್ಲಿರುವ ವಸ್ತುಗಳನ್ನು ಪರಿಚಯಿಸುವ ಸಲುವಾಗಿ ಪ್ರತಿ ವರ್ಷ ಮೇ 18ರಂದು ವಿಶ್ವ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತಿದೆ. ಈ ಬಾರಿಯ ಥೀಮ್
ವಸ್ತು ಸಂಗ್ರಹಾಲಯಗಳನ್ನು ಸಾಂಸ್ಕೃತಿಕ ಕೇಂದ್ರಗಳನ್ನಾಗಿ ಮಾಡುವುದು ಮತ್ತು ಪರಂಪರೆಯನ್ನು ಭವಿಷ್ಯಕ್ಕೆ ಉಳಿಸುವ ಯೋಜನೆಯೊಂದಿಗೆ ಈ ಬಾರಿಯ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತಿದೆ. ಇಂದು ಜಗತ್ತಿನಲ್ಲಿ ಬೇರೆ ಬೇರೆ ರೀತಿಯ ವಸ್ತು ಸಂಗ್ರಹಾಲಯಗಳಿವೆ. ಕೆಲವು ಖಾಸಗಿ ಒಡೆತನದಲ್ಲಿದ್ದರೆ ಇನ್ನು ಕೆಲವು ಸರಕಾರಿ ವಸ್ತು ಸಂಗ್ರಹಾಲಯಗಳಿವೆ. ಯಾಂತ್ರೀಕೃತ ಬದುಕಿನಲ್ಲಿ ಇಂದಿನ ದಿನಗಳೇ ಮರೆತು ಹೋಗುವಾಗ ಇತಿಹಾಸವನ್ನು ಭದ್ರವಾಗಿಡುವುದು ಒಂದು ಜವಾಬ್ದಾರಿಯೇ ಸರಿ. ಕೆಲವೊಂದು ಹುದುಗಿಹೋದ ಚರಿತ್ರೆಗಳೂ ವಸ್ತಗಳನ್ನು ನೋಡುವಾಗ ನೆನಪಿಗೆ ಬರುತ್ತವಾದರೆ ಅದಕ್ಕೆ ವಸ್ತು ಸಂಗ್ರಹಾಲಯಗಳೇ ಮುಖ್ಯ ಕಾರಣ. •ಸುಶ್ಮಿತಾ ಶೆಟ್ಟಿ ಸಿರಿಬಾಗಿಲು