ಹುಣಸೂರು: ಕೆ.ಆರ್.ನಗರ ಮುಖ್ಯರಸ್ತೆಯ ಕಲ್ಕುಣಿಕೆ ರಂಗನಾಥ ಬಡಾವಣೆ ಶನೈಶ್ಚರಸ್ವಾಮಿ ದೇವಾಲಯದ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವವು ಶನಿವಾರ ನಡೆಯಲಿದೆ.
ನಾಲ್ಕು ವರ್ಷಗಳ ಹಿಂದೆ ಭಕ್ತರ ನೆರವಿನೊಂದಿಗೆ ಭವ್ಯವಾಗಿ ನಿರ್ಮಾಣಗೊಂಡಿರುವ ಶನೈಶ್ಚರಸ್ವಾಮಿ, ಮಹಾಗಣಪತಿ, ದುರ್ಗಾಪರಮೇಶ್ವರಿ ಅಮ್ಮನವರ ಹಾಗೂ ನವಗ್ರಹ ಹಾಗೂ ಕಿರಾತೇಶ್ವರ ಮತ್ತು ನಾಗದೇವರ ದೇವಾಲಯವು ರಾಜ್ಯಾದ್ಯಂತ ಭಕ್ತರನ್ನು ಹೊಂದಿದೆ.
ಪ್ರತಿ ಶನಿವಾರ ವಿಶೇಷ ಪೂಜೆ, ಪ್ರಸಾದ ವಿನಿಯೋಗ, ಪ್ರತಿ ಮಂಗಳವಾರ ಮತ್ತು ಪ್ರತಿ ತಿಂಗಳು ಸಂಕಷ್ಠಿ ಪೂಜೆಯನ್ನು ಮಹಾಗಣಪತಿಗೆ , ಬುಧುವಾರ ಶನೈಶ್ಚರಸ್ವಾಮಿಗೆ, ಶುಕ್ರವಾರ ಮತ್ತು ಮಂಗಳವಾರ ದುರ್ಗಾಪರಮೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ, ಪ್ರಸಾದವಿನಿಯೋಗ ನಡೆಯಲಿದೆ.
ಕಾರ್ಯಕ್ರಮ ವಿವರ: ಶನಿವಾರ ಬೆಳಗ್ಗೆ 7.30 ರಿಂದ ಶನಿ ಶಾಂತಿ ಹೋಮ, ನವಗ್ರಹ ಹೋಮ, ಬೆಳಗ್ಗೆ 9 ಗಂಟೆಯಿಂದ ಕಲ್ಕುಣಿಕೆಯ ಮ್ಯೂಜಿಕ್ ಶ್ರೀನಿವಾಸ್ ತಂಡದಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ, ಮಧ್ಯಾಹ್ನ 12ರಿಂದ ಜೀ ಕನ್ನಡ ಸರಿಗಮಪ ಸಾಂಸ್ಕೃತಿಕ ಕಾರ್ಯಕ್ರಮ.
ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ನಂತರ ದೇವಾಲಯದ ಆವರಣದಲ್ಲಿ ಧಾರ್ಮಿಕ ಸಭೆ ನಡೆಯಲಿದೆ