Advertisement
ಭಾರತದೆದುರಿನ ತವರಿನ ಟೆಸ್ಟ್ ಸರಣಿಯಲ್ಲಿ ಶೋಚನೀಯ ಪ್ರದರ್ಶನ ನೀಡಿದ ಕೆರಿಬಿಯನ್ ಪಡೆ ಏಕದಿನದಲ್ಲಾದರೂ ಸಿಡಿದು ನಿಲ್ಲಬಹುದು, ಪೈಪೋಟಿ ತೀವ್ರ ಗೊಳ್ಳಬಹುದೆಂಬ ನಿರೀಕ್ಷೆಯೂ ಹುಸಿ ಯಾಗಿದೆ. ಗುರುವಾರದ ಪಂದ್ಯ 23 ಓವರ್‌ಗಳ ಗಡಿ ದಾಟಲಿಲ್ಲ. ಇನ್ನೀಗ ಶನಿವಾರ ಇದೇ “ಕೆನ್ಸಿಂಗ್ಟನ್ ಓವಲ್’ನಲ್ಲಿ ದ್ವಿತೀಯ ಪಂದ್ಯ ನಡೆಯಲಿದೆ. ಇದೂ “ಒನ್ ಸೈಡೆಡ್ ಮ್ಯಾಚ್’ ಆದರೆ ಸರಣಿ ಖಂಡಿತವಾಗಿಯೂ ನೀರಸಗೊಳ್ಳಲಿದೆ.
Related Articles
Advertisement
ವಿಂಡೀಸ್ ತಂಡದಲ್ಲೂ ಸ್ಪಿನ್ನರ್‌ಗಳಿದ್ದರು. ಆದರೆ ಎಡಗೈ ಸ್ಪಿನ್ನರ್ ಗುಡಕೇಶ್ ಮೋಟಿ, ಲೆಗ್‌ಬ್ರೇಕ್ ಬೌಲರ್ ಯಾನಿಕ್ ಕರಿಯ ವಿಶೇಷ ಪರಿಣಾಮವನ್ನೇನೂ ಬೀರಲಿಲ್ಲ.
ದ್ವಿತೀಯ ಪಂದ್ಯ ಇದೇ ಅಂಗಳದ ಬೇರೊಂದು ಟ್ರ್ಯಾಕ್‌ನಲ್ಲಿ ನಡೆಯಲಿದೆ. ಭಾರತ ಮೊದಲು ಬ್ಯಾಟಿಂಗ್ ನಡೆಸಿ ದೊಡ್ಡ ಮೊತ್ತ ಪೇರಿಸುವತ್ತ ಮುಂದಡಿ ಇಟ್ಟಿàತೇ ಎಂಬುದೊಂದು ಪ್ರಶ್ನೆ.
ಬದಲಾದ ಬ್ಯಾಟಿಂಗ್ ಲೈನ್ಅಪ್ಗುರುವಾರ ನಾಯಕ ರೋಹಿತ್ ಶರ್ಮ ಇನ್ನಿಂಗ್ಸ್ ಆರಂಭಿಸಲು ಇಳಿಯ ಲಿಲ್ಲ. ಕೊಹ್ಲಿಯಂತೂ ಕ್ರೀಸಿಗೇ ಬರಲಿಲ್ಲ. ಬ್ಯಾಟಿಂಗ್ ಲೈನ್‌ಅಪ್ ಸಂಪೂರ್ಣ ಬದಲಾಗಿತ್ತು. ಶುಭಮನ್ ಗಿಲ್ ಜತೆಗೆ ಇಶಾನ್ ಕಿಶನ್ ಆರಂಭಿಕನಾಗಿ ಬಂದರು. ಈ ಪಂದ್ಯದ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. ಗಿಲ್ ಇನ್ನೂ ಐಪಿಎಲ್ ಚಾರ್ಮ್ ತೋರಿಲ್ಲ. ಸೂರ್ಯಕುಮಾರ್ ಹ್ಯಾಟ್ರಿಕ್ ಗೋಲ್ಡನ್ ಡಕ್ ಬಳಿಕ ಮೊದಲ ಸಲ ಖಾತೆ ತೆರೆದರು. ಪಾಂಡ್ಯ, ಠಾಕೂರ್ ಬೇಗನೆ ವಾಪಸಾದರು. ಅನಂತರವೇ ರೋಹಿತ್ ಆಗಮನವಾದದ್ದು. ಅವರು ಜಡೇಜ ಜತೆ ಅಜೇಯರಾಗಿ ಉಳಿದರು. ಭಾರತ ತಂಡದಲ್ಲಿ ಬದಲಾವಣೆಯ ಸಂಭವ ಕಡಿಮೆ. ಗುರುವಾರ ಬೌಲಿಂಗ್ ಪ್ರ್ಯಾಕ್ಟೀಸ್ ನಡೆಸಿದರಷ್ಟೇ? ಶನಿವಾರ ಬ್ಯಾಟಿಂಗ್ ಪ್ರ್ಯಾಕ್ಟೀಸ್ ನಿರೀಕ್ಷಿಸೋಣ. ವಿಶ್ವಕಪ್‌ಗೆ ಉಳಿದಿರುವುದಿನ್ನು ಕೆಲವೇ ದಿನಗಳು. ಈ ಅವಧಿಯಲ್ಲಿ ಭಾರತ 11 ಏಕದಿನ ಪಂದ್ಯಗಳನ್ನು ಆಡಲಿದೆ. ಸಮರ್ಥ ಆಡುವ ಬಳಗವನ್ನು ಕಟ್ಟಲು ಈ ಪಂದ್ಯಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ. ಆದರೆ ವೆಸ್ಟ್ ಇಂಡೀಸ್‌ಗೆ ಇಂಥ ಯಾವುದೇ ಚಿಂತೆ ಇಲ್ಲ. ಅದು ವಿಶ್ವಕಪ್ ರೇಸ್‌ನಿಂದ ಹೊರಬಿದ್ದಾಗಿದೆ!