Advertisement
ಈಗಾಗಲೇ ಸೂಪರ್-12 ವಿಭಾಗದಲ್ಲಿರುವ 8 ತಂಡಗಳಿಗೆ ತಲಾ ಎರಡು ಅಭ್ಯಾಸ ಪಂದ್ಯಗಳನ್ನು ಆಯೋ ಜಿಸಲಾಗಿದೆ. ಒಂದು ಅಪರಾಹ್ನ, ಇನ್ನೊಂದು ರಾತ್ರಿ ನಡೆಯಲಿದೆ. ಅದರಂತೆ ಭಾರತ ಬುಧವಾರ ಆಸ್ಟ್ರೇಲಿಯ ವಿರುದ್ಧ ಆಡಲಿದೆ.
ರೋಹಿತ್ ಶರ್ಮ ಅವರಿಗೆ ಓಪನಿಂಗ್ ಜತೆಗಾರರು ಯಾರು ಎಂಬುದು ಭಾರತದ ಮುಖ್ಯ ಪ್ರಶ್ನೆ. ಇಲ್ಲಿ ಕೆ.ಎಲ್. ರಾಹುಲ್ ಮತ್ತು ಇಶಾನ್ ಕಿಶನ್ ರೇಸ್‌ನಲ್ಲಿದ್ದಾರೆ. ಆದರೆ ಐಪಿಎಲ್‌ನಲ್ಲಿ 30 ಸಿಕ್ಸರ್ ಸೇರಿದಂತೆ 626 ರನ್ ಪೇರಿಸಿರುವ ರಾಹುಲ್ ಅವರೇ ಮೊದಲ ಆಯ್ಕೆ ಆಗುವುದು ನಿಶ್ಚಿತ. ಆಗ ಇಶಾನ್ ಕಿಶನ್ 6ನೇ ಕ್ರಮಾಂಕದಲ್ಲಿ ಆಡಲಿಳಿಯಬಹುದು. ಕಿಶನ್ ಕೀಪರ್ ಕೂಡ ಹೌದು. ಆದರೆ ಇಲ್ಲಿ ರಿಷಭ್ ಪಂತ್ ಅವರೇ ಈ ಜವಾಬ್ದಾರಿ ನಿಭಾಯಿಸಲಿದ್ದಾರೆ.
Related Articles
Advertisement
ಇದನ್ನೂ ಓದಿ:ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಮೊದಲ ಪಂದ್ಯ: ಒಮಾನ್‌ಗೆ 10 ವಿಕೆಟ್ ಭರ್ಜರಿ ಗೆಲುವು
ವೇಗದ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ ತಂಡದ ಕೀ ಬೌಲರ್ ಆಗಿದ್ದಾರೆ. ಭುವನೇಶ್ವರ್ ಕುಮಾರ್ ಕೂಡ ಕ್ಲಿಕ್ ಆಗಬಲ್ಲರೆಂಬ ವಿಶ್ವಾಸವಿದೆ. ಶಾದೂìಲ್ ಠಾಕೂರ್ ಸೇರ್ಪಡೆಯಿಂದ ಆಲ್‌ರೌಂಡ್ ವಿಭಾಗ ಗಟ್ಟಿಗೊಂಡಿದೆ.
ಇಂಗ್ಲೆಂಡಿಗೆ ನಾಯಕ ಇಯಾನ್ ಮಾರ್ಗನ್ ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಚಿಂತೆ ಇದೆ. ಉಳಿದಂತೆ ಬಟ್ಲರ್, ಬೇರ್‌ಸ್ಟೊ, ರಾಯ್, ಲಿವಿಂಗ್‌ಸ್ಟೋನ್, ಅಲಿ ಮೊದಲಾದ ಟಿ20 ಸ್ಪೆಷಲಿಸ್ಟ್‌ಗಳು ತಂಡದಲ್ಲಿದ್ದಾರೆ.
ಕೊಹ್ಲಿಗಾಗಿ ಕಪ್ ಗೆಲ್ಲಿ: ರೈನಾಹೊಸದಿಲ್ಲಿ: ವಿರಾಟ್ ಕೊಹ್ಲಿ ಅವರ ಟಿ20 ನಾಯಕತ್ವ ವಿದಾಯವನ್ನು ಸ್ಮರಣೀಯಗೊಳಿಸುವ ಉದ್ದೇಶದಿಂದ ಟೀಮ್ ಇಂಡಿಯಾ ಮುಂದಿನ ಟಿ20 ವಿಶ್ವಕಪ್ ಗೆಲ್ಲಬೇಕಿದೆ ಎಂಬುದಾಗಿ ಮಾಜಿ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ. “ಭಾರತ ತಂಡಕ್ಕೆ ನನ್ನ ಸಂದೇಶ ಒಂದೇ, ಡೂ ಇಟ್ ಫಾರ್ ವಿರಾಟ್ ಕೊಹ್ಲಿ’ ಎಂಬುದಾಗಿ ರೈನಾ ತಮ್ಮ ಐಸಿಸಿ ಕಾಲಂನಲ್ಲಿ ಬರೆದಿದ್ದಾರೆ. “ವಿರಾಟ್ ಕೊಹ್ಲಿ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಕೊನೆಯ ಸಲ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ನಾವೆಲ್ಲರೂ ಕೊಹ್ಲಿ ಹಿಂದಿದ್ದೇವೆ ಎಂಬ ರೀತಿಯಲ್ಲಿ ನಂಬಿಕೆ ಮೂಡುವಂತೆ ಆಡಿ ತಂಡವನ್ನು ಗೆಲ್ಲಿಸಬೇಕಿದೆ. ಭಾರತ ತಂಡದಲ್ಲಿ ಸಾಮರ್ಥ್ಯವಿದೆ, ಇದನ್ನು ಅಂಗಳದಲ್ಲಿ ಸಾಕಾರಗೊಳಿಸಬೇಕಿದೆ’ ಎಂದು ರೈನಾ ಹೇಳಿದರು. “ಯುಎಇಯ ಕಠಿನ ಟ್ರ್ಯಾಕ್‌ಗಳಲ್ಲಿ ಬ್ಯಾಟಿಂಗೇ ದೊಡ್ಡ ಸವಾಲು. ಹೀಗಾಗಿ ಟಾಪ್-3 ಆಟಗಾರರಾದ ರೋಹಿತ್, ರಾಹುಲ್ ಮತ್ತು ಕೊಹ್ಲಿ ಅವರ ಸಾಮರ್ಥ್ಯವನ್ನು ಭಾರತ ಅವಲಂಬಿಸಿದೆ’ ಎಂದರು.