Advertisement
ಹೈಕ ಭಾಗದ ಶೈಕ್ಷಣಿಕ ಅಭಿವೃದ್ಧಿ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಶರಣಬಸವ ವಿವಿ ವರ್ಷದೊಳಗೆ 22 ವಿಭಾಗ ಪ್ರಾರಂಭಿಸಿರುವುದು ಶೈಕ್ಷಣಿಕ ಸಾಧನೆಗೆ ಹಿಡಿದ ಕನ್ನಡಿಯಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ಕೃತಿಗಳ ಬಿಡುಗಡೆ: ವಿವಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಶರಣಬಸವ ವಿಶ್ವವಿದ್ಯಾಲಯದಿಂದ ಪ್ರಥಮ ಸಂಶೋಧನಾ ಜರ್ನಲ್ ಆಗಿ ಪ್ರಕಟಗೊಳ್ಳುತ್ತಿರುವ ಇಂಟರ್‌ನ್ಯಾಷನಲ್ ಮಲ್ಟಿ ಡಿಸಿಪ್ಲೇನರಿ ರಿಸರ್ಚ್ ಜರ್ನಲ್, ಡಾ| ಶಿವರಾಜ ಶಾಸ್ತ್ರೀ ಹೇರೂರ, ಡಾ| ಸಾರಿಕಾದೇವಿ ಕಾಳಗಿ, ನಾನಾಸಾಹೇಬ ಸಂಪಾದಕತ್ವದಲ್ಲಿ ರಚನೆಯಾಗಿರುವ ಶರಣಬಸವೇಶ್ವರ ಮಹಾದಾಸೋಹ ಸಂಪದ ಕೃತಿಗಳನ್ನು ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಬಿಡುಗಡೆ ಮಾಡುವರು ಎಂದರು.
ಜನ್ಮ ದಿನ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರ 53ನೇ ಜನ್ಮದಿನವನ್ನು ಇದೆ ವೇಳೆ ಆಚರಿಸಲಾಗುತ್ತಿದೆ. ಪೂಜ್ಯ ಡಾ| ಅಪ್ಪ ಹಾಗೂ ಇತರ ಗಣ್ಯರು ಸನ್ಮಾನಿಸಲಿದ್ದಾರೆ ಎಂದರು. ಶಾಸಕರಿಗೆ ಸನ್ಮಾನ: ವಿಧಾನಸಭೆ ಹಾಗೂ ವಿಧಾನ ಪರಿಷತ್ ಗೆ ಆಯ್ಕೆಯಾದ ಶಾಸಕರಾದ ಎಂ.ವೈ. ಪಾಟೀಲ, ಸುಭಾಷ ಆರ್. ಗುತ್ತೇದಾರ, ಡಾ| ಉಮೇಶ ಜಾಧವ, ದತ್ತಾತ್ರೇಯ ಪಾಟೀಲ ರೇವೂರ, ಖನೀಜಾ ಫಾತೀಮಾ, ಡಾ| ಅಜಯಸಿಂಗ್, ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮೂಡ, ಡಾ| ಚಂದ್ರಶೇಖರ ಪಾಟೀಲ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಡಾ| ನಿಷ್ಠಿ ತಿಳಿಸಿದರು. ಶರಣಬಸವ ವಿವಿ ಕುಲಾಧಿಪತಿ ಡಾ| ಶರಣಬಸವಪ್ಪ ಅಪ್ಪ, ಕುಲಸಚಿವರಾದ ಡಾ| ವಿ. ಡಿ. ಮೈತ್ರಿ, ಡಾ| ಅನೀಲಕುಮಾರ ಬಿಡವೆ, ಡೀನ್ ಡಾ| ಲಿಂಗರಾಜ ಶಾಸ್ತ್ರೀ ಹಾಜರಿದ್ದರು. ಶರಣಬಸವ ವಿಶ್ವವಿದ್ಯಾಲಯಪ್ರವೇಶಾತಿಗೆ ಹೆಚ್ಚಿದ ಬೇಡಿಕೆ ಕಲಬುರಗಿ: ಗುಣಮಟ್ಟದ ಶೈಕ್ಷಣಿಕ ವಾತಾವರಣವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡ ಪರಿಣಾಮ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥೆಯಲ್ಲಿ ಪ್ರವೇಶಾತಿಗೆ ಬೇಡಿಕೆ ಹೆಚ್ಚಳವಾಗಲು ಕಾರಣವಾಗಿದೆ. ಕಳೆದ ವರ್ಷವಷ್ಟೇ ಪ್ರಾರಂಭವಾಗಿರುವ ಶರಣಬಸವ ವಿವಿಯಲ್ಲೂ ಎಲ್ಲ ಕೋರ್ಸುಗಳ ಪ್ರವೇಶಾತಿಗೆ ನೂಕು ನುಗ್ಗಲು ಉಂಟಾಗಿದೆ ಎಂದು ವಿವಿ ಕುಲಾಧಿಪತಿ ಹಾಗೂ ಶರಬಸವೇಶ್ವರ ಮಹಾದಾಸೋಹ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ನುಡಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ವಿವಿಗೆ ಅನುಮತಿ ಸಿಕ್ಕ ನಂತರ ಪ್ರವೇಶಾತಿಗೆ ಸ್ವಲ್ಪ ಸಮಯ ವಿಳಂಬವಾಗಿ ಹಸಿರು ನಿಶಾನೆ ದೊರಕಿತಾದರೂ ವಿವಿಧ ಸ್ನಾತಕೋತ್ತರ ಕೋರ್ಸುಗಳಲ್ಲಿ ಕಳೆದ ವರ್ಷ 450 ಅಭ್ಯರ್ಥಿಗಳು ಪ್ರವೇಶಾತಿ ಪಡೆದಿದ್ದರು. ಈ ವರ್ಷ ಈಗಾಗಲೇ 700 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಈ ಸಂಖ್ಯೆ 1100ಕ್ಕೆ ನಿಶ್ಚಿತವಾಗಿ ಏರಲಿದೆ ಎಂದರು. ಕಲಬುರಗಿ ಈಗ ಶೈಕ್ಷಣಿಕ ಹಬ್ ಆಗಿ ಹೊರ ಹೊಮ್ಮಿದೆ. ಇಲ್ಲಿರುವ ಐದು ವಿಶ್ವವಿದ್ಯಾಲಯಗಳು, ನಾಲ್ಕು ವೈದ್ಯಕೀಯ ಕಾಲೇಜುಗಳಲ್ಲದೇ ಹತ್ತಾರು ಇಂಜಿನಿಯರಿಂಗ್ ಕಾಲೇಜುಗಳು ಇದಕ್ಕೆ ಕಾರಣವಾಗಿದೆ. ಅದರಲ್ಲೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ 25 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಒಟ್ಟಾರೆ ಕಲಬುರಗಿ ಮಹಾನಗರದಲ್ಲಿ ಮೂರು ಲಕ್ಷ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವುದು ನಿಜಕ್ಕೂ ದೊಡ್ಡದ್ದೇ. ಇದನ್ನು ನೋಡಿದರೆ ಈ ಭಾಗ ಹಿಂದುಳಿದಿದೆ ಎನ್ನಲಿಕ್ಕಾಗದು ಎಂದರು. ವರ್ಷಂಪ್ರತಿ ಸಂಸ್ಥೆಯಡಿ ಶಿಕ್ಷಣ ಪಡೆದ 250 ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್ ಪ್ರವೇಶಾತಿ ಪಡೆಯುತ್ತಿದ್ದಾರೆ. ಇದನ್ನು ನೋಡಿ ಕೆಲವರು, ಯಾಕ್ರೀ ಅಪ್ಪಾ ನಿವೇ ಒಂದು ವೈದ್ಯಕೀಯ ಕಾಲೇಜು ತೆರೆಯಬಾರದು ಎಂದು ಕೇಳುತ್ತಾರೆ. ತಾವು ವೈದ್ಯಕೀಯ ಕಾಲೇಜು ತೆರೆದರೆ ಇಲ್ಲೇ ವಿದ್ಯಾರ್ಥಿಗಳು ಓದಬಹುದು. ಆದರೆ ನೂರಾರು ಕಾಲೇಜುಗಳಲ್ಲಿ ತಮ್ಮ ಸಂಸ್ಥೆ ವಿದ್ಯಾರ್ಥಿಗಳು ಓದುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಅಸಮಾಧಾನ: ಕೇವಲ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಮಾತ್ರ ಉಚಿತ ಬಸ್ ನೀಡಿರುವ ಸರ್ಕಾರದ ಕ್ರಮಕ್ಕೆ ಕುಲಾಧಿಪತಿ ಡಾ| ಶರಣಬಸವಪ್ಪ ಅಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಬಹಳಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಖಾಸಗಿ ಮತ್ತು ಅನುದಾನಿತ ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸರ್ಕಾರದ ಈ ಕ್ರಮದಿಂದ ಮತ್ತೂಂದು ವಿಭಿನ್ನ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಖಾಸಗಿ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡವರ ಮಕ್ಕಳ ಮೇಲೆ ಈ ನಿರ್ಧಾರ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.