Advertisement
ಮೊದಲೆರಡು ಸ್ಥಾನಗಳಲ್ಲಿ ಪಲ್ಲಟವೇನಾದರೂ ಸಂಭವಿಸೀತೇ ಎಂಬ ಕಾರಣಕ್ಕಾಗಿ ಈ ಪಂದ್ಯಗಳು ಕುತೂಹಲ ಕೆರಳಿಸಿವೆ.
ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದರೂ ಕೊಹ್ಲಿ ಪಡೆ ಒತ್ತಡ ಮುಕ್ತವೇನಲ್ಲ. ಬಿಗ್ ಸೆಮಿಫೈನಲ್‌ಗೂ ಮುನ್ನ ತನ್ನ ಮಧ್ಯಮ ಕ್ರಮಾಂಕದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಜರೂರತು ತಂಡದ ಮೇಲಿದೆ. ಇದಕ್ಕೆ ಲಂಕಾ ಪಂದ್ಯ ವೇದಿಕೆ ಒದಗಿಸಲಿದೆ.
Related Articles
Advertisement
ಧೋನಿ ವರ್ಸಸ್ ಧನಂಜಯರಿಷಭ್ ಪಂತ್ ಸೇರ್ಪಡೆಯಿಂದ ಮಧ್ಯಮ ಕ್ರಮಾಂಕಕ್ಕೆ ತುಸು ಬಲ ಬಂದಿದೆಯಾದರೂ ಅನುಭವಿ ಧೋನಿ ಫಾರ್ಮ್, ಅವರ ನಿಧಾನ ಗತಿಯ ಆಟ ಚಿಂತೆಯನ್ನು ತಂದೊಡ್ಡಿದೆ. ಅಂತಿಮ 10 ಓವರ್‌ಗಳಲ್ಲಿ ಭಾರತ ತೀವ್ರ ರನ್ ಬರಗಾಲ ಅನುಭವಿಸುತ್ತಿದೆ. ನಾಕೌಟ್ ಹಂತದಲ್ಲಿ ಇದು ಬಹಳ ದುಬಾರಿಯಾಗಿ ಕಾಡುವ ಅಪಾಯವಿದೆ. ಶ್ರೀಲಂಕಾದ ಆಫ್ ಸ್ಪಿನ್ನರ್ ಧನಂಜಯ ಡಿ ಸಿಲ್ವ ಅತ್ಯಂತ ಪರಿಣಾಮಕಾರಿ ಬೌಲಿಂಗ್ ಸಂಘಟಿಸುತ್ತಿದ್ದು, ಇವರು “ಮಿಡ್ಲ್ ಓವರ್’ನಲ್ಲಿ ದಾಳಿಗಿಳಿಯುವ ಸಾಧ್ಯತೆ ಹೆಚ್ಚು. ಆಗ ಧೋನಿ ಚಡಪಡಿಸುವ ಸಾಧ್ಯತೆ ಇದೆ. ಈ ಕೂಟದಲ್ಲಿ ಸ್ಪಿನ್ನರ್‌ಗಳಿಂದ 81 ಎಸೆತ ಎದುರಿಸಿರುವ ಧೋನಿ, ಕೇವಲ 47 ರನ್ ಗಳಿಸಿದ್ದಾರೆ. ಧೋನಿಯ ಈ ಸಮಸ್ಯೆಯನ್ನು ಮನಗಂಡು ಎಡಗೈ ಸ್ಪಿನ್ನರ್ ಮಿಲಿಂದ ಸಿರಿವರ್ಧನ ಅವರನ್ನು ಲಂಕಾ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಲಸಿತ ಮಾಲಿಂಗ ಅವರ ಯಾರ್ಕರ್‌ಗಳೂ ಡೆತ್ ಓವರ್‌ಗಳಲ್ಲಿ ಭಾರತಕ್ಕೆ ಸಮಸ್ಯೆಯಾಗಿ ಕಾಡಲೂಬಹುದು. ತಮ್ಮ ಕೊನೆಯ ವಿಶ್ವಕಪ್ ಪಂದ್ಯವನ್ನು ಮಾಲಿಂಗ ಸ್ಮರಣೀಯಗೊಳಿಸಲು ಪ್ರಯತ್ನಿಸುವುದು ಖಂಡಿತ. ಜಡೇಜಾಗೆ ಸಿಕ್ಕೀತೇ ಅವಕಾಶ?
ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಆಡಿಸಿ ನೋಡಿದರೂ ಪ್ರಯೋಜನವಾಗಲಿಲ್ಲ. “ಲಾಸ್ಟ್ ಚಾನ್ಸ್’ ಎಂಬಂತೆ ಆಲ್‌ರೌಂಡರ್ ರವೀಂದ್ರ ಜಡೇಜ ಅವರನ್ನು ಆಡಿಸುವುದು ದಿಟ್ಟ ಹೆಜ್ಜೆಯಾದೀತು. ಲಂಕಾ ಸರದಿಯಲ್ಲಿ ಸಾಕಷ್ಟು ಮಂದಿ ಎಡಗೈ ಆಟಗಾರರಿರುವುದೂ ಇದಕ್ಕೆ ಕಾರಣ.
ಬದಲಿ ಆಟಗಾರ ಮಾಯಾಂಕ್ ಅಗರ್ವಾಲ್ ಈಗಾಗಲೇ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಆಡುವ ಬಳಗ ಪ್ರವೇಶಿಸುವುದು ಅಸಂಭವ. ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್, ಎಂ. ಎಸ್. ಧೋನಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಚಹಲ್, ಜಸ್‌ಪ್ರೀತ್ ಬುಮ್ರಾ. ಶ್ರೀಲಂಕಾ: ದಿಮುತ್ ಕರುಣರತ್ನೆ (ನಾಯಕ), ಕುಸಲ್ ಪೆರೆರ, ಆವಿಷ್ಕ ಫೆರ್ನಾಂಡೊ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವ, ಜೀವನ್ ಮೆಂಡಿಸ್, ತಿಸರ ಪೆರೆರ, ಇಸುರು ಉದಾನ, ಸುರಂಗ ಲಕ್ಮಲ್, ಲಸಿತ ಮಾಲಿಂಗ. ರೋಹಿತ್ ಮುಂದೆ ಇನಷ್ಟು ದಾಖಲೆಗಳು
ಪ್ರಸಕ್ತ ವಿಶ್ವಕಪ್‌ನಲ್ಲಿ ಪ್ರಚಂಡ ಫಾರ್ಮ್ನಲ್ಲಿರುವ ರೋಹಿತ್ ಶರ್ಮ ಈಗಾಗಲೇ 4 ಶತಕ ಬಾರಿಸಿ ಎದುರಾಳಿಗಳಿಗೆ ಸಿಂಹಸ್ವಪ್ನರಾಗಿದ್ದಾರೆ. 96.96ರ ಸರಾಸರಿಯಲ್ಲಿ 544 ರನ್ ಪೇರಿಸಿದ್ದು ಇವರ ಸಾಧನೆ. ಈ ಕೂಟದಲ್ಲಿ ಗರಿಷ್ಠ 3 ಪಂದ್ಯಗಳನ್ನು ಆಡುವ ಅವಕಾಶ ಹೊಂದಿರುವ ಅವರ ಮುಂದೆ ಇನ್ನಷ್ಟು ದಾಖಲೆಗಳು ಕಾದು ಕುಳಿತಿವೆ. ಅತ್ಯಧಿಕ 5 ಶತಕ
ಇನ್ನೊಮ್ಮೆ ಮೂರಂಕೆಯ ಗಡಿ ದಾಟಿದರೆ ವಿಶ್ವಕಪ್ ಕೂಟವೊಂದರಲ್ಲಿ ಅತೀ ಹೆಚ್ಚು 5 ಶತಕ ಬಾರಿಸಿದ ದಾಖಲೆ ರೋಹಿತ್ ಶರ್ಮ ಅವರದಾಗುತ್ತದೆ. ಕುಮಾರ ಸಂಗಕ್ಕರ ಕೂಡ 4 ಶತಕ ಬಾರಿಸಿದ್ದಾರೆ (2015). ತಮ್ಮ 3 ದ್ವಿಶತಕಗಳಲ್ಲಿ ಎರಡನ್ನು ಶ್ರೀಲಂಕಾ ವಿರುದ್ಧವೇ ಸಿಡಿಸಿರುವ ರೋಹಿತ್, ಶನಿವಾರ ಇಂಥದೇ ಕಮಾಲ್ ಮಾಡಿಯಾರೇ ಎಂಬ ಕುತೂಹಲವೂ ಇದೆ. ಕೂಟದಲ್ಲಿ ಗರಿಷ್ಠ ರನ್
ವಿಶ್ವಕಪ್ ಕೂಟವೊಂದರಲ್ಲಿ ಅತ್ಯಧಿಕ 673 ರನ್ ಬಾರಿಸಿದ ತೆಂಡುಲ್ಕರ್ ದಾಖಲೆಯನ್ನು ಮುರಿಯುವ ಅವಕಾಶವೂ ರೋಹಿತ್ ಮುಂದಿದೆ. ಇದಕ್ಕಾಗಿ ಅವರು 130 ರನ್ ಗಳಿಸಿದರೆ ಸಾಕು. ಸದ್ಯ ಈ ಯಾದಿಯಲ್ಲಿ ರೋಹಿತ್ 5ನೇ ಸ್ಥಾನದಲ್ಲಿ ದ್ದಾರೆ. ಇವರಿಗಿಂತ ಮುಂದಿರುವ ಉಳಿದ ಮೂವರೆಂದರೆ ಹೇಡನ್ (659), ಜಯವರ್ಧನೆ (548), ಗಪ್ಟಿಲ್ (547). ವರ್ಲ್ಡ್ಕಪ್ ಗ್ರೂಪ್/ಲೀಗ್ ಹಂತದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ದಾಖಲೆಯೂ ರೋಹಿತ್‌ಗೆ ಒಲಿಯಬಹುದು. ಸದ್ಯ ಇದು ತೆಂಡುಲ್ಕರ್ ಹೆಸರಲ್ಲಿದೆ (586). ಲಂಕಾ ಎದುರು 43 ರನ್ ಮಾಡಿದರೆ ರೋಹಿತ್ ಈ ದಾಖಲೆಯ ಒಡೆಯನಾಗುತ್ತಾರೆ.