Advertisement

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ; ಮೇ 31ಕ್ಕೆ ಶಾಲಾರಂಭೋತ್ಸವ

11:26 PM May 28, 2024 | Team Udayavani |

ಉಡುಪಿ/ಮಂಗಳೂರು: ಪ್ರಸಕ್ತ ಶಾಲಿನ ಶೈಕ್ಷಣಿಕ ವರ್ಷವು ಮೇ 29 ರಿಂದ ಆರಂಭಗೊಳ್ಳಲಿದೆ. ಈಗಾಗಲೇ ಪ್ರವೇಶಾತಿ ಪ್ರಕ್ರಿಯೆಗಳು ಆರಂಭಗೊಂಡಿದ್ದು ಬುಧವಾರದಿಂದ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಶುರುವಾಗಲಿವೆ.

Advertisement

ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೌಲ ಸೌಕರ್ಯ ಕಲ್ಪಿಸುವ ಮತ್ತು ಪೀಠೊಪಕರಣಗಳನ್ನು ಸರಿಪಡಿಸುವ ಕಾರ್ಯಗಳು ನಡೆದಿವೆ. ಶಾಲಾವರಣದ ಸ್ವಚ್ಛತೆ, ವಿದ್ಯಾರ್ಥಿಗಳನ್ನು ಆಕರ್ಷಿಸಲು ಬೇಕಾದ ಸಿದ್ಧತೆಯಾಗಿದೆ. ಕೆಲವು ಶಾಲೆಗಳಿಂದ ಹೊಸ ಕೊಠಡಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

ಮಳೆಗಾಲಕ್ಕೆ ಮಕ್ಕಳ ಸುರಕ್ಷತೆಗೂ ಬೇಕಾದ ಕಾರ್ಯಗಳು ಕೂಡಲೇ ಆರಂಭವಾಗಲಿದೆ. ಕೆಲವೆಡೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು, ಕಾಮಗಾರಿಗಳನ್ನು ನಡೆಸಲಾಗಿದೆ.

ಮೇ 31ಕ್ಕೆ ಶಾಲಾರಂಭೋತ್ಸವ
ಶೈಕ್ಷಣಿಕ ತರಗತಿಗಳು ಮೇ 29 ರಿಂದ ಆರಂಭವಾದರೂ ಮೇ 31ರಂದು ಎಲ್ಲ ಶಾಲೆಗಳಲ್ಲೂ ಪ್ರಾರಂಭೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ. ಶಾಲೆಯ ಮುಖ್ಯದ್ವಾರಕ್ಕೆ ತಳಿರು ತೋರಣಗಳನ್ನು ಕಟ್ಟಿ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಆಹ್ವಾನಿಸಲಾಗುತ್ತದೆ. ಊರಿನ ಹಿರಿಯರು, ಗಣ್ಯರು, ದಾನಿಗಳನ್ನು, ಶಿಕ್ಷಣ ಪ್ರೇಮಿಗಳನ್ನು ಕರೆಸಿ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಲು ಜಿಲ್ಲಾ ಕಚೇರಿಯು ಶಾಲೆಗಳಿಗೆ ಸೂಚಿಸಲಾಗಿದೆ. ಹೀಗಾಗಿ ಎಲ್ಲೆಡೆ ಇದಕ್ಕೆ ಅಗತ್ಯ ಸಿದ್ಧತೆ ನಡೆಸಲಾಗುತ್ತಿದೆ.

ಮನೆ ಮನೆಗೆ ಶಿಕ್ಷಕರು
ಸರಕಾರಿ ಶಾಲೆಗಳಲ್ಲಿ ಜೂನ್‌ ತಿಂಗಳಲ್ಲೂ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಈ ವೇಳೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ತಮ್ಮ ವ್ಯಾಪ್ತಿಯ ಮನೆ ಗಳಿಗೆ ಭೇಟಿ ನೀಡಿ, ಹೊಸದಾಗಿ ದಾಖ ಲಾಗಬಹುದಾದ ವಿದ್ಯಾರ್ಥಿಗಳನ್ನು ಗುರುತಿಸಿ ದಾಖಲಿಸಿಕೊಳ್ಳಲು ಪಾಲಕ, ಪೋಷಕರ ಮನವೊಲಿಸುವರು.

Advertisement

ಸೌಲಭ್ಯ ವಿತರಣೆ
ಸರಕಾರಿ ಶಾಲೆಗೆ ಹೊಸದಾಗಿ ದಾಖಲಾದ ಹಾಗೂ ಈಗಾಗಲೇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಇತ್ಯಾದಿ ವಿತರಿಸಲಾಗುತ್ತದೆ. ಮೊದಲ ದಿನ ಸೌಲಭ್ಯದ ಲಭ್ಯತೆಯ ಆಧಾರದಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿತರಣೆ ಮಾಡಿದ್ದಾರೆ. ಬಿಸಿಯೂಟ, ಕ್ಷೀರಾಭಾಗ್ಯದ ಹಾಲು ಮೊದಲ ದಿನದಿಂದಲೇ ಆರಂಭವಾಗುತ್ತದೆ. ಮೊದಲ ದಿನ ಶಾಲೆಯಲ್ಲಿ ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆ, ಪರಿಚಯ ಇತ್ಯಾದಿಗಳಿಗೆ ಆದ್ಯತೆ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next