Advertisement
3 ಬಾರಿಯ ಚಾಂಪಿಯನ್ ಭಾರತ, ಇಷ್ಟೇ ಸಲ ಪ್ರಶಸ್ತಿ ಎತ್ತಿದ ಆಸ್ಟ್ರೇಲಿಯವನ್ನು ಮೊದಲ ಪಂದ್ಯದಲ್ಲೇ ಮಣಿಸಿ ಇಡೀ ಕೂಟಕ್ಕಾಗುವಷ್ಟು ಆತ್ಮವಿಶ್ವಾಸವನ್ನು ತುಂಬಿಕೊಂಡಿದೆ. ಹೀಗಾಗಿ ಪಪುವಾ ನ್ಯೂ ಗಿನಿಯನ್ನು ಭಾರೀ ಅಂತರದಿಂದ ಮಣಿಸುವುದು ಭಾರತದ ಕಿರಿಯರ ಯೋಜನೆ. ಇನ್ನೊಂದೆಡೆ ನ್ಯೂ ಗಿನಿ ತನ್ನ ಮೊದಲ ಪಂದ್ಯದಲ್ಲಿ ಜಿಂಬಾಬ್ವೆಗೆ ಶರಣಾಗಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಶಾ ಬಳಗ ಜಿಂಬಾಬ್ವೆಯನ್ನು ಎದುರಿಸಲಿದೆ. ಅಜೇಯವಾಗಿ ನಾಕೌಟ್ ಪ್ರವೇಶಿಸುವ ದ್ರಾವಿಡ್ ಹುಡುಗರ ಯೋಜನೆ ಇಲ್ಲಿ ಸಾಕಾರಗೊಳ್ಳುವ ಎಲ್ಲ ಸಾಧ್ಯತೆ ಇದೆ.
ಆಸ್ಟ್ರೇಲಿಯ ಎದುರಿನ ಮೊದಲ ಪಂದ್ಯ ಭಾರತದ ಯೋಜನೆಯಂತೆಯೇ ಸಾಗಿದ್ದನ್ನು ಮರೆಯುವಂತಿಲ್ಲ. ಪೃಥ್ವಿ ಶಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕ್ಷಣದಿಂದ ಎಲ್ಲ ಅಂಶಗಳೂ ಭಾರತಕ್ಕೆ ಪೂರಕವಾಗಿಯೇ ಪರಿಣಮಿಸಿದವು. ಆಕ್ರಮಣಕಾರಿ ಆಟದ ಮೂಲಕ ತಂಡದ ಮೊತ್ತವನ್ನು ಮುನ್ನೂರರಾಚೆ ವಿಸ್ತರಿಸಿದ್ದು, ಬಳಿಕ ಸಾಂ ಕ ಬೌಲಿಂಗ್ ದಾಳಿ ನಡೆಸಿ ಕಾಂಗರೂ ಮೇಲೆ ಮುಗಿಬಿದ್ದದ್ದೆಲ್ಲ ಕಿರಿಯರ ಯಶಸ್ವಿ ಕಾರ್ಯತಂತ್ರಕ್ಕೆ ಉತ್ತಮಮ ಉದಾಹರಣೆ. ಅಂಡರ್-19 ಏಶ್ಯ ಕಪ್ ಕ್ರಿಕೆಟ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಭಾರತ, ವಿಶ್ವಕಪ್‌ನಲ್ಲಿ ಇದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಯೋಜನೆ ರೂಪಿಸಿರುವುದರಲ್ಲಿ ಅನುಮಾನವಿಲ್ಲ. ಪೃಥ್ವಿ ಶಾ, ಮನೋಜ್ ಕಾಲಾ, ಶುಭಂ ಗಿಲ್ ಅವರ ಅಮೋಘ ಬ್ಯಾಟಿಂಗ್ ಭಾರತದ ಭಾರೀ ಮೊತ್ತದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಕಮಲೇಶ್ ನಾಗರ್ಕೋಟಿ, ಶಿವಂ ಮಾವಿ ಘಾತಕ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು. ಅದರಲ್ಲೂ ರಾಜಸ್ಥಾನದ ನಾಗರ್ಕೋಟಿ ಅವರ 150 ಕಿ.ಮೀ. ವೇಗದ ಎಸೆತಗಳು, ಆ ಶೈಲಿ ಎಲ್ಲರನ್ನೂ ಮೋಡಿ ಮಾಡಿದ್ದವು. ಇವರ ದಾಳಿಯನ್ನು ಮೆಟ್ಟಿ ನಿಲ್ಲುವುದು ಪಪುವಾ ನ್ಯೂ ಗಿನಿ ತಂಡದ ಅನನುಭವಿ ಬ್ಯಾಟ್ಸ್‌ಮನ್‌ಗಳಿಗೆ ಸುಲಭವಲ್ಲ.
Related Articles
ಪಪುವಾ ನ್ಯೂ ಗಿನಿ ಆಡುತ್ತಿರುವ 8ನೇ ವಿಶ್ವಕಪ್ ಪಂದ್ಯಾವಳಿ ಇದಾಗಿದೆ. 2014ರ ಬಳಿಕ ಮೊದಲ ಸಲ ಆಡುತ್ತಿದೆ. ಸಮೋವಾದಲ್ಲಿ ನಡೆದ “ಈಸ್ಟ್ ಏಶ್ಯ ಪೆಸಿಫಿಕ್’ ಅರ್ಹತಾ ಸುತ್ತಿನ ಸ್ಪರ್ಧೆಗಳಲ್ಲಿ ಅಜೇಯವಾಗಿ ಉಳಿದ ಹೆಗ್ಗಳಿಕೆ ನ್ಯೂ ಗಿನಿಯದ್ದು. ಉತ್ತಮ ಹೋರಾಟ ಹಾಗೂ ಪರಿಣಾಮಕಾರಿ ಪ್ರದರ್ಶನದಿಂದ ಅದು ಗಮನ ಸೆಳೆದಿತ್ತು. ಆದರೆ ಬಲಾಡ್ಯ ತಂಡಗಳನ್ನು ಹೊಂದಿರುವ ವಿಶ್ವಕಪ್‌ನಂಥ ಪ್ರಧಾನ ಸುತ್ತಿನಲ್ಲಿ ಸ್ಪರ್ಧಿಸುವುದು ಸುಲಭವಲ್ಲ. ಈ ಅರಿವನ್ನು ಅದು ಹೊಂದಿದೆ. ಆದರೆ ಪಪುವಾ ನ್ಯೂ ಗಿನಿಯಂಥ ತಂಡಗಳಿಗೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಲಭಿಸಿದ್ದೇ ಪ್ರತಿಷ್ಠೆಯ ಸಂಗತಿ!
Advertisement
ಪಾಕಿಗೆ ಐರಿಷ್ ಸವಾಲುವಾಂಗರಿಯಲ್ಲಿ ನಡೆಯುವ ದಿನದ ಇನ್ನೊಂದು ಪಂದ್ಯ ದಲ್ಲಿ ಪಾಕಿಸ್ಥಾನ-ಅಯರ್‌ಲ್ಯಾಂಡ್ ಸೆಣಸಲಿವೆ. ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ಥಾನಕ್ಕೆ ಶರಣಾದ ಪಾಕಿಸ್ಥಾನಕ್ಕೆ ಇದು ಮಹತ್ವದ ಪಂದ್ಯ. ಅಯರ್‌ಲ್ಯಾಂಡ್ ಕೂಡ ಮೊದಲ ಮುಖಾ ಮುಖೀಯಲ್ಲಿ ಶ್ರೀಲಂಕಾ ವಿರುದ್ಧ ನಾಟಕೀಯ ಕುಸಿತ ಕಂಡು ಸೋಲನುಭವಿಸಿತ್ತು. ಹೀಗಾಗಿ ಮಂಗಳವಾರದ ಪಂದ್ಯದಲ್ಲಿ ಗೆಲ್ಲುವ ತಂಡಕ್ಕಷ್ಟೇ ಉಳಿಗಾಲ ಎಂಬುದು ಸದ್ಯದ ಸ್ಥಿತಿ.