Advertisement

ಇಂದು ಮಾನಸಿಕ ಆರೋಗ್ಯ ಶಿಬಿರ

11:21 AM Oct 10, 2017 | |

ಬೆಂಗಳೂರು: ವಿಶ್ವ ಮಾನಸಿಕ ಆರೋಗ್ಯದಿನಾಚರಣೆ ಅಂಗವಾಗಿ ಭಾರತೀಯ ಮನೋವೈದ್ಯಕೀಯ ಸಂಘ, ಇತರ ಸಂಘಟನೆಗಳ ಸಹಭಾಗಿತ್ವದಲ್ಲಿ ಮಂಗಳವಾರ (ಅ.9) ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮಾನಸಿಕ ಆರೋಗ್ಯ ಕುರಿತ ಶಿಬಿರ ಆಯೋಜಿಸಿದೆ. 

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಮನೋವೈದ್ಯಕೀಯ ಸಂಘಟನೆಯ ಕರ್ನಾಟಕ ಶಾಖೆಯ ಉಪಾಧ್ಯಕ್ಷ ಡಾ.ಚಂದ್ರಶೇಖರ್‌, ಮಾನಸಿಕ ಆರೋಗ್ಯದ ಬಗ್ಗೆ ತಿಳಿ ಹೇಳುವ ಕಾರ್ಯ ವಿಸ್ತೃತವಾಗಿ ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ನಗರದ ಹಲವೆಡೆ ಮಾನಸಿಕ ಆರೋಗ್ಯದ ಕುರಿತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. 

ಚಿತ್ರ ನಟಿ ಭಾವನ ಮಾತನಾಡಿ, ಮನುಷ್ಯ ಇಂದು ಒತ್ತಡ ಜೀವನದಲ್ಲಿ ಬದುಕುತ್ತಿದ್ದು, ಆತನ ಆಸೆಗಳು ಈಡೇರದಿದ್ದಾಗ ಮಾನಸಿಕ ಖನ್ನತೆಗೆ ಒಳಗಾಗುತ್ತಾನೆ. ಇಂತಹ ಒತ್ತಡಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಚ್ಚೆಚ್ಚು ಆರೋಗ್ಯ ಶಿಬಿರಗಳು ನಡೆಯಬೇಕು ಎಂದು ತಿಳಿಸಿದರು. ಈ ವೇಳೆ ಸ್ಪಂದನ ಹೆಲ್ತ್‌ ಕೇರ್‌ನ ನಿರ್ದೇಶಕ ಡಾ.ಮಹೇಶ್‌ ಗೌಡ,ಕುಟುಂಬ ಪರಿಹಾರ ಸಹಾಯ ವಾಣಿ ಸದಸ್ಯೆ ರಾಣಿ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next