Advertisement
ಆರಂಭದ ಮೂರು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ ಭಾರತ ಸರಣಿ ಗೆಲುವಿನ ಐತಿಹಾಸಿಕ ಕ್ಷಣವನ್ನು ಎದುರು ನೋಡುತ್ತಿದೆ. ಸರಣಿ ಗೆಲುವಿನ ಸಾಮರ್ಥ್ಯ ಕೂಡ ಭಾರತಕ್ಕೆ ಇದೆ. ಆದರೆ ಬಹಳಷ್ಟು ಎಚ್ಚರಿಕೆಯಿಂದ ಆಡುವುದು ಅತೀ ಮುಖ್ಯವಾಗಿದೆ. ಸರಣಿಯ ಇನ್ನುಳಿದ ಪಂದ್ಯಗಳಲ್ಲಿ ಒಂದನ್ನು ಗೆದ್ದರೆ ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಬಾರಿ ಸರಣಿ ಗೆಲ್ಲಲಿದೆ.
Related Articles
ಸರಣಿಯ ಎಲ್ಲ ಪಂದ್ಯಗಳನ್ನು ಗೆಲ್ಲಲು ಭಾರತ ಬಯಸುತ್ತದೆ ಎಂದು ಮೂರನೇ ಏಕದಿನದ ಮೊದಲು ಶಿಖರ್ ಧವನ್ ಹೇಳಿದ್ದರು. ಡ್ರೆಸ್ಸಿಂಗ್ ರೂಂನಲ್ಲಿಯೂ ಎಲ್ಲರೂ ಇದರ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಟೆಸ್ಟ್ ಸರಣಿಯಲ್ಲಿ ಮೂರನೇ ಪಂದ್ಯ ಗೆದ್ದ ಬಳಿಕ ಭಾರತ ಉತ್ತಮ ಆಟದ ಪ್ರದರ್ಶನ ನೀಡುತ್ತಿದೆ. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 34ನೇ ಶತಕ ಸಿಡಿಸುವ ಮೂಲಕ ಭಾರತಕ್ಕೆ ಇನ್ನೊಂದು ಗೆಲುವು ತಂದುಕೊಟ್ಟಿದ್ದರು. ಇನ್ನೆರಡು ಪಂದ್ಯಗಳು ಬಾಕಿ ಇರುವಾಗಲೇ ಸರಣಿ ಗೆಲ್ಲಲು ನಾವು ಕಠಿನ ಪ್ರಯತ್ನ ನಡೆಸಲಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ.
Advertisement
ಕೊಹ್ಲಿಯ ಜತೆ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರ ಅಮೋಘ ನಿರ್ವಹಣೆಯಿಂದ ಭಾರತ ಸರಣಿ ಗೆಲ್ಲಲು ಒಳ್ಳೆಯ ಅವಕಾಶವಿದೆ. ಈ ಸರಣಿಯಲ್ಲಿ ಕುಲದೀಪ್ 21 ಮತ್ತು ಚಾಹಲ್ 30 ವಿಕೆಟ್ ಪಡೆದಿದ್ದಾರೆ.
ಡಿ’ವಿಲಿಯರ್ ಸೇರ್ಪಡೆನ್ಯೂಲ್ಯಾಂಡ್ಸ್ನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರು ಐವರು ಸ್ಪಿನ್ನರ್‌ಗಳ ಜತೆ ಕಠಿನ ಅಭ್ಯಾಸ ನಡೆಸಿದರೂ ಅವರ ಬ್ಯಾಟಿಂಗ್ ಪ್ರಗತಿ ಕಾಣಲಿಲ್ಲ. ಆದರೆ ಡಿ’ವಿಲಿಯರ್ ತಂಡಕ್ಕೆ ಸೇರ್ಪಡೆಯಾಗಿದ್ದರಿಂದ ತಂಡದ ಬಲ ಹೆಚ್ಚಾಗಿದೆ. ಅವರ ಉಪಸ್ಥಿತಿಯಿಂದ ತಂಡ ಏನಾದರೂ ಮ್ಯಾಜಿಕ್ ಮಾಡುತ್ತದೆಯೇ ನೋಡಬೇಕಾಗಿದೆ. ಬೆರಳ ಗಾಯದಿಂದ ಡಿ’ವಿಲಿಯರ್ ಮೊದಲ ಮೂರು ಪಂದ್ಯಗಳಲ್ಲಿ ಆಡಿರಲಿಲ್ಲ. ಒಂದು ವೇಳೆ ಡಿ’ವಿಲಿಯರ್ ಆಡಿದರೆ ಅವರು ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಡ್ಯುಮಿನಿ ನಾಲ್ಕನೇ ಕ್ರಮಾಂಕಕ್ಕೆ ಜಾರಲಿದ್ದಾರೆ. ಮಿಲ್ಲರ್ ಅಥವಾ ಜೊಂಡೊ ಅವರಲ್ಲಿ ಒಬ್ಬರು ತಂಡದಿಂದ ಹೊರಗುಳಿಯಲಿದ್ದಾರೆ. ತಂಡವನ್ನು ಐಡೆನ್ ಮಾರ್ಕ್‌ರಮ್ ಮುನ್ನಡೆಸಲಿದ್ದಾರೆ. ಪಿಂಕ್ ಏಕದಿನ
ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಈ ರೋಗದಿಂದ ಬಳಲುತ್ತಿರುವ ಮಂದಿಗೆ ನೆರವಾಗಲು ಈ ಪಂದ್ಯವನ್ನು “ಪಿಂಕ್ ಏಕದಿನ’ವನ್ನಾಗಿ ಆಡಿಸಲಾಗುತ್ತದೆ. ಇಂತಹ ಪಂದ್ಯ 2011ರಲ್ಲಿ ಮೊದಲ ಬಾರಿ ಆಡಿಸಲಾಗಿತ್ತು. ಇದು ಆರನೇ ಪಂದ್ಯವಾಗಿದೆ. ಪಿಂಕ್ ಜರ್ಸಿಯಲ್ಲಿ ಆಡುತ್ತಿರುವ ವೇಳೆ ದಕ್ಷಿಣ ಆಫ್ರಿಕಾ ಒಮ್ಮೆಯೂ ಸೋತದ್ದಿಲ್ಲ. ಪಿಂಕ್ ಏಕದಿನದಲ್ಲಿ ಡಿ’ವಿಲಿಯರ್ ಉತ್ತಮ ನಿರ್ವಹಣೆ ದಾಖಲಿಸಿದ್ದಾರೆ. 2015ರಲ್ಲಿ ಅವರು ವೆಸ್ಟ್‌ಇಂಡೀಸ್ ವಿರುದ್ದ ಕೇವಲ 44 ಎಸೆತಗಳಲ್ಲಿ 149 ರನ್ ಹೊಡೆದಿದ್ದರು. 2013ರಲ್ಲಿ ಭಾರತ ಮೊದಲ ಬಾರಿ ಪಿಂಕ್ ಏಕದಿನದಲ್ಲಿ ಆಡಿದಾಗ ಡಿ’ವಿಲಿಯರ್ 47 ಎಸೆತಗಳಿಂದ 77 ರನ್ ಹೊಡೆದಿದ್ದರು. ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಎಂಎಸ್ ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಯುಜುವೇಂದ್ರ ಚಾಹಲ್ ದಕ್ಷಿಣ ಆಫ್ರಿಕಾ: ಹಾಶಿಮ್ ಆಮ್ಲ, ಐಡೆನ್ ಮಾರ್ಕ್‌ರಾಮ್ (ನಾಯಕ), ಜೀನ್‌ಪಾಲ್ ಡ್ಯುಮಿನಿ, ಖಾಯ ಝೊಂಡೊ, ಡೇವಿಡ್ ಮಿಲ್ಲರ್, ಫರ್ಹಾನ್ ಬೆಹರ್ಡಿನ್, ಹೆನ್ರಿಚ್ ಕ್ಲಾಸೆನ್, ಕ್ರಿಸ್ ಮೊರಿಸ್, ಕಾಗಿಸೊ ರಬಾಡ, ಮಾರ್ನೆ ಮಾರ್ಕೆಲ್, ಇಮ್ರಾನ್ ತಾಹಿರ್
ಪಂದ್ಯ ಆರಂಭ: ಸಂಜೆ 4.30
ಪ್ರಸಾರ: ಸೋನಿ ಟೆನ್ ನೆಟ್‌ವರ್ಕ್ ಪಿಚ್ ಹೀಗಿದೆ
ಟೆಸ್ಟ್ ಸರಣಿಗೆ ಸೂಕ್ತವಾದ ನ್ಯೂಲ್ಯಾಂಡ್ಸ್ ಪಿಚ್ ದಕ್ಷಿಣ ಆಫ್ರಿಕಾ ಪಾಲಿಗೆ ಶುಭದಾಯಕ ಎನಿಸಿಕೊಂಡಿದೆ. ಸೀಮ್ ಬೌಲರ್‌ಗಳಿಗೆ ಸ್ವಲ್ಪಮಟ್ಟಿಗೆ ನೆರವಾಗುವ ಸಾಧ್ಯತೆಯಿದ್ದರೂ ಈ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತಿದೆ. ಕಳೆದ ಆರು ಏಕದಿನ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಸರಾಸರಿಯಾಗಿ 300 ಪ್ಲಸ್ ರನ್ ಗಳಿಸಿದೆ. ದಿನವಿಡೀ ಬಿಸಿಲು ಇರಲಿದ್ದು ಮಧ್ಯಾಹ್ನ 30 ಡಿಗ್ರಿ ತಾಪಮಾನ ಇರಲಿದೆ.
ಅಂಕಿ ಅಂಶ
* ನ್ಯೂಲ್ಯಾಂಡ್ಸ್ ದಕ್ಷಿಣ ಆಫ್ರಿಕಾದ ನೆಚ್ಚಿನ ತಾಣವಾಗಿದೆ. ಇಲ್ಲಿ ಆಡಿದ 33 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ 28 ಪಂದ್ಯಗಳಲ್ಲಿ ಗೆದ್ದಿದೆ.
* ದ್ವಿಪಕ್ಷೀಯ ಏಕನಿರ ಸರಣಿಯಲ್ಲಿ ಭಾರತ ಈ ಹಿಂದೆ ದಕ್ಷಿಣ ಆಫ್ರಿಕಾವನ್ನು 2010ರ ಫೆಬ್ರವರಿಯಲ್ಲಿ ನಡೆದ ಪಂದ್ಯದಲ್ಲಿ ಸೋಲಿಸಿತ್ತು.
* ಸದ್ಯದ ದಕ್ಷಿಣ ಆಫ್ರಿಕಾ ತಂಡದಲ್ಲಿ ಡ್ಯುಮಿನಿ ಈ ಪಿಚ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ್ದಾರೆ. ಆಡಿದ 8 ಪಂದ್ಯಗಳಲ್ಲಿ ಅವರು ಮೂರು ಅರ್ಧಶತಕ ಸಹಿತ 301 ರನ್ ಹೊಡೆದಿದ್ದಾರೆ. ಹಾಶಿಮ್ ಆಮ್ಲ ಆರು ಪಂದ್ಯವನ್ನಾಡಿದ್ದು ಎರಡು ಅರ್ಧಶತಕ ಸಹಿತ 190 ರನ್ ಗಳಿಸಿದ್ದಾರೆ.