Advertisement

ವನಿತೆಯರಿಗೂ ಒಲಿದೀತೇ ಏಕದಿನ ಸರಣಿ?

12:30 AM Jan 29, 2019 | Team Udayavani |

ಮೌಂಟ್‌ ಮೌಂಗನುಯಿ: ಭಾರತದ ಪುರುಷರ ತಂಡ ನ್ಯೂಜಿಲ್ಯಾಂಡ್‌ ವಿರುದ್ಧದ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡು ಸಂಭ್ರಮಿಸುತ್ತಿರುವ ಹೊತ್ತಿನಲ್ಲೇ ನ್ಯೂಜಿಲ್ಯಾಂಡ್‌ ನೆಲದಲ್ಲಿ ಮತ್ತೂಂದು ಸರಣಿ ಭಾರತದ ಪಾಲಾಗುವ ಸಾಧ್ಯತೆಯೊಂದು ಗೋಚರಿಸುತ್ತಿದೆ.

Advertisement

ಕೊಹ್ಲಿ ಪಡೆ ನ್ಯೂಜಿಲ್ಯಾಂಡ್‌ ಪ್ರವಾಸ ಕೈಗೊಂಡ ಸಂದರ್ಭದಲ್ಲೇ ಭಾರತದ ವನಿತಾ ತಂಡ ಕೂಡ 3 ಪಂದ್ಯಗಳ ಸರಣಿಗಾಗಿ ಇಲ್ಲಿಗೆ ಆಗಮಿಸಿದೆ. ಈಗಾಗಲೇ ಮೊದಲ ಪಂದ್ಯವನ್ನು ಜಯಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. 2ನೇ ಪಂದ್ಯ ಮಂಗಳವಾರ ನಡೆಯಲಿದ್ದು, ಸರಣಿ ಗೆಲ್ಲುವ ಅಪೂರ್ವ ಅವಕಾಶವೊಂದು ಮಿಥಾಲಿ ರಾಜ್‌ ಬಳಗದ ಮುಂದಿದೆ.

ಸ್ಪಿನ್ನರಗಳ ಮೋಡಿ
ಮೊದಲ ಪಂದ್ಯದಲ್ಲಿ ಸ್ಪಿನ್ನರ್‌ಗಳಾದ ಏಕ್ತಾ ಬಿಷ್ಟ್ (3), ಪೂನಂ ಯಾದವ್‌ (3) ದೀಪ್ತಿ ಶರ್ಮ (2) ಬೌಲಿಂಗ್‌ ದಾಳಿಗೆ ಧೂಳೀಪಟವಾದ ಕಿವೀಸ್‌ 192 ರನ್‌ಗೆ ಆಲೌಟ್‌ ಆಗಿತ್ತು. ಇದಕ್ಕೆ ಉತ್ತರವಾಗಿ ಸ್ಮತಿ ಮಂಧನಾ ಮತ್ತು ಜೆಮಿಮಾ ರೋಡ್ರಿಗಸ್‌ 190 ರನ್‌ ಜತೆಯಾಟದ ನೆರವಿನಿಂದ ಭಾರತ 9 ವಿಕೆಟ್‌ಗಳ ಅಮೋಘ ಜಯ ದಾಖಲಿಸಿತ್ತು. ಮಂಧನಾ ಶತಕದ ಮಿಂಚು ಹರಿಸಿದ್ದರು. ಇದೇ ಸಾಧನೆಯನ್ನು ಪುರಾವರ್ತಿಸಿದರೆ ಭಾರತ ಸರಣಿ ಗೆಲ್ಲುವುದು ಅಸಾಧ್ಯವೇನಲ್ಲ.

2014-2016ರ ಅವಧಿಯ ಐಸಿಸಿ ವನಿತಾ ಚಾಂಪಿಯನ್‌ಶಿಪ್‌ ಸರಣಿಯಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ತವರಿನಲ್ಲಿ 1-2 ಅಂತರದಲ್ಲಿ ಸರಣಿ ಸೋತಿದ್ದ ಭಾರತಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶವೊಂದು ಲಭ್ಯವಾಗಿದೆ.ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿತ್ತು. ಈ ತಪ್ಪುಗಳನ್ನು ತಿದ್ದಿಕೊಂಡರೆ ಕಿವೀಸ್‌ ಸರಣಿಯನ್ನು ಜೀವಂತವಾಗಿ ಇರಿಸಿಕೊಂಡೀತು.

Advertisement

Udayavani is now on Telegram. Click here to join our channel and stay updated with the latest news.

Next