Advertisement
“ಗಾಬಾ’ದಲ್ಲಿ ಆಸೀಸ್‌ಗಿಂತ 11 ರನ್ ಹೆಚ್ಚು ಗಳಿಸಿಯೂ ಸೋಲುಂಡ ಕೊಹ್ಲಿ ಪಡೆಗೆ ಮೆಲ್ಬರ್ನ್ ಮೇಲಾಟ ಅತ್ಯಂತ ಮಹತ್ವದ್ದಾಗಿದೆ. 3 ಪಂದ್ಯಗಳ ಸರಣಿಯನ್ನು ಜೀವಂತವಾಗಿ ಉಳಿಸಿಕೊಳ್ಳಬೇಕಾದರೆ ಟೀಮ್ ಇಂಡಿಯಾ ಇಲ್ಲಿ ಗೆಲ್ಲಲೇಬೇಕಿದೆ.
Related Articles
ಮೆಲ್ಬರ್ನ್ ಅಂಗಳದಲ್ಲೂ ಇಂಥದೊಂದು ಸಮಸ್ಯೆ ಭಾರತದ ಆಟಗಾರರನ್ನು ಕಾಡಲಿದೆ. ಕಾರಣ, ಎಂಸಿಜಿ ಕೂಡ ದೊಡ್ಡ ಅಂಗಳ. ಹೀಗಾಗಿ ಭಾರತದ ಬ್ಯಾಟ್ಸ್‌ಮನ್‌ಗಳು ಉತ್ತಮ ಟೈಮಿಂಗ್ಸ್‌ನೊಂದಿಗೆ ಗ್ರೌಂಡ್ ಶಾಟ್‌ಗಳನ್ನು ಹೊಡೆಯಲು ಮುಂದಾಗಬೇಕಾದ ಅಗತ್ಯವಿದೆ. ಇದರಲ್ಲಿ ಯಶಸ್ವಿಯಾದರೆ ಅರ್ಧ ಪಂದ್ಯ ಗೆದ್ದಂತೆ.
Advertisement
ಹೇಗಿದ್ದೀತು ಹನ್ನೊಂದರ ಬಳಗ?ಸತತ 7 ಟಿ20 ದ್ವಿಪಕ್ಷೀಯ ಸರಣಿಗಳನ್ನು ಗೆದ್ದಿರುವ ಟೀಮ್ ಇಂಡಿಯಾ, ಇದನ್ನು ಎಂಟಕ್ಕೆ ಏರಿಸಿಕೊಳ್ಳಬೇಕಾದರೆ ಬ್ಯಾಟಿಂಗ್, ಬೌಲಿಂಗ್ ವಿಭಾಗಗಳೆರಡರಲ್ಲೂ ದೊಡ್ಡ ಮಟ್ಟದ ಸುಧಾರಣೆ ಕಾಣಬೇಕಿದೆ. ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ, ಕೆ.ಎಲ್. ರಾಹುಲ್ ಅವರ ಫಾರ್ಮ್ ಚಿಂತೆಯ ಸಂಗತಿಯಾಗಿ ಪರಿಣಮಿಸಿದೆ. ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್ ಟಿ20 ಪಂದ್ಯದಲ್ಲಿ ಅಜೇಯ 101 ರನ್ ಬಾರಿಸಿದ ಬಳಿಕ ರಾಹುಲ್ ಬ್ಯಾಟ್ ಮಾತಾಡಿದ್ದಿಲ್ಲ. ಅನಂತರದ 6 ಪಂದ್ಯಗಳಲ್ಲಿ ಅವರು 30 ರನ್ ಗಡಿ ದಾಟಿದ್ದೇ ಇಲ್ಲ. ಮನೀಷ್ ಪಾಂಡೆಯನ್ನು ಹೊರಗಿರಿಸಿ, ಸ್ವತಃ ನಾಯಕ ಕೊಹ್ಲಿ 4ನೇ ಕ್ರಮಾಂಕದಲ್ಲಿ ಆಡಲಿಳಿದು, ರಾಹುಲ್‌ಗೆ ವನ್‌ಡೌನ್ ಸ್ಥಾನವನ್ನು ಬಿಟ್ಟುಕೊಟ್ಟರೂ ಅವರು ಇದನ್ನು ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.ಮನೀಷ್ ಪಾಂಡೆ ಕೂಡ ದೊರೆತ ಅವಕಾಶಗಳನ್ನು ಕೈಚೆಲ್ಲುತ್ತ ಬಂದಿದ್ದಾರೆ. ಶ್ರೇಯಸ್ ಅಯ್ಯರ್ ರೇಸ್‌ನಲ್ಲಿದ್ದಾರೆ. ಮೆಲ್ಬರ್ನ್ನಲ್ಲಿ ರಾಹುಲ್ ಬದಲು ಇವರಿಬ್ಬರಲ್ಲೊಬ್ಬರು ಆಡಲಿಳಿದರೆ ಅಚ್ಚರಿ ಇಲ್ಲ. ಅಥವಾ ರಾಹುಲ್‌ಗೆ ಇನ್ನೊಂದು ಅವಕಾಶ ಲಭಿಸಲೂಬಹುದು. ಬ್ರಿಸ್ಬೇನ್‌ನಲ್ಲಿ ಶಿಖರ್ ಧವನ್, ದಿನೇಶ್ ಕಾರ್ತಿಕ್, ರಿಷಬ್ ಪಂತ್ ಭರ್ಜರಿ ಪ್ರದರ್ಶನ ನೀಡಿದ್ದರು. ಕೊನೆಯ ಓವರಿನಲ್ಲಿ ತುಸು ಎಚ್ಚೆತ್ತು ಆಡಿದರೆ ಗೆಲುವಿನ ಸಂಭ್ರಮ ಭಾರತದ್ದಾಗುತ್ತಿತ್ತು. ಆದರೆ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಬೇಗನೇ ಔಟಾದದ್ದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಇವರಿಬ್ಬರಲ್ಲಿ ಒಬ್ಬರು ಸಿಡಿದು ನಿಂತರೂ ಪಂದ್ಯದ ಚಿತ್ರಣವೇ ಬದಲಾಗಲಿದೆ. ಮೆಲ್ಬರ್ನ್ ಗ್ರೌಂಡ್ ಇದಕ್ಕೊಂದು ವೇದಿಕೆಯಾಗಬೇಕಿದೆ. ದುಬಾರಿಯಾದ ಕೃಣಾಲ್ ಪಾಂಡ್ಯ
ಭಾರತದ ಬೌಲಿಂಗ್ ಕಾಂಬಿನೇಶನ್ ಬ್ರಿಸ್ಬೇನ್‌ನಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿರಲಿಲ್ಲ. ಮುಖ್ಯವಾಗಿ ಕೃಣಾಲ್ ಪಾಂಡ್ಯ ದುಬಾರಿಯಾಗಿ ಪರಿಣಮಿಸಿದ್ದರು. ಬಳಿಕ ಬ್ಯಾಟಿಂಗಿನಲ್ಲೂ ಎಡವಿ ವಿಲನ್ ಆಗಿ ಗೋಚರಿಸಿದ್ದರು. ಇವರ ಬದಲು ಟಿ20ಯಲ್ಲಿ ನಿರಂತರವಾಗಿ ವಿಕೆಟ್ ಕೀಳುತ್ತ ಬಂದಿರುವ ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ಒಳಬರುವುದು ಬಹುತೇಕ ಖಚಿತ. ಅಥವಾ ಕೃಣಾಲ್ ಅವರನ್ನು ಉಳಿಸಿಕೊಂಡು, ಖಲೀಲ್ ಬದಲು ಚಾಹಲ್ ಅವಕಾಶ ಪಡೆಯಬಹುದು. ಟೀಮ್ ಇಂಡಿಯಾದ ಫೀಲ್ಡಿಂಗ್ ಕೂಡ ತೀರಾ ಕೆಳಮಟ್ಟದಲ್ಲಿತ್ತು. ಸ್ವತಃ ಕೊಹ್ಲಿ 2 ಸಲ ಕ್ಯಾಚ್ ಬಿಟ್ಟು ಟೀಕೆಗೆ ಗುರಿಯಾಗಿದ್ದಾರೆ. ಫೀಲ್ಡಿಂಗ್ ಸುಧಾರಣೆಯ ನಿಟ್ಟಿನಲ್ಲಿ ಕೋಚ್ ಆರ್. ಶ್ರೀಧರ್ ಸೂಕ್ತ ತಂತ್ರಗಾರಿಕೆ ರೂಪಿಸಬೇಕಾದ ಅಗತ್ಯ ಎಂದಿಗಿಂತ ಹೆಚ್ಚಿದೆ.ಬ್ರಿಸ್ಬೇನ್‌ನಂತೆ ಮೆಲ್ಬರ್ನ್ ಪಂದ್ಯಕ್ಕೂ ಮಳೆಯಿಂದ ತೊಂದರೆ ಎದುರಾಗುವ ಸಾಧ್ಯತೆ ಇದೆ. ಸಂಭಾವ್ಯ ತಂಡಗಳು
ಭಾರತ: ಶಿಖರ್ ಧವನ್, ರೋಹಿತ್ ಶರ್ಮ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ (ನಾಯಕ), ರಿಷಬ್ ಪಂತ್, ದಿನೇಶ್ ಕಾರ್ತಿಕ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬುಮ್ರಾ. ಆಸ್ಟ್ರೇಲಿಯ: ಆರನ್ ಫಿಂಚ್ (ನಾಯಕ), ಡಿ’ಆರ್ಸಿ ಶಾರ್ಟ್, ಕ್ರಿಸ್ ಲಿನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯಿನಿಸ್, ಬೆನ್ ಮೆಕ್‌ಡರ್ಮಟ್, ಅಲೆಕ್ಸ್ ಕ್ಯಾರಿ, ಆ್ಯಂಡ್ರೂé ಟೈ, ಜಾಸನ್ ಬೆಹೆÅಂಡಾಫ್ì, ಆ್ಯಡಂ ಝಂಪ, ಬಿಲ್ಲಿ ಸ್ಟಾನ್‌ಲೇಕ್/ನಥನ್ ಕೋಲ್ಟರ್ ನೈಲ್.
ಆರಂಭ: ಆಪರಾಹ್ನ 1.20
ಪ್ರಸಾರ: ಸೋನಿ ನೆಟ್‌ವರ್ಕ್