ಹರಿಹರ: ಮಾಜಿ ಸಚಿವ ಎಚ್.ಶಿವಪ್ಪ ಅಭಿಮಾನಿಗಳ ಸಾಂಸ್ಕೃತಿಕ ಬಳಗ ಆಯೋಜಿಸಿರುವ ಹರಿಹರ ಹಬ್ಬಕ್ಕೆ ಜ.27ರ ಸಂಜೆ 5ಕ್ಕೆ ನಗರದ ಎಸ್‌ಜೆವಿಪಿ ಪಾಲಿಟೆಕ್ನಿಕ್ ಕಾಲೇಜು ಮೈದಾನದಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಚಾಲನೆ ನೀಡುವರು. ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಉದ್ಘಾಟಿಸುವರು.
ಶಿರಹಟ್ಟಿ ದಿಂಗಾಲೇಶ್ವರ ಶ್ರೀ ಸಾನ್ನಿಧ್ಯ ವಹಿಸುವರು. ಬಳಗದ ಅಧ್ಯಕ್ಷ ಎನ್.ಜಿ.ನಾಗನಗೌಡಅಧ್ಯಕ್ಷತೆ ವಹಿಸುವರು. ಜಿಲ್ಲಾ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸುವರು. ಜ.28ರ ಬೆಳಗ್ಗೆ 10.30ಕ್ಕೆ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಸಾಹಿತಿ ಗೊ.ರೂ.ಚನ್ನಬಸಪ್ಪರಿಗೆ ಎಚ್. ಶಿವಪ್ಪ ಸಾಧನ ಪ್ರಶಸ್ತಿ ಪ್ರದಾನ ಮಾಡುವರು.
ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್ ಉದ್ಘಾಟಿಸುವರು. ವಿಜಯಪುರ ಸಿದ್ದೇಶ್ವರ ಶ್ರೀ, ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀ, ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭುಶ್ರೀ, ಕಸಾಪ ಅಧ್ಯಕ್ಷ ಮನು ಬಳಿಗಾರ ಮತ್ತಿತರರು, ಪತ್ರಕರ್ತರಾದ ರಂಗನಾಥ್ ಭಾರಧ್ವಜ್, ರಾಧಿಕಾ ಭಾರಧ್ವಜ್ ಭಾಗವಹಿಸವರು.
ಸಂಜೆ 5ಕ್ಕೆ ಜವಳಿ, ಮುಜರಾಯಿ ಸಚಿವ ರುದ್ರಪ್ಪ ಎಂ.ಲಮಾಣಿ ಸಾಂಸ್ಕೃತಿಕ ಉತ್ಸವ ಉದ್ಘಾಟಿಸುವರು. ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಜಾನಪದ ಜಾತ್ರೆಗೆ ಚಾಲನೆ ನೀಡುವರು. ಉಪಸಭಾಪತಿ ಮರಿತಿಬ್ಬೆಗೌಡ, ಎಂಎಲ್‌ಸಿ ಪುಟ್ಟಣ್ಣ ಮತ್ತಿತರರು ಭಾಗವಹಿಸುವರು. ನಂತರ ಸಹನಾ ಮೆಲೋಡಿಸ್ ಬಳಗ ಸೇರಿದಂತೆ ರಾಜ್ಯದ ವಿವಿಧ ಕಲಾತಂಡಗಳಿಂದ ಜಾನಪದ ಜಾತ್ರೆ ನಡೆಯುವುದು.
ಜ.29ರ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸುವರು. ಬೆಳಿಗ್ಗೆ 9ಕ್ಕೆ ಶಿವಮೊಗ್ಗ ರಸ್ತೆಯ ಗ್ರಾಮದೇವತೆ ದೇವಸ್ಥಾನದಿಂದ 1008 ಕುಂಬಮೇಳಗಳೊಂದಿಗೆ ವಧು-ವರರನ್ನು ಸಭಾಮಂಟಪಕ್ಕೆ ಕರೆತರಲಾಗುವುದು. 11ಕ್ಕೆ ಮಾಂಗಲ್ಯಧಾರಣೆ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮಾಂಗಲ್ಯ ವಿತರಿಸುವರು.
ನಾಡಿನ 60ಕ್ಕೂ ಅಧಿಧಿಕ ಮಠಾಧೀಶರು ಸಾನ್ನಿಧ್ಯ ವಹಿಸುವರು. ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಸಚಿವರಾದ ಎಚ್.ಕೆ.ಪಾಟೀಲ್, ಎಚ್.ಆಂಜನೇಯ, ರಮೇಶ್ ಜಾರಕಿಹೊಳಿ, ಎಂ.ಕೃಷ್ಣಪ್ಪ, ವಿನಯ್ ಕುಲಕರ್ಣಿ, ಈಶ್ವರ ಬಿ.ಖಂಡ್ರೆ, ಮಾಜಿ ಸಚಿವರಾದ ಜಿ.ಎಂ.ಸಿದ್ದೇಶ್ವರ, ಬಸವರಾಜ ಹೊರಟ್ಟಿ, ಎಚ್ .ಡಿ.ರೇವಣ್ಣ, ದಿನೇಶ್ ಗುಂಡೂರಾವ್ ಮತ್ತಿತರರು ಭಾಗವಹಿಸುವರು.