ಹಾವೇರಿ: ಜಿಲ್ಲೆಯಲ್ಲಿ ಮಂಗಳವಾರ 257 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ.
ಬ್ಯಾಡಗಿ ತಾಲೂಕಿನ 28, ಹಾನಗಲ್ಲ ತಾಲೂಕಿನ 50, ಹಾವೇರಿ ತಾಲೂಕಿನ 19, ಹಿರೇಕೆರೂರು ತಾಲೂಕಿನ 14, ರಾಣಿಬೆನ್ನೂರು ತಾಲೂಕಿನ 82, ಸವಣೂರು ತಾಲೂಕಿನ 24, ಶಿಗ್ಗಾವಿ ತಾಲೂಕಿನ 36, ಹಾಗೂ ಜಿಲ್ಲೆಯ ಇತರೆ ಸ್ಥಳಗಳಲ್ಲಿ 4 ಜನರು ಕೋವಿಡ್ ಸೋಂಕಿನ ವಿರುದ್ಧ ಹೋರಾಡಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇನ್ನು ಮಂಗಳವಾರ ಹೊಸದಾಗಿ 187 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಆರು ಜನರು ಮೃತಪಟ್ಟಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 3, ಹಾನಗಲ್ಲ ತಾಲೂಕಿನಲ್ಲಿ 16, ಹಾವೇರಿ ತಾಲೂಕಿನ 23, ಹಿರೇಕೆರೂರು ತಾಲೂಕಿನಲ್ಲಿ 26, ರಾಣಿಬೆನ್ನೂರು ತಾಲೂಕಿನ 92, ಸವಣೂರು ತಾಲೂಕಿನ 8, ಶಿಗ್ಗಾವಿ ತಾಲೂಕಿನ 19 ಜನರಿಗೆ ಸೋಂಕು ದೃಢಪಟ್ಟಿದೆ.
ಬ್ಯಾಡಗಿಯ 75 ವರ್ಷದ ಮಹಿಳೆ, ರಾಣಿಬೆನ್ನೂರ ತಾಲೂಕಿನ 80 ಹಾಗೂ 50 ವರ್ಷದ ಪುರುಷ, ಹಾನಗಲ್ಲನ 37 ವರ್ಷದ ಪುರುಷ, ಹಾವೇರಿಯ 47 ವರ್ಷದ ಪುರುಷ, ರಾಣಿಬೆನ್ನೂರಿನ 51 ವರ್ಷದ ಪುರುಷ ಮೃತಪಟ್ಟವರಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ೧೬,೮೭೪ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದುವರೆಗೆ ೧೪,೯೨೨ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ೩೫೨ಜನರು ಮೃತಪಟ್ಟಿದ್ದು, ೧,೬೦೦ ಸಕ್ರಿಯ ಪ್ರಕರಣಗಳಿವೆ. ೭೮೭ಜನರು ಗೃಹಪ್ರತ್ಯೇಕತೆಯಲ್ಲಿದ್ದಾರೆ. ೮೧೩ಜನರು ಆಸ್ಪತ್ರೆ ಹಾಗೂ ಆರೈಕೆ ಕೇಂದ್ರಗಳಲ್ಲಿ ದಾಖಲಾಗಿದ್ದಾರೆ ಎಂದು ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಯಾನಂದ ತಿಳಿಸಿದ್ದಾರೆ.