ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೇರಿದ ಮೇಲೆ ಇದೇ ಮೊದಲ ಬಾರಿಗೆ ಕರಾವಳಿಗೆ ಭೇಟಿ ನೀಡುತ್ತಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನತೆ ಸಿಎಂ ಭೇಟಿಯ ನಿರೀಕ್ಷೆಯಲ್ಲಿದ್ದಾರೆ. ಅದೇ ಸಂದರ್ಭದಲ್ಲಿ ಒಂದಿಷ್ಟು ನಿರೀಕ್ಷೆಗಳೂ ಉಭಯ ಜಿಲ್ಲೆಗಳ ಜನರಲ್ಲಿವೆ. ಇವುಗಳನ್ನೇ ಇಲ್ಲಿ ಪಟ್ಟಿ ಮಾಡಿ ಕೊಡಲಾಗಿದೆ.
ಕರಾವಳಿ ಗ್ಯಾರಂಟಿ ಬಗ್ಗೆ ಕುತೂಹಲ
ಮಂಗಳೂರು: ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಸಿದ್ದರಾಮಯ್ಯ ಅವರು ಆ.1ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು ಜಿಲ್ಲೆಗಳ ವಿವಿಧ ಅಭಿವೃದ್ಧಿ ವಿಚಾರಗಳು ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿ ಪರಾಮರ್ಶೆ ನಡೆಸಲಿದ್ದಾರೆ.
ಚುನಾವಣೆ ನಡೆದು, ಸರಕಾರ ರಚನೆಯಾಗಿ ಬಜೆಟ್ ಮಂಡನೆ ಆದ ಬಳಿಕ ಈಗ ಸಿಎಂ ಆಗಮಿಸು
ತ್ತಿದ್ದಾರೆ. ಪ್ರಮುಖವಾಗಿ ಜಿಲ್ಲೆ ಯಲ್ಲಿ ವಿಪತ್ತು ನಿರ್ವಹಣೆ ವಿಷಯ, ವಿವಿಧ ಗ್ಯಾರಂಟಿಗಳ ಅನುಷ್ಠಾನದ ಅವ ಲೋಕನ ನಡೆಸುವ ಸಾಧ್ಯತೆ ಇದೆ.
ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆಗಳ ಅನುಷ್ಠಾನ ಕರಾವಳಿ ಯಲ್ಲಿ ಯಾವ ರೀತಿ ನಡೆಯುತ್ತಿದೆ, ಇಂದಿರಾ ಕ್ಯಾಂಟೀನ್ ನಿರ್ವಹಣೆ ಹೇಗಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಮರ್ಪಕವಾಗಿ ವಿಷಯ ತಿಳಿದುಕೊಂಡು ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಈ ಬಾರಿ ಬಜೆಟ್‌ನಲ್ಲಿ ಮೀನು ಗಾರ ಸಮುದಾಯಕ್ಕೆ ಸಾಕಷ್ಟು ಕೊಡುಗೆ ಗಳನ್ನು ನೀಡಲಾಗಿದೆ, ಮೀನುಗಾರ ಮಹಿಳೆಯರಿಗೆ ಬ್ಯಾಂಕುಗಳಲ್ಲಿ ಬಡ್ಡಿ ರಹಿತವಾಗಿ ನೀಡುವ ಸಾಲದ ಮಿತಿ 50 ಸಾವಿರ ರೂ.ಗಳಿಂದ 3ಲಕ್ಷ ರೂ.ಗೆ
ಹೆಚ್ಚಳ, ರಿಯಾಯಿತಿ ಡೀಸೆಲ್ ಮಿತಿ ಯನ್ನು 1.50 ಲಕ್ಷ ಕಿ.ಲೀ.ನಿಂದ 2 ಲಕ್ಷ ಕಿ.ಲೀ ವರೆಗೆ ಹೆಚ್ಚಿಸುವುದು, ದೋಣಿ ಗಳಲ್ಲಿನ ಸೀಮೆ ಎಣ್ಣೆ ಎಂಜಿನ್‌ಗಳನ್ನು ಪೆಟ್ರೋಲ್- ಡೀಸೆಲ… ಎಂಜಿನ್‌ಗಳಾಗಿ ಬದಲಾಯಿಸಲು ತಲಾ 50 ಸಾವಿರ ರೂ. ಸಹಾಯಧನ ನೀಡಲು ನಿರ್ಧಾರ ಮಾಡಲಾಗಿದೆ.
ಕರಾವಳಿ ಗ್ಯಾರಂಟಿ ಬಗ್ಗೆ ಕುತೂಹಲ ಆದರೆ ಚುನಾವಣೆಗೂ ಮುನ್ನ ಅವರು ಘೋಷಿಸಿದ್ದ ಕರಾವಳಿ ಗ್ಯಾರಂಟಿ ಬಗ್ಗೆ ಸಿಎಂ ಕರಾವಳಿಯಲ್ಲಿ ಈಗ ಯಾವ ರೀತಿ ಪ್ರತಿಕ್ರಿಯೆ ಕೊಡುತ್ತಾರೆ ಎಂಬ ಕುತೂಹಲ ಮೂಡಿದೆ. ಚುನಾವಣೆಗೆ ಮೊದಲು ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಗಿತ್ತು.
ಅದರ ಅನ್ವಯ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ ಅದಕ್ಕೆ 2,500 ಕೋಟಿ ರೂ. ವಾರ್ಷಿಕ ಬಜೆಟ್ ನೀಡುವುದು. ಮಂಗಳೂರಿನಲ್ಲಿ ಐಟಿಮತ್ತು ಗಾರ್ಮೆಂಟ್ ಇಂಡಸ್ಟ್ರಿ ಪಾರ್ಕ್ ಸ್ಥಾಪನೆ ಮಾಡುವ ಜತೆಗೆ 1 ಲಕ್ಷ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬ ಮೀನು ಗಾರರಿಗೆ ತಲಾ 10 ಲಕ್ಷ ರೂ. ಮೊತ್ತದ ವಿಮಾ ಯೋಜನೆ ಇತ್ಯಾದಿ ಸೇರಿತ್ತು.
ಮಹತ್ವದ ನಿರೀಕ್ಷೆಗಳು ಹಲವು
-ಕರಾವಳಿಯಲ್ಲಿ ಬಂಡ ವಾಳ ಹೂಡಿಕೆಗೆ ಉತ್ತೇಜನ
-ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಗೆ ತುಳುವಿಗೆ ರಾಜ್ಯ ಭಾಷೆಯ ಸ್ಥಾನಮಾನ
-ಪಶ್ಚಿಮ ವಾಹಿನಿ ಯೋಜನೆಗೆ ಹೆಚ್ಚು ಅನುದಾನ ಬಿಡುಗಡೆ
-ಶಿರಾಡಿ, ಚಾರ್ಮಾಡಿ ಸಹಿತ ಘಾಟಿ ರಸ್ತೆಗಳ ಸುಧಾರಣೆ
-ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಹೆಚ್ಚುವರಿ ಅನುದಾನ
-ಪರಿಸರ ಸ್ನೇಹಿ ಉದ್ಯಮಗಳ ಸ್ಥಾಪನೆಗೆ ಅನು ಕೂಲಕರ ಐ.ಟಿ. ಪಾರ್ಕ್
-ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಘಟಕ ಸ್ಥಾಪನೆ
ಬೇಡಿಕೆಗಳಿಗೆ ಸ್ಪಂದಿಸುವರೇ ಸಿಎಂ
ಉಡುಪಿ: ಜಿಲ್ಲೆಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಬಹುಕಾಲದ ಬೇಡಿಕೆಗಳಿಗೆ ಸ್ಪಂದಿಸುತ್ತಾರೆಂಬ ಕುತೂಹಲದಲ್ಲಿ ಜಿಲ್ಲೆಯ ಜನರಿದ್ದಾರೆ.
ಕೊಬ್ಬರಿ ಖರೀದಿ ಕೇಂದ್ರ ಸ್ಥಾಪನೆ ಬೇಡಿಕೆ
ಕರಾವಳಿ ಭಾಗದ ರೈತರಿಗೆ ತೆಂಗಿನ ಬೆಳೆಯೇ ಜೀವನಾಧಾರ. ಆದರೆ ಈಗ ಅದಕ್ಕೆ ಸೂಕ್ತ ಬೆಲೆ ಇಲ್ಲದೇ ಸಂಕಷ್ಟಕ್ಕೆ ಈಡಾಗಿದ್ದಾರೆ. ಸರಕಾರ ಉಡುಪಿ ಯಲ್ಲೊಂದು ಕೊಬ್ಬರಿ ಖರೀದಿ ಕೇಂದ್ರ ಸ್ಥಾಪಿಸಿದರೆ ಜನರಿಗೆ ಬಹಳಷ್ಟು ಉಪಯೋಗಕಾರಿಯಾಗಲಿದೆ.
ಕೃಷಿ ಉತ್ಪನ್ನ ಕಾರ್ಖಾನೆ
ಈಗಾಗಲೇ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಸ್ಥಗಿತ ಗೊಂಡಿದ್ದು ಅಲ್ಲಿನ 110 ಎಕ್ರೆ ಪೈಕಿ 10 ಎಕ್ರೆಯಲ್ಲಿ ಕ್ಯಾಂಪ್ಕೋ ಮಾದರಿಯಲ್ಲಿ ತೆಂಗಿನ ಪೌಡರ್, ತೆಂಗಿನ ಎಣ್ಣೆ ತಯಾರಿಕ ಘಟಕ ಸ್ಥಾಪಿಸಿದರೆ ರೈತರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಬಹು ದಿನದ ಕನಸಾದ ಕೃಷಿ ವಿದ್ಯಾಲಯ ಅಥವಾ ವೈದ್ಯ ಕಾಲೇಜನ್ನು ಸ್ಥಾಪಿಸಬೇಕಿದೆ.
ಒಳಚರಂಡಿ ವ್ಯವಸ್ಥೆ
ಉಡುಪಿ ನಗರದಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆ ಸಹಿತ ಇಂದ್ರಾಳಿ ನದಿ ಸೇರಿ ಮಾಲಿನ್ಯ ಉಂಟು ಮಾಡುತ್ತಿದೆ. ಹೊಸ ಒಳಚರಂಡಿ ವ್ಯವಸ್ಥೆಗಾಗಿ ರೂಪಿಸಿದ ಡಿಪಿಆರ್ ಸರಕಾರದ ಅನುಮೋದನೆಗೆ ಕಾಯುತ್ತಿದೆ.
ಹೆಚ್ಚುವರಿ ಬಸ್ ಬೇಡಿಕೆ
ಸರಕಾರ ಜಾರಿಗೆ ತಂದ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದರೂ ಉಡುಪಿಯಲ್ಲಿ ನರ್ಮ್ ಬಸ್‌ಗಳ ಕೊರತೆ ಕಾಡುತ್ತಿದೆ. ಈ ಬಗ್ಗೆ ವಿವಿಧ ಸಂಘಟನೆಗಳು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಈಡೇರಬೇಕಿದೆ. ಹಾಗೆಯೇ ಉಡುಪಿಯಿಂದ ಮಂಗಳೂರು ಸಹಿತ ಉಡುಪಿ- ಕುಂದಾಪುರ ಭಾಗಕ್ಕೂ ಹೆಚ್ಚುವರಿ ಬಸ್ ಓಡಿಸಬೇಕು ಎಂಬ ಆಗ್ರಹ ಜನರದ್ದು.
ವಾರಾಹಿ ಕಾಮಗಾರಿಗೆ ಬೇಕಿದೆ ವೇಗ
ವಾರಾಹಿ ಯೋಜನೆಯ ಕಾಮಗಾರಿ ಶೇ.50 ಮಾತ್ರ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ ಅರಣ್ಯ ಇಲಾಖೆಯ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದೆ. ಅದು ತ್ವರಿತಗತಿಯಲ್ಲಿ ಪೂರ್ಣ ಗೊಳಿಸಲು ಕ್ರಮ ಕೈಗೊಳ್ಳಬೇಕು.
ರಸ್ತೆ ಸಮಸ್ಯೆ
ಬ್ರಹ್ಮಾವರ-ಜನ್ನಾಡಿ ಮಾರ್ಗದ ಬಾಕೂìರು- ಮಟಪಾಡಿ ರಸ್ತೆ ತೀರಾ ಇಕ್ಕಟ್ಟಾಗಿದ್ದು ದ್ವಿಪಥ ಆಗದ ಕಾರಣ ಅಪಘಾತಕ್ಕೆ ಕಾರಣವಾಗುತ್ತಿದೆ. ಶೀಘ್ರ ಈ ಮಾರ್ಗ ರಾಜ್ಯ ಹೆ¨ªಾರಿಯಾಗಿ ಮಾರ್ಪಾಡಾದರೆ ಬಾಳೆಬರೆ ಘಾಟಿ ಮೂಲಕ ಶಿವಮೊಗ್ಗಕ್ಕೆ ಹೋಗಲು ಅತ್ಯಂತ ಸಮೀಪದ ಮಾರ್ಗವಾಗಲಿದೆ.
ಹೆಗ್ಗುಂಜೆ ಗ್ರಾಮದಿಂದ ಯಡ್ತಾಡಿ
ಕಾವಡಿ ಗ್ರಾಮಗಳ ಮೂಲಕ ಬನ್ನಾಡಿಗೆ ಸೇರುವ ಹೊಳೆಯ ಹೂಳೆತ್ತಿ ವಾರಾಹಿ ಏತ ನೀರಾವರಿ ಯೋಜನೆಯ ನೀರು ಹರಿಸಿದಲ್ಲಿ ಈ ಭಾಗದ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಮಣಿಪಾಲ ಹಾಗೂ ಹೆಬ್ರಿಗೆ ಅಗ್ನಿಶಾಮಕ ಘಟಕ, ನಗರ ದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ, ಕಂದಾಯ ಇಲಾಖೆಯ ವಿವಿಧ ಸಮಸ್ಯೆಗಳು, ನಗರಾಭಿವೃದ್ಧಿ ಪ್ರಾಧಿ ಕಾರದ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ನೈತಿಕ ಪೊಲೀಸ್‌ಗಿರಿ ಬಗ್ಗೆ ಚರ್ಚೆ?
ಕರಾವಳಿಯಲ್ಲಿ ನಡೆಯುವ ನೈತಿಕ ಪೊಲೀಸ್‌ಗಿರಿ ವಿಚಾರದಲ್ಲಿ ರಾಜ್ಯ ಗೃಹಸಚಿವ, ಜಿಲ್ಲಾ ಉಸ್ತು ವಾರಿ ಸಚಿವರೇ ಖಡಕ್ ನಿರ್ಣಯ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಹಿಂದೆ ಸೂಚನೆ ನೀಡಿದ್ದಾರೆ. ಅದರ ಭಾಗವಾಗಿಯೇ ಆ್ಯಂಟಿ ಕಮ್ಯುನಲ್ ವಿಂಗ್ ರಚನೆಯನ್ನೂ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಈ ಎಲ್ಲ ಬೆಳವಣಿಗೆಗಳ ಪರಾಮರ್ಶೆ ನಡೆಸುವ ಸಾಧ್ಯತೆಯೂ ಇದೆ.