ಫೈನಲ್‌ಗೆ ಒಂದು ಕಾಲಿರಿಸಿದ್ದ ಭಾರತ, ಗುರುವಾರ ಬೆಲ್ಜಿಯಂ ತಂಡವನ್ನು ಎದುರಿಸುವುದ ರೊಳಗೆ ನಾಕೌಟ್ ಪ್ರವೇಶ ವನ್ನು ಖಚಿತಪಡಿಸಿ ಕೊಂಡಿದೆ. ಇದಕ್ಕೆ ಕಾರಣ, ಬೆಲ್ಜಿಯಂ ವಿರುದ್ಧ ಆಸ್ಟ್ರೇಲಿಯ ಅನುಭವಿಸಿದ 2-6 ಸೋಲು. ಹಾಗೆಯೇ ನ್ಯೂಜಿಲ್ಯಾಂಡ್ ವಿರುದ್ಧ ಆರ್ಜೆಂ ಟೀನಾ ಸಾಧಿಸಿದ ಗೆಲುವು.
Advertisement
ಗ್ರೂಪ್ “ಬಿ’ ವಿಭಾಗದಲ್ಲೀಗ “ರೆಡ್ ಲಯನ್ಸ್’ ಖ್ಯಾತಿಯ ಹಾಲಿ ಚಾಂಪಿಯನ್ ಬೆಲ್ಜಿಯಂ ಎಲ್ಲ 3 ಪಂದ್ಯ ಗೆದ್ದು ಅಗ್ರಸ್ಥಾನಿಯಾಗಿದೆ. ಭಾರತ 2 ಜಯ, ಒಂದು ಡ್ರಾ ಸಾಧಿಸಿ ದ್ವಿತೀಯ ಸ್ಥಾನದಲ್ಲಿದೆ. ಬಲಿಷ್ಠ ಆಸ್ಟ್ರೇಲಿಯ ಮೂರಕ್ಕೆ ಕುಸಿದಿದೆ (2 ಜಯ, 1 ಸೋಲು). ಆರ್ಜೆಂಟೀನ ಕೂಡ ಕ್ವಾರ್ಟರ್ ಫೈನಲ್ ತಲುಪಿದೆ (1 ಜಯ, 1 ಸೋಲು, 1 ಡ್ರಾ). ಸತತ 3 ಸೋಲನುಭವಿಸಿದ ನ್ಯೂಜಿಲ್ಯಾಂಡ್ ಮತ್ತು ಐರ್ಲೆಂಡ್ ನಾಕೌಟ್ ರೇಸ್‌ನಿಂದ ಹೊರಬಿದ್ದಿವೆ.
ಹೀಗೆ “ಬಿ’ ವಿಭಾಗದಲ್ಲಿ ಕೆಲವು ದೊಡ್ಡ ಪಂದ್ಯಗಳು ಬಾಕಿ ಇರುವಂತೆಯೇ ನಾಲ್ಕೂ ನಾಕೌಟ್ ತಂಡಗಳು ಅಂತಿಮ ಗೊಂಡಿರುವುದು ಅಚ್ಚರಿಯ ಬೆಳವಣಿಗೆ. ಇದರಿಂದ ಕುತೂಹಲ ಕಡಿಮೆ ಆಗಬಹುದಾದರೂ ಭಾರತ ಸೇರಿದಂತೆ ಉಳಿದ ಮೂರೂ ತಂಡಗಳು ಒತ್ತಡವಿಲ್ಲದೆ ಹೋರಾಟ ಸಂಘಟಿಸಬಹುದಾಗಿದೆ. ಅಜೇಯ ಬೆಲ್ಜಿಯಂ ವಿರುದ್ಧ ಭಾರತ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಿದೆ. ಮುಖ್ಯವಾಗಿ ಪೆನಾಲ್ಟಿ ಅವಕಾಶಗಳನ್ನು ಗೋಲಾಗಿಸುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಯಶಸ್ಸು ಗಳಿಸಬೇಕಿದೆ. ಸ್ವತಃ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮುಂಚೂಣಿಯಲ್ಲಿ ನಿಂತು ಆಡುವುದು ಉಳಿದವರಿಗೆ ಸ್ಫೂರ್ತಿ ಆಗುವುದರಲ್ಲಿ ಅನುಮಾನವಿಲ್ಲ.