ತಿರುವನಂತಪುರಂ: ಸತತ ಪ್ರತಿಭಟನೆ, ಹಿಂಸಾಚಾರಗಳನ್ನು ಕಂಡ ಶಬರಿಮಲೆಯಲ್ಲಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಶಾಂತವಾಗಿದೆ ಎನ್ನುವಷ್ಟರಲ್ಲಿ ಮತ್ತೆ ಪ್ರಕ್ಷುಬ್ಧತೆ ಉಂಟಾಗುವ ಎಲ್ಲ ಸಾಧ್ಯತೆಗಳೂ ಗೋಚರಿಸಿವೆ. ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ ಮತ್ತು ಒಡಿಶಾದ 50 ಮಹಿಳಾ ಯಾತ್ರಿಗಳ ಗುಂಪು ಶಬರಿಮಲೆಯತ್ತ ಹೊರಟಿದ್ದು, ಭಾನುವಾರ ಅಯ್ಯಪ್ಪ ದೇಗುಲ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದಾರೆ.
ಇವರೆಲ್ಲರೂ 50 ವರ್ಷಕ್ಕಿಂತ ಕೆಳಗಿನವರಾಗಿದ್ದು, ಕಠಿಣ ವೃತಾಚರಣೆ ಪೂರ್ಣಗೊಳಿಸಿ, ಇರುಮುಡಿ ಹೊತ್ತೂಕೊಂಡು ಮಲೆಯತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ, ಈ ವಿಚಾರ ಗೊತ್ತಾಗುತ್ತಿದ್ದಂ ತೆಯೇ ಹಿಂದೂ ಸಂಘಟನೆಗಳು ಎಚ್ಚೆತ್ತುಕೊಂಡಿದ್ದು, ಈ ಮಹಿಳೆಯರನ್ನು ಕೊಟ್ಟಾಯಂ ದಾಟಲು ಬಿಡುವುದಿಲ್ಲ ಎಂದು ಎಚ್ಚರಿಸಿವೆ. ಹೀಗಾಗಿ, ಭಾನುವಾರ ಶಬರಿಮಲೆಯಲ್ಲಿ ಮತ್ತೂಮ್ಮೆ ಗದ್ದಲ, ಪ್ರತಿಭಟನೆ ಉಂಟಾಗುವ ಸಾಧ್ಯತೆಯಿದೆ.
ಯಾತ್ರೆ ಕುರಿತು ಮಾತನಾಡಿರುವ ಮಾನಿಥಿ ಸಂಘಟನೆಯ ಸೆಲ್ವಿ, “ನಾವು ಈಗಾಗಲೇ ಕೇರಳ ಸಿಎಂ ಕಾರ್ಯಾಲ ಯಕ್ಕೆ ಪತ್ರ ಬರೆದು, ನಮ್ಮ ಯಾತ್ರೆ ಕುರಿತು ವಿವರ ನೀಡಿದ್ದೇವೆ’ ಎಂದಿದ್ದಾರೆ. ಮಹಿಳೆ ಯರ ಗುಂಪು ಆಗಮಿಸುತ್ತಿದ್ದು, ಅಯ್ಯಪ್ಪ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲಿದೆ ಎಂದು ಪೊಲೀಸರು ಕೂಡ ದೃಢಪಡಿಸಿ ದ್ದಾರೆ. ಅವರು ನೀಲಕ್ಕಲ್ ತಲುಪಿದಾಗ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂಥ ಪರಿಸ್ಥಿತಿ ಇದ್ದರೆ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದೂ ಹೇಳಿದ್ದಾರೆ. ಇವರು ಬೆಳಗ್ಗೆ 10 ಗಂಟೆಗೆ ಕೊಟ್ಟಾಯಂ ತಲುಪಲಿದ್ದು, ಅವರು ಯಾವುದೇ ವಿಶೇಷ ಭದ್ರತೆ ಕೋರಿಲ್ಲ ಎಂದು ಮೂಲಗಳು ತಿಳಿಸಿವೆ.
ಅವಕಾಶ ನೀಡಲ್ಲ ಎಂದು ಎಚ್ಚರಿಕೆ: ನಾವು ಕಳೆದ 2 ದಿನಗಳಿಂದಲೂ ಎಚ್ಚರಿಕೆ ಯಿಂದಿದ್ದೇವೆ. ಅವರು ಕೊಟ್ಟಾಯಂ ದಾಟದಂತೆ ತಡೆಯುತ್ತೇವೆ. ಅವರನ್ನು ಸುತ್ತುವರಿದು ಮುಂದೆ ಸಾಗದಂತೆ ನೋಡಿಕೊಳ್ಳಲು ಭಕ್ತರೆಲ್ಲ ನಿರ್ಧರಿಸಿಯಾ ಗಿದೆ ಎಂದು ಕೆ.ಪಿ.ಶಶಿಕಲಾ ನೇತೃತ್ವದ ಹಿಂದೂ ಐಕ್ಯ ವೇದಿ ಸಂಘಟನೆ ಹೇಳಿದೆ.
ಮಹಿಳೆ ವಾಪಸ್: ಇದೇ ವೇಳೆ, ಯಾತ್ರಾರ್ಥಿಗಳ ತಂಡದೊಂದಿಗೆ ಶಬರಿ ಮಲೆಗೆ ಆಗಮಿಸಿದ್ದ ಆಂಧ್ರಪ್ರದೇಶದ 43 ವರ್ಷದ ಮಹಿಳೆಯೊಬ್ಬರನ್ನು ಶುಕ್ರ ವಾರ ರಾತ್ರಿ ಪೊಲೀಸರು ತಡೆದು ವಾಪಸ್ ಕಳುಹಿಸಿದ ಘಟನೆ ವರದಿಯಾಗಿದೆ.