Advertisement

‘ಟೋಬಿ’ ಫ‌ಸ್ಟ್‌ ಲುಕ್‌ ಗೆ ಕ್ಷಣಗಣನೆ

08:27 AM Jun 29, 2023 | Team Udayavani |

ರಾಜ್‌ ಬಿ ಶೆಟ್ಟಿ ನಟನೆಯ “ಟೋಬಿ’ ಚಿತ್ರ ಆಗಸ್ಟ್‌ 25ರಂದು ಬಿಡುಗಡೆ ಆಗುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಚಿತ್ರದ ಫ‌ಸ್ಟ್‌ಲುಕ್‌ ಮೂಲಕ ಸಿನಿಮಾ ತಂಡ ಪ್ರಚಾರಕ್ಕೆ ಮುಂದಾಗಿದೆ. ಹೌದು, “ಟೋಬಿ’ ಫ‌ಸ್ಟ್‌ಲುಕ್‌ ಇಂದು (ಜೂ.29) ಬಿಡುಗಡೆಯಾಗಲಿದೆ.

Advertisement

ಟೋಬಿ’ ಚಿತ್ರಕ್ಕೆ “ಮಾರಿ ಮಾರಿ ..ಮಾರಿಗೆ ದಾರಿ’ ಎಂಬ ಅಡಿಬರಹವಿದೆ. ರಾಜ್‌ ಬಿ ಶೆಟ್ಟಿ ಈವರೆಗಿನ ಚಿತ್ರಗಳ ಪೈಕಿ ಟೋಬಿ ಬಿಗ್‌ ಬಜೆಟ್‌ ನ ಚಿತ್ರ. ಲೈಟರ್‌ ಬುದ್ಧ ಫಿಲಂಸ್‌ , ಅಗಸ್ತ್ಯ ಫಿಲಂಸ್‌ ಹಾಗೂ ಕಾಫಿ ಗ್ಯಾಂಗ್‌ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರವಿ ರೈ ಕಳಸ ಈ ಚಿತ್ರದ ನಿರ್ಮಾಪಕರು. ಶಾಮಿಲ್‌ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಇದನ್ನೂ ಓದಿ:BJP Meet: ತಡರಾತ್ರಿ ಮೋದಿ ನಿವಾಸದಲ್ಲಿ ಬಿಜೆಪಿ ಹಿರಿಯ ನಾಯಕರ ಸಭೆ

ಈ ಚಿತ್ರದ ಮೂಲಕಥೆ ಟಿ.ಕೆ ದಯಾನಂದ್‌ ಅವರದು. ರಾಜ್‌ ಬಿ ಶೆಟ್ಟಿ ರಚನೆ ಹಾಗೂ ಬಾಸಿಲ್‌ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಮಿಥುನ್‌ ಮುಕುಂದನ್‌ ಸಂಗೀತ ನಿರ್ದೇಶನ, ಪ್ರವೀಣ್‌ ಶ್ರೀಯನ್‌ ಛಾಯಾಗ್ರಹಣ – ಸಂಕಲನ ಹಾಗೂ ಅರ್ಜುನ್‌ ರಾಜ್‌ – ರಾಜಶೇಖರ್‌ ಅವರ ಸಾಹಸ ನಿರ್ದೇಶನ ಟೋಬಿ ಚಿತ್ರಕಿದೆ. ರಾಜ್‌ .ಬಿ. ಶೆಟ್ಟಿ, ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್‌, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್‌ ರಾಜ್‌ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next