Advertisement

ತಂಬಾಕು ನಿಷೇಧ ನಾಮಫ‌ಲಕ ಕಡ್ಡಾಯ:ಡೀಸಿ ರವೀಂದ್ರ

04:52 PM Feb 07, 2020 | Suhan S |

ದೇವನಹಳ್ಳಿ : 2003ರ ಕೋಟ್ಟಾ ಕಾಯಿದೆಯಡಿ ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಆವರಣದಿಂದ 100 ಮೀಟರ್‌ ಅಂತರದಲ್ಲಿ , ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ನಿಷೇಧವೆಂದು ಶಾಲೆಯ ಮುಖ್ಯ ಪ್ರವೇಶ ದ್ವಾರಗಳಲ್ಲಿ ನಾಮಫ‌ಲಕವನ್ನು ಮುಂದಿನ ತ್ರೈಮಾಸಿಕ ಸಭೆ ನಡೆಯುವಷ್ಟರಲ್ಲಿ ಕಡ್ಡಾಯವಾಗಿ ಅಳವಡಿಸ ಬೇಕೆಂದು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಡೀಸಿ ಪಿ.ಎನ್‌.ರವೀಂದ್ರ ಸೂಚಿಸಿದರು.

Advertisement

ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೈಗಾರಿಕಾ ಪ್ರದೇಶಗಳು, ಬಸ್‌ ನಿಲ್ದಾಣಗಳು, ರೈಲು ನಿಲ್ದಾಣಗಳು, ಶಾಲಾ-ಕಾಲೇಜು ಆವರಣಗಳು ಮತ್ತು ಸರ್ಕಾರಿ ಕಚೇರಿ ಆವರಣಗಳುಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇದನ್ನು ಉಲ್ಲಂ ಸುವವರಿಗೆ 200 ರೂ. ಕಡ್ಡಾಯವಾಗಿ ದಂಡ ವಿಧಿಸಬೇಕು ಎಂದರು.

ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಾದ ಕ್ಯಾನ್ಸರ್‌, ಹೃದಯ ಸಂಬಂಧಿ ಇತ್ಯಾದಿ ಮಾರಾಣಾಂತಿಕ ಖಾಯಿಲೆಗಳು, ಗರ್ಭ ಪಾತ, ಗರ್ಭದಾರಣೆಯಲ್ಲಿ ಕುಂಠಿತ, ಸೇರಿದಂತೆ ಇತರೆ ದುಷ್ಪರಿಣಾಮಗಳ ಕುರಿತು ಜಾಗೃತಿ ತಿಳುವಳಿಕೆ ಮೂಡಿಸುವ ಶಿಬಿರಗಳನ್ನು ಆಯೋಜಿಸಿವಂತೆ ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಜಗದೀಶ್‌. ಕೆ.ನಾಯಕ್‌, ಡಿವೈಎಸ್ಪಿ ದೀಪಕ್‌, ನಾಲ್ಕು ತಾಲೂಕು ಆರೋಗ್ಯಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು, ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next