Advertisement
ನಗರದ ಪುರಭವನದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಅವರು ಶುಕ್ರವಾರ ಉದ್ಘಾಟಿಸಿದರು. ಅಕ್ಷರ ಜ್ಞಾನ ಕಡಿಮೆ ಇದ್ದ ದಿನಗಳಲ್ಲಿ ತಂಬಾಕು ಸೇವನೆ ಮಾಡುವವರ ಸಂಖ್ಯೆಯೂ ಕಡಿಮೆ ಇತ್ತು. ಆದರೆ, ಸುಶಿಕ್ಷಿತ ಸಮಾಜದಲ್ಲಿ ಸಿಗರೇಟ್ ಸೇವನೆ ಮಾಡಿದರೆ ಆತ ಹೀರೋ ಎಂದು ಬಿಂಬಿಸುವ ಮನಸ್ಥಿತಿ ಹುಟ್ಟಿದೆ. ಇದು ನಾಗರಿಕ ಸಮಾಜಕ್ಕೆ ಅಪಾಯಕಾರಿಯಾದ ಬೆಳವಣಿಗೆ. ಅಂತಹ ಮನಸ್ಥಿತಿಯನ್ನು ಹೋಗಲಾಡಿಸಿ ಉತ್ತಮ ನಡತೆ, ಹವ್ಯಾಸವುಳ್ಳ ವ್ಯಕ್ತಿಗೆ ಮಾತ್ರ ಸಮಾಜದಲ್ಲಿ ಗೌರವ ಎಂಬ ಭಾವನೆಯನ್ನು ಬಿತ್ತಬೇಕು. ಇದರಿಂದ ತಂಬಾಕು ಉತ್ಪನ್ನಗಳ ಸೇವನೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಕೊಡುಗೆಯಾಗಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಸಿಇಒ ಡಾ| ಆರ್. ಸೆಲ್ವಮಣಿ ಮಾತನಾಡಿ, ಇತ್ತೀಚೆಗೆ ಕೆಲವು ಶಾಲಾ-ಕಾಲೇಜುಗಳ ಬಳಿ ಧೂಮಪಾನ ರಹಿತ ವಲಯ ಎಂದು ಮಾಡಿರುವುದು ಶ್ಲಾಘನೀಯ. ಚಿತ್ರಮಂದಿರಗಳಲ್ಲಿ ಧೂಮಪಾನ ಹಾನಿಕರ ಎಂದು ಕಿರು ಚಿತ್ರಗಳನ್ನು ತೋರಿಸಲಾಗುತ್ತಿದ್ದರೂ, ಸಿನೆಮಾಗಳ ಹೀರೋಗಳೇ ಧೂಮಪಾನದಿಂದಾಗುವ ಹಾನಿಗಳ ಬಗ್ಗೆ ಪರದೆ ಮೇಲೆ ಬಂದು ಮಾತನಾಡಬೇಕು. ಇದರಿಂದ ಯುವಕರು ದಾರಿ ತಪ್ಪುವುದನ್ನು ತಡೆಯಬಹುದು ಎಂದರು. ಶೇ. 90ರಷ್ಟು ಶ್ವಾಸಕೋಶ ಕ್ಯಾನ್ಸರ್
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಚೇಯರ್‌ಮನ್ ಶಾಂತಾರಾಮ ಶೆಟ್ಟಿ ಮಾತನಾಡಿ, ವಿಶ್ವದಲ್ಲಿ ಪ್ರತಿ ವರ್ಷ ಏಳು ಮಿಲಿಯನ್ ಜನ ತಂಬಾಕು ಸೇವನೆಯಿಂದ ಮೃತಪಡುತ್ತಿದ್ದಾರೆ. ಶೇ. 90ರಷ್ಟು ಶ್ವಾಸಕೋಶ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿರುವುದಕ್ಕೆ ತಂಬಾಕು ಸೇವನೆಯೇ ಕಾರಣ ಎಂದರು.
Related Articles
Advertisement
1.40 ಲಕ್ಷ ರೂ. ದಂಡಅನಧಿಕೃತ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಧಾಳಿ ನಡೆಸಿ ಕಂಡು ಬಂದಲ್ಲಿ ದಂಡ ವಿಧಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ನಗರದಲ್ಲಿ 1 ಲಕ್ಷ 40 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಡಿಎಚ್‌ಒ ಡಾ| ರಾಮಕೃಷ್ಣ ರಾವ್ ತಿಳಿಸಿದರು.