Advertisement
ಪಟ್ಟಣದ ಮಹಾಲಕ್ಷ್ಮಿ ಕಲ್ಯಾಣಮಂಟಪದಲ್ಲಿ ಭಾರತೀಯ ತಂಬಾಕು ಮಂಡಳಿ ವತಿಯಿಂದ ಮಂಗಳವಾರ ಆಯೋಜಿಸಿದ್ದ 23 ಟೊಬೋಕೋ ಪಾರ್ಮರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಮಾತನಾಡಿದರು.
Related Articles
Advertisement
ಕೆ.ಆರ್.ಆಸ್ಪತ್ರೆಯಲ್ಲಿ ಐಟಿಸಿ ನೆರವಿನ ವಿಭಾಗ ಸ್ಥಾಪಿಸಿ:ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್ ಮಾತನಾಡಿ ಐಟಿಸಿ ಕಂಪನಿ ಇಂದು ರೈತರ ನೆರವಿನಿಂದ ಇಂದು ದೊಡ್ಡ ಇಂಡಸ್ಟೀಯಾಗಿ ಬೆಳೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು, ಇಂದು ಇವರ ಆದಾಯ ರೂ. 4535 ಕೋಟಿಗೂ ಹೆಚ್ಚು. ಆದರೆ ಕಂಪನಿ ಲಾ ಪ್ರಕಾರ ಇವರು ಶೇ.2 ರಷ್ಟು ಹಣವನ್ನು ರೈತರಿಗಾಗಿ ವಿನಿಯೋಗ ಮಾಡಬೇಕು ಆದರೆ ಈ ಕೆಲಸವನ್ನು ಇವರು ಮಾಡುತ್ತಿಲ್ಲ, ಹೊಟೇಲ್ ನಲ್ಲಿ 20 ಜನ ಕೆಲಸ ಮಾಡುತ್ತಿದ್ದಾರೆ ಎಂದರೆ ಅವರ ನೆರವಿಗೆ ಕಾರ್ಮಿಕ ಇಲಾಖೆ ನೆರವಿಗೆ ಧಾವಿಸುತ್ತದೆ ಆದರೆ ರೈತ ತಂಬಾಕು ಬೆಳೆಯಲು ತನ್ನಲ್ಲಿರುವ ಎಲ್ಲಾ ಶ್ರಮವನ್ನು ವ್ಯಯಿಸಿ ಆರೋಗ್ಯ ಕೆಟ್ಟರೆ ಯಾರೂ ಬರುವುದಿಲ್ಲ ಹಾಗಾಗಿ ಹೆಚ್ಚು ತಂಬಾಕು ಬೆಳೆಯುವ ಮೈಸೂರು ಪ್ರಾಂತ್ಯಯದ ತಂಬಾಕು ಬೆಳೆಗಾರರ ಆರೋಗ್ಯ ರಕ್ಷಣೆಗಾಗಿ ಕೆ.ಆರ್.ಆಸ್ಪತ್ರೆಯಲ್ಲಿ ಐಟಿಸಿ ವತಿಯಿಂದ ನೆರವಿನ ಘಟಕ ಸ್ಥಾಪಿಸಬೇಕು ಎಂದು ಐಟಿಸಿ ಕಂಪನಿಯನ್ನು ಒತ್ತಾಯಿಸಿದರು. ಅರಕಲಗೂಡು ಶಾಸಕ ಎ.ಮಂಜು ಮಾತನಾಡಿ ತಂಬಾಕು ಐಟಿಸಿ ಕಂಪನಿಗೆ ತಾಯಿಬೇರು ಇದ್ದಹಾಗೆ. ಆದರೆ ರೈತರಿಗೆ ಬೆಲೆ ಸಮಸ್ಯೆ ಎದುರಾದರೆ ಕಂಪನಿ ಮಾತ್ರ ರೈತರ ನೆರವಿಗೆ ಬರುವ ಬದಲು ಕೈಕಟ್ಟಿ ಕೂರುತ್ತಿರುವುದು ನೋವಿನ ಸಂಗತಿ. ಕೆಲವೊಮ್ಮೆ ಐಟಿಸಿಯವರು ಇತರೆ ಕಂಪನಿಗಳಿಗಿಂತ 2- 3 ಬೇಲ್ ಗೆ ಹೆಚ್ಚು ಹಣ ಕೊಟ್ಟು ಖರೀಧಿ ಮಾಡಿದರೂ ಅದು ಕ್ಷಣಿಕ ಬೇರೆ ಕಂಪನಿಗಳು ಖರೀದಿಸುವ ಬೇಲ್ ಗಳನ್ನು ಇವರೇ ಅವರಿಂದ ಖರೀದಿ ಮಾಡುತ್ತಾರೆ ಆಗಾಗಿ ನಮ್ಮ ರೈತರು ಖುಷಿ ಪಡುವ ಅಗತ್ಯವಿಲ್ಲ, ತಂಬಾಕು ಬೆಳೆಗಾರರಿಗೆ ಸರಾಸರಿ ಬೆಲೆ ನಿಗದಿ ಮಾಡಬೇಕು ಎಂದು ಕರ್ನಾಟಕ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿಗಳು ಚರ್ಚಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಇದರಿಂದ ಬೆಳೆಗಾರರ ಹಿತ ಕಾಪಾಡಿದ ಹಾಗಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ತಂಬಾಕು ಕೃಷಿಯಲ್ಲಿ ಸಾಧನೆಗೈದ 10 ಮಂದಿ ರೈತರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು. ಹೆಚ್.ಡಿ.ಕೋಟೆ ಶಾಸಕ ಅನೀಲ್ ಚಿಕ್ಕಮಾದು, ಕೆ.ಆರ್.ನಗರ ಶಾಸಕ ಡಿ.ರವಿಶಂಕರ್, ಭಾರತೀಯ ತಂಬಾಕು ಮಂಡಳಿ ನಿರ್ದೆಶಕ ಶರತ್ ಟಂಡನ್, ಸಿಟಿಆರ್ಐ ಮುಖ್ಯಸ್ಥ ರಾಮಕೃಷ್ಣನ್, ಮೈಸೂರು ವ್ಯವಸ್ಥಾಪಕ ನಿರ್ದೆಶಕ ಬ್ರಿಜುಭೂಷಣ್, ಡಾ.ಶ್ರೀಧರ್ ಬಾಬು, ತಂಬಾಕು ಮಂಡಳಿ ವ್ಯವಸ್ಥಾಪಕ ಕೃಷ್ಣಕುಮಾರ್, ಸೇರಿದಂತೆ ಸಾವಿರಾರು ರೈತರು ಹಾಜರಿದ್ದರು.