Advertisement

“ಹೆದರಿಸಿ’ಕಡಿಮೆ ಬೆಲೆಗೆ ತಂಬಾಕು ಮಾರಿಸಿದ್ರು

01:13 PM Mar 17, 2021 | Team Udayavani |

ಪಿರಿಯಾಪಟ್ಟಣ: ಕೋವಿಡ್ ಸಂಕಷ್ಟದಲ್ಲೂ ತಂಬಾಕು ಬೆಳೆದಿದ್ದ ರೈತರು ಈ ಬಾರಿ ಕಡಿಮೆ ಬೆಲೆಗೆ ಬೆಳೆ ಮಾರಾಟ ಮಾಡಿನಷ್ಟಕ್ಕೆ ಗುರಿಯಾಗಿದ್ದಾರೆ. ಕೋವಿಡ್ ಭಯದ ಹಿನ್ನೆಲೆಯಲ್ಲೇ ಬಹುತೇಕರೈತರು ಆರಂಭದಲ್ಲೇ ತಂಬಾಕನ್ನುಕೆ.ಜಿ.ಗೆ ಅತ್ಯಲ್ಪ 130-150 ರೂ.ಗೆ ಮಾರಾಟ ಮಾಡಿ ಕೈ ಸುಟ್ಟುಕೊಂಡಿದ್ದಾರೆ.

Advertisement

ಇದೀಗ ತಂಬಾಕು ಬೆಲೆ ದಾಖಲೆಯ270 ರೂ. ಏರಿಕೆಯಾಗಿದ್ದರೂ ರೈತರ ಬಳಿತಂಬಾಕು ಇಲ್ಲ. ಕೊರೊನಾ ನೆಪವೊಡ್ಡಿ ಮತ್ತೆ ಲಾಕ್‌ಡೌನ್‌ ಘೋಷಿಸಿದರೆ ಮಾರುಕಟ್ಟೆ ಸ್ಥಗಿತವಾಗುತ್ತದೆಎಂಬ ಭೀತಿ ಹುಟ್ಟಿ ಸಿ ದ್ದರಿಂದ ರೈತರು ಆರಂಭದಲ್ಲೇ ತಮ್ಮಲ್ಲಿದ್ದ ತಂಬಾ ಕನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಇದೀಗ ಬೆಲೆ ಏರಿಕೆ ಮಾಡಿದ್ದಾರೆ.ಆದರೆ, ತಮ್ಮ ಬಳಿ ತಂಬಾಕು ಇಲ್ಲ. ಕಂಪನಿಗಳು ಪರಿಸ್ಥಿತಿಯ ಲಾಭ ಪಡೆದು ತಮ್ಮನ್ನು ಸಂಕಷ್ಟಕ್ಕೆಸಿಲುಕಿಸಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಹುಸಿ ಭರವಸೆ: ಕೋವಿಡ್ ಹಿನ್ನೆಲೆಯಲ್ಲಿ 2021 ಸಾಲಿನಲ್ಲಿ ರೈತರು ತಂಬಾಕು ಬೆಳೆಯುವುದು ಬೇಡ.ಈ ಬಾರಿ ಬೆಳೆ ರಜೆ (ಕ್ರಾಪ್‌ ಹಾಲಿ ಡೇ) ಘೋಷಿಸುವಂತೆ ಸರ್ಕಾರಕ್ಕೆ ರೈತರು ಸೇರಿದಂತೆ ಎಂಎಲ್‌ಸಿಎಚ್‌.ವಿಶ್ವನಾಥ್‌ ಹಾಗೂ ಸ್ಥಳೀಯ ಜನಪ್ರತಿನಿಧಿಗಳುಮನವಿ ಮಾಡಿದ್ದರು. ಆದರೆ, ಈ ಭಾಗದ ಸಂಸದ mಪ್ರತಾಪ್‌ ಸಿಂಹ ಮಧ್ಯಪ್ರವೇಶಿಸಿ, “ರೈತರ ಹಿತಕಾಯಲು ನಾವು ಸಿದ್ಧರಿದ್ದೇವೆ. ತಂಬಾಕಿಗೆ ಉತ್ತಮಬೆಲೆ ಕೊಡಿಸುವ ಜವಾಬ್ದಾರಿ ನನ್ನದು. ಧೈರ್ಯವಾಗಿತಂಬಾಕು ಬೆಳೆಯಿರಿ’ ಎಂದು ರೈತರನ್ನು ಹುರಿದುಂಬಿದ್ದರು. ಆದರೆ ಅವರು ಮಾತು ಕೊಟ್ಟಂತೆ ನಡೆದು ಕೊಳ್ಳಲಿಲ್ಲ. ಆರಂಭದಲ್ಲಿ ಕಡಿಮೆ ಬೆಲೆ ಇದ್ದರೂ ಸಂಸದರು ಧ್ವನಿ ಎತ್ತಲಿಲ್ಲ ಎಂಬುದು ಬೆಳೆಗಾರರ ದೂರು. ತಾಲೂಕಿನಲ್ಲಿ 27 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ 53ಸಾವಿರ ರೈತರು ತಂಬಾಕು ಬೆಳೆದಿದ್ದರು. 2020ರ ಸೆಪ್ಟೆಂ ಬರ್‌ನಲ್ಲಿ ತಂಬಾಕು ಹರಾಜು ಪ್ರಕ್ರಿಯೆ ಪ್ರಾರಂಭಗೊಂಡು 14ಕ್ಕೂ ಹೆಚ್ಚು ಖರೀದಿದಾರ ಕಂಪನಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವು.

ಬೆಲೆ ಕೊಡಿಸಲಿಲ್ಲ: ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್‌ನಲ್ಲಿ ಖರೀದಿ ಪ್ರಕ್ರಿಯೆ ಶುರುವಾಗಿತ್ತು. ಆರಂಭದಲ್ಲಿ ಪ್ರತಿ ಕೆ.ಜಿ.ಗೆ. 135ರಿಂದ 150 ರೂ.ವರೆಗೆ ಮಾತ್ರ ಬೆಲೆ ಸಿಗುತ್ತಿತ್ತು. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರು ತಾವು ಬೆಳೆದ ತಂಬಾಕಿಗೆ ನಿಗದಿತ ಬೆಂಬಲ ಬೆಲೆ ಕೊಡಿಸುವಂತೆ ತಂಬಾಕು ಮಂಡಳಿ, ಜನ ಪ್ರತಿನಿಧಿಗಳು ಹಾಗೂ ಕಂಪನಿಗಳ ಮುಂದೆ ಅಂಗಲಾಚಿದರೂ ಯಾರೊಬ್ಬರೂ ಸ್ಪಂದಿಸಿರಲಿಲ್ಲ.

ಲಾಕ್‌ಡೌನ್‌ ಭೀತಿ ಹುಟ್ಟಿಸಿದ್ದರಿಂದ ತಂಬಾಕನ್ನುಸಿಕ್ಕಿದ ಬೆಲೆಗೆ ಮಾರಾಟ ಮಾಡಲು ಮುಗಿದು ಬಿದ್ದರು. ಇದನ್ನೇ ಎದುರು ನೋಡುತ್ತಿದ್ದ ಕಂಪನಿಗಳುಅತ್ಯಂತ ಕಡಿಮೆ ಬೆಲೆ ನೀಡಿ, ತಂಬಾಕನ್ನು ಅವಧಿ ಮುಗಿಯುವ ಮುನ್ನವೇ ಅಷ್ಟೋ ಇಷ್ಟೋ ನೀಡಿ ಶೇ.90 ರಷ್ಟು ತಂಬಾಕನ್ನು ಖರೀದಿ ಮಾಡಿದವು. ತಂಬಾಕು ಮಂಡಳಿ ಹಾಗೂ ಖರೀದಿದಾರ ಕಂಪನಿಗಳ ಒಳ ಮರ್ಮ ಅರಿಯದೆ ರೈತರು, ತಮ್ಮ ಬಳಿ ಇದ್ದ ತಂಬಾಕನ್ನು ಮಾರಿ ಬಿಟ್ಟರು. ತಂಬಾಕು ಮಾರುಕಟ್ಟೆ ಹರಾಜು ಪ್ರಕ್ರಿಯೆ ಈತಿಂಗಳು ಅಂತ್ಯವಾಗಲಿದೆ. ಆದರೆ, ರೈತರ ಬಳಿತಂಬಾಕು ಇಲ್ಲ. ಇದನ್ನೇ ನೆಪ ಮಾಡಿಕೊಂಡ ಕಂಪನಿಗಳು ರೈತರ ಮೂಗಿಗೆ ತುಪ್ಪ ಸವರಲು ಮುಂದಾಗಿವೆ.

Advertisement

ರೈತರ ಬಳಿ ತಂಬಾಕು ಇದ್ದಾಗ ಸೂಕ್ತ ಬೆಲೆ ನೀಡಲಿಲ್ಲ, ಇದ್ದ ತಂಬಾಕು ಬೆಲ್‌ ಗಳಾನ್ನೆಲ್ಲಾ ಅತ್ಯಂತ ಕಡಿಮೆ ದರ ನೀಡಿ ಖರೀದಿ ಮಾಡಿದ ಇದೇ ಕಂಪನಿಗಳು ಇಂದುಉತ್ತಮ ದರ ನೀಡುತ್ತೇವೆ ಎನ್ನುತ್ತಿವೆ. ಆದರೆ,ಆರಂಭದಲ್ಲೇ ತಂಬಾಕು ಮಾರಿಕೊಂಡಿರುವ ರೈತರು ಮಾರುಕಟ್ಟೆ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಭಯ ಹುಟ್ಟಿಸಿದ್ದರಿಂದ ತಂಬಾಕು ಮಾರಿದೆವು :

ಈ ಬಾರಿ 9 ಎಕರೆ ಜಮೀನಿನಲ್ಲಿ 10 ಸಾವಿರ ಕೆ.ಜಿ ತಂಬಾಕು ಬೆಳೆದಿದ್ದೆವು. ಮಂಡಳಿ ಮತ್ತು ಕಂಪನಿಗಳುಕೋವಿಡ್ ಸಮಸ್ಯೆಯನ್ನು ಮುಂದಿಟ್ಟು ಬೇಗ ತಂಬಾಕು ಮಾರಾಟ ಮಾಡಿ,ಇಲ್ಲದಿದ್ದರೆ ಲಾಕ್‌ಡೌನ್‌ ಸಮಸ್ಯೆ ಎದುರಾದರೆ ಮಾರುಕಟ್ಟೆ ಬಂದ್‌ಮಾಡಲಾಗುತ್ತದೆ ಎಂಬ ಭೀತಿ ಹುಟ್ಟಿಸಿದ್ದವು. ಹೀಗಾಗಿ ತರಾತುರಿಯಲ್ಲಿ ತಮ್ಮ ಬಳಿಇದ್ದ ತಂಬಾಕನ್ನು ಅತ್ಯಂತ ಕಡಿಮೆ ಬೆಲೆಗೆ ತಂಬಾಕು ಮಾರಾಟ ಮಾಡಿದ್ದೇವೆ. ಈಗಉತ್ತಮ ಬೆಲೆ ನೀಡುತ್ತಿದ್ದೇವೆ ಎನ್ನುತ್ತಾರೆ. ಆದರೆ, ರೈತರ ಬಳಿ ಹುಡುಕಿದರೂ 100ಕೆ.ಜಿ ತಂಬಾಕು ಕೂಡ ಸಿಗುತ್ತಿಲ್ಲ. ಪರಿಸ್ಥಿತಿಯ ಲಾಭ ಪಡೆದ ಕಂಪನಿಗಳು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ ಎಂದು ತಂಬಾಕು ಬೆಳೆಗಾರ ಹಿಟ್ನಳ್ಳಿ ಮಂಜು ತಿಳಿಸಿದ್ದಾರೆ.

ರೈತರು ಆರಂಭದಲ್ಲಿಯೇ ತಂಬಾಕು ಮಾರಾಟ ಮಾಡಿದ ಪರಿಣಾಮ ತೂಕ ಮತ್ತು ಗುಣಮಟ್ಟದಲ್ಲಿ ಯಾವುದೇ ಸಮಸ್ಯೆಯಾಗಲಿಲ್ಲ. ಸದ್ಯದಲ್ಲಿಯೇ ಮಾರುಕಟ್ಟೆ ಅಂತ್ಯಗೊಳ್ಳುವ ಕಾರಣಕ್ಕೆ ಖರೀದಿದಾರ ಕಂಪನಿಗಳಿಗೆ ಹೆಚ್ಚಿನ ತಂಬಾಕು ಅಗತ್ಯವಾಗಿ ಬೇಕಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಬೆಲೆ ನೀಡಿ ರೈತರಿಂದ ತಂಬಾಕು ಖರೀದಿಸಲಾಗುತ್ತಿದೆ. ಮಾರಣ್ಣ, ತಂಬಾಕು ಹರಾಜು ಅಧೀಕ್ಷಕ, ಪಿರಿಯಾಪಟ್ಟಣ

 

ಪಿ.ಎನ್‌. ದೇವೇಗೌಡ

Advertisement

Udayavani is now on Telegram. Click here to join our channel and stay updated with the latest news.

Next