ಹುಣಸೂರು: ತಂಬಾಕು ಮಂಡಳಿಯ 2022 ರ ತಿದ್ದುಪಡಿ ಮಸೂದೆ ಸಂಪೂರ್ಣವಾಗಿ ತಂಬಾಕು ರೈತರಿಗೆ ವಿರುದ್ಧವಾಗಿದ್ದು, ಯಾವುದೇ ಕಾರಣಕ್ಕೂ ಇಂತಹ ಮಸೂದೆಗಳನ್ನು ಜಾರಿಗೆ ತರುವ ಮೂಲಕ ಹೊಗೆಸೊಪ್ಪು ಬೆಳೆಗಾರರಿಗೆ ಅನ್ಯಾಯ ಮಾಡಬಾರದೆಂದು ಒತ್ತಾಯಿಸಿ ತಂಬಾಕು ಬೆಳೆಗಾರರು ತಂಬಾಕು ಮಂಡಳಿಯ ಪ್ರಾದೇಶಿಕ ಕಚೇರಿಯಲ್ಲಿ ಕರ್ನಾಟಕ ತಂಬಾಕು ಮಂಡಳಿ ವಿಸ್ತರಣಾ ವ್ಯವಸ್ಥಾಪಕ ದಾಮೋದರ್ ಪ್ರಾದೇಶಿಕ ವ್ಯವಸ್ಥಾಪಕ ಸತ್ಯಪ್ರಸಾದ್‌ರಿಗೆ ಹುಣಸೂರು ತಾಲೂಕಿನ ತಂಬಾಕು ಬೆಳೆಗಾರರು ಮನವಿ ಪತ್ರ ಸಲ್ಲಿಸಿದರು.
ತಂಬಾಕು ಮಂಡಳಿ ಪ್ರಾದೇಶಿಕ ಕಚೇರಿಯಲ್ಲಿ ಮನವಿ ಸಲ್ಲಿಸಿದ ನಂತರ ಮಾತನಾಡಿದ ಜಿಲ್ಲಾ ರೈತಸಂಘದ ಅಧ್ಯಕ್ಷ ಹೂಸೂರು ಕುಮಾರ್, ತಂಬಾಕುಬೆಳೆಗಾರರಾದ ಹರವೆಮೂರ್ತಿಯವರು, ತಂಬಾಕು ಮಾರಾಟದ ಮೇಲಿನ ಶುಲ್ಕದ ದರವನ್ನು ಶೇ 2 ರಿಂದ 4 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ ಆದರೆ ಇದು ತಂಬಾಕು ಬೆಳೆಗಾರರಿಗೆ ಹೆಚ್ಚಿನ ಹೊರೆಯಾಗುತ್ತಿದೆ ತಂಬಾಕು ಮಂಡಳಿಯು ಪ್ರತಿವ?Àð ಬೆಳೆಗಾರರಿಂದ ಅಧಿಕೃತ ಕೋಟಾದ ಹೆಚ್ಚುವರಿ ಮಾರಾಟ ಅನಧಿಕೃತ ಬೆಳೆಗಾರರ ಮಾರಾಟ ಮತ್ತು ನವೀಕರಣ ಶುಲ್ಕ ದಿಂದ ದಂಡವನ್ನು ಸಂಗ್ರಹಿಸುತ್ತಿದ್ದು ಪ್ರಸ್ತುತ ಮಂಡಳಿಯಲ್ಲಿ ಸರಿಸುಮಾರು 657.02 ಕೋಟಿ ರೂಗಳ ಬಂಡವಾಳವನ್ನು ಹೊಂದಿದೆ.
ಜೊತೆಗೆ ಈ ಹಣವನ್ನು ಠೇವಣಿ ಇಡುವ ಮೂಲಕ ದೊಡ್ಡ ಬಡ್ಡಿ ಗಳಿಸುತ್ತಿದೆ ಅಲ್ಲದೆ ೧೯೮೪ ರಿಂದ ಇಲ್ಲಿಯವರೆಗೆ ತಂಬಾಕು ಬೆಲೆಯೊಂದಿಗೆ ಶುಲ್ಕವನ್ನು ಹೆಚ್ಚಿಸಲಾಗಿದೆ ಶುಲ್ಕ ಸಂಗ್ರಹದಲ್ಲಿ ಹೆಚ್ಚಳವಾಗಿರುವುದರಿಂದ ತಂಬಾಕು ಮಂಡಳಿಗೆ ಆದಾಯದಲ್ಲಿ ಗಣನೀಯ ಹೆಚ್ಚಳವಾಗಿದೆ. ಹೀಗೆ ಮಂಡಳಿಯಲ್ಲಿ ಕೋಟ್ಯಾಂತರ ರೂಗಳ ರೈತರ ದಂಡ ಮತ್ತಿತರ ಹಣವಿದ್ದು, ತಮ್ಮ ಕಚೇರಿಯ ಖರ್ಚುವೆಚ್ಚಗಳನ್ನು ಪೂರೈಸಲು ಸಾಕಷ್ಟು ಹಣವನ್ನು ಹೊಂದಿದ್ದರೂ ತಂಬಾಕು ಮಂಡಳಿಯು ಸ್ವಾವಲಂಬನೆಗಾಗಿ ಶುಲ್ಕವನ್ನು ಹೆಚ್ಚಿಸುವ ಅಗತ್ಯವಿಲ್ಲ ಆದ್ದರಿಂದ ತಂಬಾಕು ಮಂಡಳಿ ಕಾಯ್ದೆ 1975ಕ್ಕೆ ತಿದ್ದುಪಡಿ ತರುವ ಸಂದರ್ಭದಲ್ಲಿ ತಂಬಾಕು ಬೆಳೆಗಾರರ ಹಿತಾಸಕ್ತಿ ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಮತ್ತು ಸಲಹೆಗಳನ್ನು ಪಾಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತಸಂಘದ ಅಧ್ಯಕ್ಷ ಹೊಸೂರು ಕುಮಾರ್ ತಾಲೂಕು ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ತಂಬಾಕುಬೆಳೆಗಾರರಾದ ಹರವೆಮೂರ್ತಿ, ಕಟ್ಟೆಮಳಲವಾಡಿ ಅಶೋಕ್, ತಟ್ಟೆಕೆರೆ ಶ್ರೀನಿವಾಸ, ಮರೂರು ಚಂದ್ರಶೇಖರ್,ಸಾಲಿಗ್ರಾಮ ಕೃಷ್ಣ ಗೌಡ, ಸೇರಿದಂತೆ ತಂಬಾಕು ಬೆಳೆಗಾರರು, ರೈತರು ಹಾಜರಿದ್ದರು.