ಚೇಳೂರು: ಹೋಬಳಿಯ ಪುಲಗಲ್ಲು ಗ್ರಾಪಂನ ಶೀತಿರೆಡ್ಡಿಪಲ್ಲಿ ಗ್ರಾಮದ ಸರ್ಕಾರಿ ಕಿರಿಯ ಶಾಲಾ ಆವರಣದಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಳೇ ಕಲ್ಲು ಕಟ್ಟಡ ತೆರವು ಮಾಡಿ ಜೀವ ಹಾನಿ ತಪ್ಪಿಸಬೇಕಿದೆ.
ಶೀತಿರೆಡ್ಡಿಪಲ್ಲಿ ಈ ಕಿರಿಯ ಸರ್ಕಾರಿ ಶಾಲೆಯಲ್ಲಿ ಒಟ್ಟು 25 ಮಕ್ಕಳಿದ್ದು, ಇಬ್ಬರು ಶಿಕ್ಷಕರಿದ್ದಾರೆ. ಶಾಲೆಗೆ ಕೊಠಡಿಗಳ ಕೊರತೆ ಇದೆ. ಜೊತೆಗೆ ಆವರಣಕ್ಕೆ ಕಾಂಪೌಂಡ್ ವ್ಯವಸ್ಥೆ ಕೂಡ ಇಲ್ಲ, ಶಾಲೆಯ ಚಾವಣೆ ಮಳೆ ಬಂದಾಗ ಸೋರಿಕೆ ಆಗುತ್ತದೆ.
ಜೊತೆಗೆ 1972ನೇ ಸಾಲಿನಲ್ಲಿ ನಿರ್ಮಿಸಿದ ಹಳೇ ಕಲ್ಲು ಕಟ್ಟಡ ಸಹ ಅವಸಾನದ ಹಂಚಿಗೆ ತಲುಪಿದೆ. ಇದನ್ನು ಗಮನ ಹರಿಸುವವರೇ ಇಲ್ಲದಂತಾಗಿದೆ. ಶಾಲೆಯ ಹಳೇ ಕಲ್ಲು ಕಟ್ಟಡ ಅವಸಾನದ ಅಂಚಿಗೆ ತಲುಪಿದ್ದು, ಇದು ವಿದ್ಯಾರ್ಥಿಗಳ ಆತಂಕಕ್ಕೆಕಾರಣವಾಗಿದೆ.ಕೂಡಲೇ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ನೆಲಸಮ ಮಾಡುವಂತೆ ಅಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಇದನ್ನೂ ಓದಿ:ಹಾರ್ಟಿ ಕ್ಲಿನಿಕ್‌ಗೆ ಮತ್ತೆ ಅತಂತ್ರ ಸ್ಥಿತಿ
ಶಾಲಾ ದಾಖಲಾತಿ ಒದ್ದೆ: ಶಾಲೆಯಲ್ಲಿ 1 ರಿಂದ5ನೇ ತರಗತಿ ಇದ್ದು, ದಾಖಲಾತಿಗಳು ಮಳೆ ಬಂದಾಗ ಚಾವಣಿ ಸೋರಿ ಒದ್ದೆಯಾಗುತ್ತದೆ. ಪೀಠೊಕರಣ, ಕಬ್ಬಿಣದ ಕಂಬಿಗಳು, ಸಲಾಖೆಗಳು, ಇತರೆ ವಸ್ತುಗಳು ತುಕ್ಕು ಹಿಡಿದು ಮೂಲ ಸ್ವರೂಪವನ್ನೇ ಕಳೆದುಕೊಳ್ಳುತ್ತಿವೆ. ಕೂಡ ಲೇ ಸಂಬಂಧಪಟ್ಟ ಅಧಿಕಾರಿಗಳು ಶಾಲೆಗೆ ನೂತನ ಕೊಠಡಿಗಳನ್ನು ಕಟ್ಟಿಸಿಕೊಂಡು ಮಕ್ಕಳು, ಶಾಲಾ ಶಿಕ್ಷಕರು ಮುಕ್ತವಾಗಿ ಕೆಲಸ ಮಾಡಲು ಸಾಧ್ಯ ವಾಗದಂತಹ ಪರಿಸ್ಥಿತಿ ಇದೆ.