Advertisement

ಬಡವರು-ಕೃಷಿಕರ ನೆರವಿಗೆ ಹಲವು ಯೋಜನೆ ಜಾರಿ

04:49 PM May 21, 2020 | Suhan S |

ಕಾರಟಗಿ: ಕೋವಿಡ್ ಲಾಕ್‌ ಡೌನ್‌ದಿಂದ ತೊಂದರೆಗೊಳಗಾದ ಬಡವರು, ಕೂಲಿಕಾರ್ಮಿಕರು, ಕೃಷಿಕರಿಗೆ ಸಿಎಂ ಯಡಿಯೂರಪ್ಪ ಹಲವು ಯೋಜನೆ ಜಾರಿಗೆ ತಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

Advertisement

ಪಟ್ಟಣದ ಪಬ್ಲಿಕ್‌ ಶಾಲೆ ಆವರಣದ ಸಿದ್ದೇಶ್ವರ ರಂಗಮಂದಿರಲ್ಲಿ ಮಂಗಳವಾರ ಶಾಸಕ ಬಸವರಾಜ ದಡೇಸುಗೂರು ಹಮ್ಮಿಕೊಂಡ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಲಾಕ್‌ ಡೌನ್‌ದಿಂದ ಸಂಕಷ್ಟಕ್ಕೊಳಗಾದ ಎಲ್ಲ ಬಡ ಕುಟುಂಬಗಳಿಗೆ ಪಡಿತರ ದೊರೆಯುವಂತೆ ಬಿಜೆಪಿ ಸರ್ಕಾರ ಮಾಡಿದೆ. ಬಡ ಕೃಷಿ ಕೂಲಿಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯಡಿ ಹಲವು ಕಾಮಗಾರಿ ಆರಂಭಿಸಲಾಗಿದೆ. ಗ್ರಾಮೀಣ ಜನತೆ ಇದರ ಪ್ರಯೋಜನ ಪಡೆಯಬೇಕು ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಲಾಕ್‌ಡೌನ್‌ದಿಂದ ಸಂಕಷ್ಟಕ್ಕೊಳಗಾದ ಕನಕಗಿರಿ ಕ್ಷೇತ್ರದ ಬಡವರಿಗೆ ಶಾಸಕ ಬಸವರಾಜ ದಡೇಸುಗೂರ ಅಕ್ಕಿ, ದಿನಸಿ ಕಿಟ್‌ ವಿತರಿಸಿದ್ದು ಶ್ಲಾಘನೀಯ. ಜನತೆ ಸಾಮಾಜಿಕ ಅಂತರ ಕಾಪಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೋವಿಡ್ ತಡೆಗೆ ಸಹಕರಿಸಬೇಕು ಎಂದರು.

ಸಂಸದ ಸಂಗಣ್ಣ ಕರಡಿ, ಶಾಸಕ ಬಸವರಾಜ ದಡೇಸುಗೂರ, ಶಾಸಕ ಪರಣ್ಣ ಮನವಳ್ಳಿ ಬಡವರಿಗೆ ದಿನಸಿ ಕಿಟ್‌ ವಿತರಿಸಿದರು. ಬಿ.ಜಿ.ಅರಳಿ, ಜಿ.ತಿಮ್ಮನಗೌಡ, ವಿರೇಶ ಸಾಲೋಣಿ, ಬಿಜೆಪಿ ಮಂಡಳ ಅಧ್ಯಕ್ಷ ಚಂದ್ರಶೇಖರ ಮುಸಾಲಿ, ರಾಮಮೋಹನ, ನಾಗರಾಜ ಬಿಲ್ಗಾರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next