Advertisement

250 ಸ್ಥಾನಗಳಲ್ಲಷ್ಟೇ ಕಾಂಗ್ರೆಸ್‌ ಸ್ಪರ್ಧೆ?

06:00 AM Jun 17, 2018 | |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಲೆ ತಪ್ಪಿಸುವ ಸಲುವಾಗಿ 2019ರಲ್ಲಿ ಕೇವಲ 250 ಸ್ಥಾನಗಳಲ್ಲಿ ಕಣಕ್ಕಿಳಿಯಲು ಕಾಂಗ್ರೆಸ್‌ ಚಿಂತನೆ ನಡೆಸುತ್ತಿದೆ. ಉಳಿದ ಸ್ಥಾನಗಳನ್ನು ಇತರ ಪ್ರಾದೇಶಿಕ ಪಕ್ಷಗಳಿಗೆ ನೀಡಿ ಗೆದ್ದುಬರುವ ಇರಾದೆ ಹೊಂದಿದೆ. ಒಂದು ವೇಳೆ ಕಾಂಗ್ರೆಸ್‌ ಕೇವಲ 250 ಸ್ಥಾನಗಳಲ್ಲಿ ಮಾತ್ರ ಕಣಕ್ಕಿಳಿದರೆ ಸ್ವಾತಂತ್ರಾ ನಂತರ ಇದೇ ಮೊದಲ ಬಾರಿಗೆ ಈ ಪ್ರಮಾಣದ ಕಡಿಮೆ ಸ್ಥಾನದಲ್ಲಿ ಸ್ಪರ್ಧಿಸಿದಂತಾಗಲಿದೆ. ಮಾಜಿ ಸಚಿವ  ಎ.ಕೆ.ಆ್ಯಂಟನಿ ನೇತೃತ್ವದ ಸಮಿತಿಯು ಈ ಬಗ್ಗೆ ಯೋಜನೆ ರೂಪಿಸಿದ್ದು, ಎಲ್ಲಾ ರಾಜ್ಯ ಮತ್ತು ಜಿಲ್ಲಾ ಘಟಕಗಳಿಂದ ಅಭಿಪ್ರಾಯ ಕೋರಿದೆ. ಈ ಘಟಕಗಳ ಅಭಿಪ್ರಾಯ ಕ್ರೋಢೀಕರಿಸಿ,  ಅಧ್ಯಕ್ಷ ರಾಹುಲ್‌ ಗಾಂಧಿ ಜತೆ ಚರ್ಚಿಸಿದ ನಂತರ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ ಎಂದು “ಝೀ ನ್ಯೂಸ್‌’ ವರದಿ ಮಾಡಿದೆ.

Advertisement

ಕ್ಲೀನ್‌ ಇಮೇಜ್‌ ಇರುವಂಥವರಿಗೆ ಟಿಕೆಟ್‌ ನೀಡುವ ಪ್ರಸ್ತಾಪವನ್ನೂ ಆ್ಯಂಟನಿ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next