Advertisement

ದೇಸಿ ಸಂಸ್ಕೃತಿ ಉಳಿಸಲು ಎಲ್ಲರ ಸಹಕಾರ ಮುಖ್ಯ

12:47 PM Mar 15, 2022 | Team Udayavani |

ರಬಕವಿ-ಬನಹಟ್ಟಿ: ಭಾರತೀಯ ಹಬ್ಬಗಳು ದೇಸಿ ಸಂಸ್ಕೃತಿಯ ಪ್ರತೀಕವಾಗಿವೆ. ನಮ್ಮ ಹಬ್ಬಗಳ ಆಚರಣೆಯಲ್ಲಿ ಮಹತ್ವ ಅಡಗಿದೆ. ಇಂದಿನ ದಿನಗಳಲ್ಲಿ ದೇಸಿ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ ಎಂದು ರಬಕವಿಯ ಡಾ| ಪದ್ಮಜೀತ ನಾಡಗೌಡ ಫೌಂಡೇಶನ್‌ ಮುಖ್ಯಸ್ಥ ಡಾ| ಪದ್ಮಜೀತ ನಾಡಗೌಡ ಪಾಟೀಲ ಹೇಳಿದರು.

Advertisement

ಸ್ಥಳೀಯ ಈಶ್ವರಲಿಂಗ ಮೈದಾನದಲ್ಲಿ ಹೋಳಿ ಹಬ್ಬದ ನಿಮಿತ್ತ ಹಮ್ಮಿಕೊಂಡ ಹಲಗೆ ಮೇಳ ಮತ್ತು ಹೋಳಿ ಹಬ್ಬದ ಹಾಡುಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಾಹಿತಿ ಸಿದ್ಧರಾಜ ಪೂಜಾರಿ ಮಾತನಾಡಿ, ಹೋಳಿ ಪವಿತ್ರವಾಗಿದೆ. ಈ ಹಬ್ಬದ ಅರ್ಥವನ್ನು ಅರಿತು ಆಚರಣೆ ಮಾಡಬೇಕು. ಹೋಳಿ ಹಬ್ಬದ ಸಂದರ್ಭದಲ್ಲಿ ಹಾಡುವ ಹಾಡುಗಳು ಅರ್ಥಪೂರ್ಣವಾಗಿವೆ. ಹೋಳಿ ಹಬ್ಬದ ಹಾಡುಗಳನ್ನು ಹಾಡುವ ಕಲಾವಿದರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಅರ್ಥಪೂರ್ಣವಾಗಿವೆ ಎಂದು ಹೇಳಿದರು. ತಾಲೂಕಿನಲ್ಲಿ ಹಲಗೆ ನುಡಿಸುವ ಉತ್ತಮ ಕಲಾವಿದರಿದ್ದಾರೆ. ಅವರಿಗೆ ಪ್ರೋತ್ಸಾಹ ಅಗತ್ಯವಾಗಿದೆ. ನಮ್ಮಿಂದ ದೂರವಾಗುತ್ತಿರುವ ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಡಾ| ಪದ್ಮಜೀತ ನಾಡಗೌಡ ಫೌಂಡೇಶನ್‌ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದರು.

ರಬಕವಿ ಬನಹಟ್ಟಿ ತಾಲೂಕಿನ ಹನ್ನೆರಡು ಹಲಗೆ ಮೇಳಗಳು ಮತ್ತು ಎಂಟು ಹಾಡು ಹಾಡುವ ತಂಡಗಳು ಭಾಗವಹಿಸಿದ್ದವು. ಶ್ರೀಕಾಂತ ಕೆಂಧೂಳಿ ನಿರೂಪಿಸಿದರು. ಸಿದ್ಧನಗೌಡ ಪಾಟೀಲ, ಶ್ರೀಶೈಲ ಧಬಾಡಿ, ರಾಜಶೇಖರ ಮಾಲಾಪುರ, ಶಂಕರ ಜಾಲಿಗಿಡದ, ಪ್ರಕಾಶ ಮಂಡಿ, ಪ್ರೊ| ಮಲ್ಲಿಕಾರ್ಜುನ ಹುಲಗಬಾಳಿ, ಪ್ರೊ.ಎಂ.ಎಸ್‌. ಬದಾಮಿ, ಸಂಜಯ ಅಮ್ಮಣಗಿಮಠ, ಡಾ| ಪಿ.ವಿ.ಪಟ್ಟಣ, ಶಂಕರ ಸೋರಗಾವಿ, ಗಜಾನನ ನಾಗರಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next