Advertisement

ಖಾಸಗಿ ಶಾಲೆಗಳಿಗೆ ವೇತನಾನುದಾನಕ್ಕೆ ಆಗ್ರಹ

12:49 PM Nov 03, 2019 | Suhan S |

ಹುಬ್ಬಳ್ಳಿ: 1995ರ ನಂತರ ಆರಂಭಗೊಂಡ ಅನುದಾನ ರಹಿತ ಶಾಲಾ-ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಹಾಗೂ ನೌಕರರ ಹೋರಾಟ ಸಮನ್ವಯ ಸಮಿತಿ ಹುಬ್ಬಳ್ಳಿ ಶಹರ ಹಾಗೂ ಗ್ರಾಮೀಣ ಘಟಕದವರು ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಮಿನಿ ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ ನಡೆಸಿದ ಘಟಕಗಳ ಸದಸ್ಯರು, ಎನ್‌ಪಿಎಸ್‌ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ವಿಪ ಸದಸ್ಯ ಬಸವರಾಜ ಹೊರಟ್ಟಿ ವರದಿ ಅನುಸಾರ ಕಾಲ್ಪನಿಕ ವೇತನ ಬಡ್ತಿ ಯಥಾವತ್ತಾಗಿ ಜಾರಿಗಳಿಸಬೇಕು. 2006ರ ನಂತರ ಅನುದಾನಕ್ಕೊಳಪಟ್ಟ ಹಾಗೂ ನೇಮಕಗೊಂಡ ನೌಕರರಿಗೆ ಸರಕಾರಿ ನೌಕರರಿಗೆ ಸಿಗುವ ಸೌಲಭ್ಯ ಒದಗಿಸಬೇಕು. ಅನುದಾನಿತ ಪ್ರೌಢಶಾಲೆ, ಪಿಯು ಕಾಲೇಜುಗಳಲ್ಲಿ ಖಾಲಿ ಹುದ್ದೆ ಭರ್ತಿ ಮಾಡಬೇಕು. ಜ್ಯೋತಿ ಸಂಜೀವಿನಿಯನ್ನು ಅನುದಾನಿತ ಪ್ರೌಢಶಾಲಾ ಸಿಬ್ಬಂದಿಗೂ ಜಾರಿಗೊಳಿಸಬೇಕು.

ಶಿಕ್ಷಕರ ಮತ್ತು ಮಕ್ಕಳ ಅನುಪಾತ 1:50 ಜಾರಿಗೊಳಿಸಬೇಕು. ವಿಭಾಗದಿಂದ ವಿಭಾಗಕ್ಕೆ ವರ್ಗಾವಣೆ ಹೊಂದಿದ ಪ್ರಾಥಮಿಕ ಮತ್ತು ಸರಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಸೇವೆಗೆ ಸೇರಿದ ದಿನಾಂಕದಿಂದ ಜ್ಯೇಷ್ಠತೆ ಪರಿಗಣಿಸಬೇಕು. ಅನುದಾನ ರಹಿತ ಆಂಗ್ಲ ಮಾಧ್ಯಮ ಶಾಲೆಗಳ ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು. ನಂತರ ತಹಶೀಲ್ದಾರ್‌ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಶಹರ ಘಟಕದ ಅಧ್ಯಕ್ಷ ಜಗದೀಶ ಕಲ್ಯಾಣಶೆಟ್ಟರ, ಉಪಾಧ್ಯಕ್ಷ ಜಗದೀಶ ದ್ಯಾವಪ್ಪನವರ, ಕಾರ್ಯದರ್ಶಿ ಬಿ.ಕೆ. ಮಳಗಿ, ಸಹ ಕಾರ್ಯದರ್ಶಿ ಪರಮೇಶ್ವರಪ್ಪ ಬೈನವರ, ಸಂಚಾಲಕ ಸಂಗಮೇಶ ಪಟ್ಟಣಶೆಟ್ಟಿ, ಅಬ್ದುಲ್‌ ಖಾದರ ಮೆಣಸಗಿ, ಡಾ| ಸರ್ವಮಂಗಲಾ ಕುದರಿ, ಎನ್‌.ವಿ. ಬದ್ದಿ, ಎಂ.ಎಚ್‌. ಜಂಗಳಿ, ಎಸ್‌.ಬಿ. ಹಿರೇಮಠ, ಎಂ.ಬಿ. ಕಮ್ಮಾರ, ಎ.ಆರ್‌. ಮಾನೆ, ಸಿದ್ದು ಬಸ್ತಿ, ಎ.ಎ. ಮುಲ್ಲಾ, ಪಾಂಡುರಂಗ ಪಮ್ಮಾರ, ಮೋಹನ ಹಿರೇಮನಿ ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷ ಸಿ.ಜಿ. ಪಾಟೀಲ, ಎಸ್‌.ಎಸ್‌. ಪಾಟೀಲ, ಜಗನ್ನಾಥ ಸಿದ್ಧನಗೌಡ್ರ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next