Advertisement

ಅಪ್ಸರೆಯಂತೆ ಕಾಣಬೇಕೆಂದರೆ…

02:02 PM Jan 03, 2018 | Team Udayavani |

ಮದುವೆಯ ದಿನ ತಾನು ಅಪ್ಸರೆಯಂತೆ ಕಾಣಿಸಬೇಕು ಎಂಬುದು ಎಲ್ಲ ಹುಡುಗಿಯರ ಕನಸು. ಹತ್ತಾರು ವರ್ಷಗಳ ನಂತರ ಮದುವೆ ಆಲ್ಬಂ ತೆಗೆದು ನೋಡಿದರೂ, ತನ್ನ ಸೌಂದರ್ಯದ, ಅಲಂಕಾರದ ಬಗ್ಗೆ ತನಗೇ ಹೊಟ್ಟೆಕಿಚ್ಚಾಗುವಂತಿರಬೇಕು ಎಂದು ಹೆಣ್ಣು ಬಯಸುವುದು ಸಹಜ. ಇನ್ನು ಡಿಸೆಂಬರ್‌- ಜನವರಿಯ ಚುಮು ಚುಮು ಚಳಿಯಲ್ಲಿ ಮದುವೆ ನಡೆಯುವುದಿದ್ದರೆ, ಮದುಮಗಳು ತ್ವಚೆಯ ಬಗ್ಗೆ, ಮೇಕಪ್‌ನ ಬಗ್ಗೆ ತುಸು ಜಾಸ್ತಿಯೇ ಜಾಗ್ರತೆ ವಹಿಸಬೇಕು. ಯಾಕೆಂದರೆ, ಚಳಿಗಾಲವೆಂದರೆ ಚರ್ಮ ಜೀವಂತಿಕೆ ಕಳೆದುಕೊಳ್ಳುವ, ಕೂದಲು ಹುಲ್ಲಿನಂತಾಗುವ ಸಮಯ. ಇಂಥ ಸಮಯದಲ್ಲಿ ಸಪ್ತಪದಿ ತುಳಿಯುವವರು ಈ ಐದು ಅಂಶಗಳನ್ನು ಮರೆಯಲೇಬಾರದು. 

Advertisement

1. ತ್ವಚೆಯ ರಕ್ಷಣೆಗೆ ಮಾಯಿಶ್ಚರೈಸರ್‌:
ಚಳಿಗಾಲದಲ್ಲಿ ನೀವು ಚರ್ಮದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಸರಿಯಾಗಿ ಮಾಯಿಶ್ಚರೈಸರ್‌ ಕ್ರೀಂ ಬಳಸದಿದ್ದರೆ ಚರ್ಮದ ನುಣುಪೇ ಮಾಯವಾಗಿ, ಮದುವೆ ದಿನ ಎಷ್ಟೇ ಮೇಕಪ್‌ ಮಾಡಿದರೂ ಪ್ರಯೋಜನವಾಗುವುದಿಲ್ಲ. ಮದುವೆ ಕೆಲಸದಲ್ಲಿ ನೀವೆಷ್ಟೇ ಬ್ಯುಸಿ ಇದ್ದರೂ, ಪ್ರತಿದಿನಿ ಮಾಯಿಶ್ಚರೈಸರ್‌ ಹಚ್ಚಲು ಮರೆಯಬೇಡಿ. ಬರೀ ಮುಖವಷ್ಟೇ ಅಲ್ಲ, ಕತ್ತು, ಕಾಲು-ಕೈಗೂ ಕ್ರೀಂ ಬಳಸಿ. 

2. ಸನ್‌ಸ್ಕ್ರೀನ್‌ ಲೋಷನ್‌ಗೆ ಬೈ ಬೈ
ಮದುವೆಯ ದಿನ ಅಪ್ಪಿತಪ್ಪಿಯೂ ಸನ್‌ಸ್ಕ್ರೀನ್‌ ಲೋಷನ್‌ ಹಚ್ಚಬೇಡಿ. ಅದು ನಿಮ್ಮ ಮುಖವನ್ನು ನಿಸ್ತೇಜವಾಗಿಸುತ್ತದೆ. ಅಷ್ಟೇ ಅಲ್ಲ, ಫೋಟೊದಲ್ಲಿ ಕೂಡ ನೀವು ತುಂಬಾ ಬಿಳಿಚಿಕೊಂಡಂತೆ ಕಾಣಿಸುತ್ತೀರಿ.

3. ಉತ್ತಮ ಗುಣಮಟ್ಟದ ಮೇಕಪ್‌
ಬೇಸಿಗೆಯಲ್ಲಾದರೆ ಬೆವರಿನ ಜೊತೆಗೆ ಮೇಕಪ್‌ ಕರಗುವ ಭಯ ಇರುತ್ತದೆ. ಚಳಿಗಾಲದಲ್ಲಿ ಆ ತಲೆಬಿಸಿ ಇಲ್ಲ. ಹಾಗಾಗಿ ಪೌಡರ್‌ನಂಥ ಮೇಕಪ್‌ ಪ್ರಾಡಕ್ಟ್ಗಳ ಬದಲು ಲಿಕ್ವಿಡ್‌ ಪ್ರಾಡಕ್ಟ್ಗಳನ್ನು ಬಳಸಿದರೆ ಉತ್ತಮ. ಅದರಿಂದ ಮೇಕಪ್‌ ಜಾಸ್ತಿ ಹೊತ್ತು ಉಳಿದುಕೊಳ್ಳುತ್ತದೆ.

4. ಕಣ್ಣಿನ ಮೇಕಪ್‌ 
ಚಳಿಗಾಲದಲ್ಲಿ ಕಣ್ಣಿನಲ್ಲಿ ನೀರು ತುಂಬಿಕೊಳ್ಳುವ, ಕಣ್ಣು ತೇವಗೊಳ್ಳುವ ಸಂಭವಗಳು ಹೆಚ್ಚು. ಸಾದಾ ಐ ಲೈನರ್‌ಗಳ ಬದಲು ವಾಟರ್‌ಪ್ರೂಫ್ ಐ ಲೈನರ್‌, ಮಸ್ಕರಗಳನ್ನು ಬಳಸಿದರೆ ಒಳಿತು. ಲಿಕ್ವಿಡ್‌ ಐ ಲೈನರ್‌ಗಿಂತ ಜೆಲ್‌ ಬಳಸಿದರೆ ಇನ್ನೂ  ಉತ್ತಮ. 

Advertisement

5. ಕೂದಲಿನ ಕಾಳಜಿ ಮಾಡಿ
ಮದುವೆಯಲ್ಲಿ ಎಲ್ಲರ  ಕಣ್‌ ಸೆಳೆಯುವುದು ಹೆಣ್ಣಿನ ಕೇಶಾಲಂಕಾರ. ಮದುವಣಗಿತ್ತಿಯರು ಚಳಿಗಾಲದಲ್ಲಿ ಕೂದಲಿನ ಕಡೆಗೆ ಲಕ್ಷ್ಯ ನೀಡುವುದು ಅಗತ್ಯ. ಕೂದಲು ಸತ್ವ ಕಳೆದುಕೊಳ್ಳದಂತೆ ಹೈಡ್ರೇಟಿಂಗ್‌ ಹೇರ್‌ ಮಾಸ್ಕ್ ಅಥವಾ ಜೆಲ್‌ ಹಚ್ಚಿ ಆರೈಕೆ ಮಾಡಿ. ನಿಮ್ಮ ಕೂದಲಿನ ಗುಣ ಯಾವುದು ಅಂತ ತಿಳಿದುಕೊಂಡು ಮದುವೆಗೆ ಹೇರ್‌ ಸ್ಟೈಲ್‌ ಮಾಡಿ. ಗುಂಗುರು ಕೂದಲು, ಒಣ ಕೂದಲಿನವರು ಫ್ರೀ ಹೇರ್‌ಸ್ಟೈಲ್‌ ಮಾಡೋದು ಅಷ್ಟು ಸರಿಯಲ್ಲ.  

Advertisement

Udayavani is now on Telegram. Click here to join our channel and stay updated with the latest news.

Next