Advertisement
ಹೌದು, ನಿತ್ಯವೂ ಸರ್ಕಾರಿ, ಖಾಸಗಿ ನೌಕರಿಗೆ ಹೋಗುವ ಪೋಷಕರು, ನಿತ್ಯ ಬೇರೆ ಬೇರೆ ಕಡೆ ದುಡಿಯಲು ಹೋಗುವ ಮಹಿಳೆಯರ ಮಕ್ಕಳಿಗಾಗಿ ಜಿಲ್ಲಾಡಳಿತ, ಜಿಪಂ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯ, ಸರ್ಚ್ ಸ್ವಯಂ ಸೇವಾ ಅಭಿವೃದ್ಧಿ ಸಂಸ್ಥೆಯ ನೇತೃತ್ವದಲ್ಲಿ ಜಿಪಂ ಕಚೇರಿ ಆವರಣದಲ್ಲಿ ಶಿಶುಪಾಲನೆ ಕೇಂದ್ರ ಆರಂಭಿಸಲಾಗಿದೆ. ಸದ್ಯ ಈ ಕೇಂದ್ರದಲ್ಲಿ 7 ಜನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದು, ಒಟ್ಟು 17 ಜನ ಪೋಷಕರು, ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಹೆಸರು ನೋಂದಾಯಿಸಿದ್ದಾರೆ.
Related Articles
ಮಹಿಳೆಯರ ಮಕ್ಕಳನ್ನು ನೋಡಿಕೊಳ್ಳುತ್ತಾರೆ.
Advertisement
ಇಬ್ಬರು ತಾಯಂದಿರು: ಜಿಲ್ಲಾಡಳಿತ ಭವನದ ಜಿ.ಪಂ. ಸದಸ್ಯರ ಕೊಠಡಿಯಲ್ಲಿ ಆರಂಭಗೊಂಡ ಶಿಶುಪಾಲನೆ ಕೇಂದ್ರದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಸರ್ಚ್ ಸ್ವಯಂ ಸೇವಾ ಸಂಸ್ಥೆಯಿಂದ ಲಕ್ಷ್ಮಿ ಎನ್. ಗಾಯಕವಾಡ ಮತ್ತು ಪೂರ್ಣಿಮಾ ಮಸೂತಿ ಎಂಬ ಇಬ್ಬರು ತಾಯಂದಿರನ್ನು ನೇಮಕ ಮಾಡಲಾಗಿದೆ. ಇವರು ಕೇಂದ್ರದಲ್ಲಿ ಹೆಸರು ನೋಂದಾಯಿಸಿ, ಇಲ್ಲಿಗೆ ಬಿಟ್ಟು ಹೋಗುವ ಮಕ್ಕಳನ್ನು ಬೆಳಗ್ಗೆ 10ರಿಂದ ಸಂಜೆ 5:30ರ (ರಜೆ ದಿನ ಹೊರತುಪಡಿಸಿ) ವರೆಗೆ ನೋಡಿಕೊಳ್ಳುತ್ತಾರೆ. ಜತೆಗೆ ಆ ಮಕ್ಕಳಿಗೆ ರಾಗಿ ಗಂಜಿ ಸಹಿತ ವಿವಿಧ ಸಿಹಿ ತಿನಿಸುಗಳನ್ನು ಇಲಾಖೆಯಿಂದಲೇ ವ್ಯವಸ್ಥೆ ಮಾಡಲಾಗಿದೆ.
0 ದಿಂದ 6 ವರ್ಷದ ಮಕ್ಕಳನ್ನು ಈ ಕೇಂದ್ರದಲ್ಲಿ ಬಿಡಬಹುದು. ನಿತ್ಯ ದುಡಿಯಲು ಹೋಗುವ ಮಹಿಳೆಯರ ಮಕ್ಕಳು, ಉದ್ಯೋಗಸ್ಥ-ಸರ್ಕಾರಿ ನೌಕರರ ಮಕ್ಕಳನ್ನು ಇಲ್ಲಿಗೆ ಬಿಡಬಹುದು. ಯಾವುದೇ ಶುಲ್ಕವಿಲ್ಲದೇ ಸರ್ಚ್ ಸ್ವಯಂ ಸೇವಾ ಸಂಸ್ಥೆಯಡಿ ಮಕ್ಕಳ ಪಾಲನೆ ಮಾಡಲಾಗುತ್ತದೆ. ಜತೆಗೆ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ, ಆರೋಗ್ಯ, ದೈಹಿಕ ಅರಿವಿನ ಸಾಮಾಜಿಕ, ಭಾವನಾತ್ಮಕ ಬೆಳವಣಿಗೆ ಹೊಂದುವುದು, ಕಲಿಕಾ ಸಾಮಗ್ರಿ, ಆಟಿಕೆ ಸಾಮಗ್ರಿ, ಚಿತ್ರಪಟಗಳು, ಮಕ್ಕಳ ಸ್ನೇಹಿ ವಾತಾವರಣ ವ್ಯವಸ್ಥೆ ಮಾಡುವುದು ಈ ಕೇಂದ್ರದ ಮುಖ್ಯ ಆಶಯ. ಸದ್ಯ ಒಂದು ತಿಂಗಳ ಹಿಂದೆ ಆರಂಭಗೊಂಡ ಈ ಕೇಂದ್ರದಲ್ಲಿ 7 ಜನ ಮಕ್ಕಳು, ಇಲ್ಲಿ ನಿತ್ಯ ಪಾಲನೆಗೊಳ್ಳುತ್ತಿದ್ದಾರೆ.
ಉದ್ಯೋಗಸ್ಥ ಪೋಷಕರು, ದುಡಿಯುವ ಮಹಿಳೆಯರ ಮಕ್ಕಳ ಪಾಲನೆಗಾಗಿ ಆರಂಭಿಸಿದ ಮಕ್ಕಳ ಪಾಲನೆ ಕೇಂದ್ರ ಸಂಪರ್ಕಿಸಲು, ಸರ್ಚ್ ಶಿಶುಪಾಲನೆ ಕೇಂದ್ರ, ಜಿಲ್ಲಾಡಳಿತ ಭವನ, ಜಿ.ಪಂ. ಮುಖ್ಯ ಕಚೇರಿ, ನವನಗರ, (ಮೊ: 9448801473, 8088871164)ಗೆ ಒಮ್ಮೆ ಭೇಟಿ ಕೊಡಿ.
*ಶ್ರೀಶೈಲ ಕೆ. ಬಿರಾದಾರ