ಸಿಂದಗಿ: ಕೊರಮ ಸಮಾಜ ಸೌಮ್ಯ ಸಮಾಜದ ಜನ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಭಜಂತ್ರಿ ಲೇಔಟ್‌ನಲ್ಲಿ ಹಮ್ಮಿಕೊಂಡ ಗುರುಶರಣ ನೂಲಿ ಚಂದಯ್ಯನವರ ಸಮುದಾಯ ಭವನಕ್ಕೆ ಭೂಮಿಪೂಜೆ
ನೆರವೇರಿಸಿ ಅವರು ಮಾತನಾಡಿದರು. ತಮ್ಮ ಅಧಿಕಾರದ ಅವಧಿಯಲ್ಲಿ ಗ್ರಾಮೀಣ ಅಭಿವೃದ್ಧಿ ಜೊತೆಗೆ ಪಟ್ಟಣದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಗುರುಶರಣ ನೂಲಿ ಚಂದಯ್ಯನವರ ಸಮುದಾಯ ಭವನಕ್ಕೆ ಭೂಮಿಪೂಜೆ ಮಾಡುವುದಲ್ಲದೇ ಪಟ್ಟಣದಲ್ಲಿ ಬೃಹತ್ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿದೆ. ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಯರಗಲ್ ಬಿ.ಕೆ. ಗ್ರಾಮದ ಕಾಲುವೆಯಿಂದ ಎರಡು ಹೊಸ ಲೈನ್ ಅಳವಡಿಕೆ ಮಾಡಿ ಒಂದು ಕೆರೆಯಲ್ಲಿ ನೀರು ಸಂಗ್ರಹಿಸಿದರೆ ಇನ್ನೊಂದು ನೇರವಾಗಿ ವಾಟರ್ ಫಿಲ್ಟರ್‌ಗೆ ಸರಬರಾಜು ಮಾಡುತ್ತದೆ ಎಂದರು.
ಪಟ್ಟಣದಲ್ಲಿ ಪುರಸಭೆಯ ನಗರೋತ್ಥಾನದ ಮೂರನೇ ಹಂತದ 3.46 ಕೋಟಿ ರೂ. ವೆಚ್ಚದಲ್ಲಿ 19 ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿದ್ದು ಕಾಮಗಾರಿಗಳು ಪ್ರಾರಂಭವಾಗಿದೆ. ಆದರ್ಶ ವಿದ್ಯಾಲಯ, ಪಿಯುಸಿ, ಡಿಕ್ರಿ ಕಾಲೇಜ, ವಸತಿ ಶಾಲೆ, ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆ, ಅಲ್ಪಸಂಖ್ಯಾತರ ವಸತಿ ಶಾಲೆ, ಶಾದಿಮಹಲ್ ನಿರ್ಮಾಣ ಮಾಡಿದ್ದೇನೆ. ಪಟ್ಟಣ ಸಂಪೂರ್ಣ ಒಳಚರಂಡಿ ಮಾಡುವುದು ಮತ್ತು ಬಬಲೇಶ್ವರ ಕೆರೆಯಿಂದ ಸಿಂದಗಿ ಪಟ್ಟಣಕ್ಕೆ ನೀರು ತಂದು ದಿನದ 24 ಗಂಟೆ ಕುಡಿಯುವ ನೀರು ನೀಡುವ ಕೆಲಸ ಉಳಿದಿವೆ. ಆದ್ದರಿಂದ ನಿಮ್ಮ ಆಶೀವಾದದಿಂದ ನಾನು ಶಾಸಕನಾಗಿ ಪುನಃ ಆಯ್ಕೆಯಾಗಿ ಕೆಲಸ ಮಾಡುತ್ತೇನೆ ಎಂದರು.
ಜಿಲ್ಲಾಧ್ಯಕ್ಷ ಗೋವಿಂದರಾವ್ ವೈಜಂತ್ರಿ ಮಾತನಾಡಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕೊರಮ ಸಮಾಜ ಸಮುದಾಯ ಭವನಗಳ ಕಟ್ಟದ ನಿರ್ಮಾಣಕ್ಕಾಗಿ ಜಲ ಸಂಪನ್ಮೂಲ ಸಚಿವರು 7 ಕೋಟಿ ರೂ. ಅನುದಾನ ನೀಡಿ ಈ ಸಮಾಜದ ಬೆಳವಣಿಗೆಗೆ ದಾರಿ ದೀಪವಾಗಿದ್ದಾರೆ. ಅಲ್ಲದೇ ಶಾಸಕ ರಮೇಶ ಭೂಸನೂರ ಅವರು ನಮ್ಮ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕೊರಮ ಸಮಾಜದ ಜನತೆಗೆ 2 ಎಕರೆ ಜಮೀನನ್ನು ನಿವೇಶನಕ್ಕಾಗಿ ನೀಡಬೇಕು ಎಂದು ಮನವಿ ನೀಡಿದರು. ಪುರಸಭೆ ಅಧ್ಯಕ್ಷ ಭಾಷಾಸಾಬ ತಾಂಬೋಳಿ, ಬಿಜೆಪಿ ಮಂಡಳ ಅಧ್ಯಕ್ಷ ಸಿದ್ದು ಬುಳ್ಳಾ, ಕೊರಮ ಸಮಾಜ ಗೌರವಾಧ್ಯಕ್ಷ ಮೋಹನದಾನ ಭಜಂತ್ರಿ, ಅಧ್ಯಕ್ಷ ನರಸಪ್ಪ ಭಜಂತ್ರಿ, ಎಸ್.ಬಿ.ಬಜಂತ್ರಿ, ಗುರು ತಳವಾರ, ಭೋವಿ ಸಮಾಜದ ಅದ್ಯಕ್ಷ ಪಂಡಿತ ಯಂಪೂರೆ, ಸುನಂದಾ ಯಂಪೂರೆ, ಸಂತೋಷ ಭಜಂತ್ರಿ ಗುಬ್ಬೆವಾಡ, ಪರಸುರಾಮ ಭಜಂತ್ರಿ ಹಂದಿಗನೂರ, ಯಾದಪ್ಪ ಭಜಂತ್ರಿ, ಮಲ್ಲು ಬಜಂತ್ರಿ, ಶ್ರೀಮಂತ ಭಜಂತ್ರಿ, ಸುಭಾಷ ಭಜಂತ್ರಿ, ಹನುಮಂತ ಕೊಣ್ಣುರ, ರಾಮಪ್ಪ ಎಲ್.ಕೆ. ಸಿದ್ರಾಮ ಗಬಸಾವಳಗಿ, ಲಕ್ಷ್ಮಣ ಯಂಕಂಚಿ, ಲಕ್ಷ್ಮಣ ಹಲಸಂಗಿ, ಗುರುನಾಥ ಭಜಂತ್ರಿ, ರಾಘವೇಂದ್ರ ಭಜಂತ್ರಿ ಇದ್ದರು.