Advertisement

ವರ್ಗಾವಣೆ ರದ್ದತಿಗೆ ಒತ್ತಾಯಿಸಿ ಮನವಿ

02:58 PM Mar 27, 2017 | |

ಹುಬ್ಬಳ್ಳಿ: ನಗರ ಪ್ರದೇಶದಲ್ಲಿ 10 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡುವುದನ್ನು ರದ್ದುಪಡಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಬ್ಬಳ್ಳಿ ಶಹರ ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು. 

Advertisement

ಇಲ್ಲಿನ ಸಿದ್ಧಾರೂಢಸ್ವಾಮಿ ಮಠದಲ್ಲಿ ರವಿವಾರ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಅವರನ್ನು ಭೇಟಿ ಮಾಡಿ ಮನವಿ ಮಾಡಿದ ಘಟಕದ ಪದಾಧಿಕಾರಿಗಳು, ರಕಾರ ಕಡ್ಡಾಯ ವರ್ಗಾವಣೆ ಕಾಯ್ದೆ ಜಾರಿಗೆ ತರಲು ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಿರುವುದು ವಿಷಾದನೀಯ.

ಈಗಾಗಲೇ ನಾವು ಹಳ್ಳಿಗಳಲ್ಲಿ 5-6 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡು ಇಲ್ಲಿಗೆ ಬಂದಿದ್ದೇವೆ. ಬಹಳಷ್ಟು ಮಹಿಳಾ ಶಿಕ್ಷಕಿಯರು ಶಹರ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದು, ಈಗ ನಮ್ಮನ್ನು ವರ್ಗಾವಣೆ ಮಾಡಿದರೆ ಬಹಳಷ್ಟು ತೊಂದರೆಯಾಗುತ್ತದೆ. ಇಂತಹ ಕಾನೂನುಗಳನ್ನು ಶಿಕ್ಷಕರ ಮೇಲೆ ಮಾತ್ರ ಪ್ರಯೋಗ ಮಾಡದಿರುವುದು ಒಳ್ಳೆಯದು. 

ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿ ಸರಕಾರದ ಗಮನಸೆಳೆದು ಕಾಯ್ದೆ ಜಾರಿಯಾಗದಂತೆ ನೋಡಿಕೊಳ್ಳಬೇಕೆಂದು ಘಟಕದ ಪದಾಧಿಕಾರಿಗಳು ಆಗ್ರಹಿಸಿದರು. ಪಿ.ಎಂ. ತಟ್ಟಿಮನಿ, ಎಂ.ಎಚ್‌. ಜಗಲಿ, ಡಿ.ಆರ್‌. ಬೊಮ್ಮನಹಳ್ಳಿ, ಎಸ್‌. ಜಿ. ಪಾಟೀಲ, ಆರ್‌.ಎಫ್‌. ಬ್ಯಾಹಟ್ಟಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next