Advertisement
ಸಂಘಟನೆಯ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಬುಧವಾರ ಜವಳಿ ಸಚಿವ ಶ್ರೀಮಂತ ಪಾಟೀಲ ಅವರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಇವೆ. ಜಿಲ್ಲಾ ಕೇಂದ್ರ ಬಾಗಲಕೋಟೆಯಲ್ಲಿ ಹಿಂದೂಗಳ ಹೃದಯ ಸಾಮ್ರಾಟ್ ಶಿವಾಜಿ ಪುತ್ಥಳಿಇಲ್ಲ. ಶಿವಾಜಿ ಮಹಾರಾಜರು, ಒಂದು ರಾಜ್ಯಕ್ಕೆ ರಾಜನಾಗಿರದೇ ಇಡೀ ದೇಶಕ್ಕಾಗಿ ಸೈನ್ಯದೊಂದಿಗೆ ಹೋರಾಡಿದ ಮಹಾನ್ ಪರಾಕ್ರಮಿ ರಾಜ. ಆದ್ದರಿಂದ ಅವರ
ಪುತ್ಥಳಿಯು, ಬಾಗಲಕೋಟೆಯಲ್ಲಿ ನಿರ್ಮಾಣ ಮಾಡಬೇಕು. ಬಾಗಲಕೋಟೆ ನಗರ, ನವನಗರದ ಯಾವುದೇ ಸೂಕ್ತ ಜಾಗೆಯಲ್ಲಿ ಸರ್ಕಾರದಿಂದ ಶಿವಾಜಿ ಪುತ್ಥಳಿ ನಿರ್ಮಿಸಬೇಕು ಎಂದು ಮನವಿ ಮಾಡಿದರು.