Advertisement

Karnataka: ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಸಲು ಡಿ. 9 ಕಡೇ ದಿನ

01:23 AM Nov 30, 2024 | Team Udayavani |

ಬೆಂಗಳೂರು: 2025-26ನೇ ಶೈಕ್ಷಣಿಕ ವರ್ಷದ 1ನೇ ತರಗತಿಯಿಂದ 10ನೇ ತರಗತಿಯ ಪಠ್ಯಪುಸ್ತಕ, 4ರಿಂದ 9ನೇ ತರಗತಿ ತನಕದ ಅಭ್ಯಾಸ ಪುಸ್ತಕ ಹಾಗೂ 1ರಿಂದ 10ನೇ ತರಗತಿಗಳ ದಿನಚರಿಗಳ ಬೇಡಿಕೆಯನ್ನು ಎಸ್‌ಎಟಿಎಸ್‌ (ಸ್ಯಾಟ್ಸ್‌) ತಂತ್ರಾಂಶದಲ್ಲಿ ಡಿ. 9ರೊಳಗೆ ಸಲ್ಲಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಕರ್ನಾಟಕ ಪಠ್ಯಪುಸ್ತಕ ಸಂಘ ಸೂಚನೆ ನೀಡಿದೆ.

Advertisement

ಸ್ಯಾಟ್ಸ್‌ ತಂತ್ರಾಂಶಕ್ಕೆ ಒಳಪಟ್ಟಿರುವ ಸರಕಾರಿ, ಅನುದಾನಿತ ಮತ್ತು ಸರಕಾರದಿಂದ ಅನುಮೋದನೆ ಪಡೆದಿರುವ ಅನುದಾನ ರಹಿತ ಶಾಲೆಗಳು, ಇತರ ಇಲಾಖೆಗಳಿಂದ ನಡೆಯುತ್ತಿರುವ ಶಾಲೆಗಳು ಮತ್ತು ಹೊರರಾಜ್ಯದ ಶಾಲೆಗಳು ತಮ್ಮ ಬೇಡಿಕೆಯನ್ನು ಸಲ್ಲಿಸುವಂತೆ ಸಂಘ ಸೂಚನೆ ನೀಡಿದೆ.

2024-25ರ ಸಾಲಿನಲ್ಲಿನಂತೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರತಿ ವಿಷಯಕ್ಕೂ ಮೊದಲಾರ್ಧದಲ್ಲಿ ಭಾಗ-1 ಮತ್ತು ದ್ವಿತೀಯಾರ್ಧದಲ್ಲಿ ಭಾಗ-2 ಎಂದು ಪ್ರತ್ಯೇಕ ಎರಡೂ ಪಠ್ಯಪುಸ್ತಕಗಳಿರಲಿದ್ದು ಈ ಎರಡೂ ಪಠ್ಯ ಪುಸ್ತಕಕ್ಕೂ ಸಮ ಪ್ರಮಾಣದಲ್ಲಿ ಬೇಡಿಕೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಅಗತ್ಯವಿಲ್ಲದ ಪಠ್ಯ ಪುಸ್ತಕಗಳನ್ನು, ವಿದ್ಯಾರ್ಥಿಗಳ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಠ್ಯ ಪುಸ್ತಕಗಳ ಬೇಡಿಕೆ ಸಲ್ಲಿಸಿದರೆ ಮುಖ್ಯ ಶಿಕ್ಷಕರೇ ಹೊಣೆಯಾಗಲಿದ್ದು, ಆ ಪುಸ್ತಕಗಳ ಮೌಲ್ಯವನ್ನು ಅವರೇ ಭರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next