ಉಡುಪಿಯಲ್ಲಿ ನಡೆಯುವ ಧರ್ಮ ಸಂಸದ್, ಅಖಂಡ ಹಿಂದೂ ಸಮಾಜ ನಿರ್ಮಾಣಕ್ಕೆ ನಾಂದಿಯಾಗಲಿದೆ. ಅಲ್ಲದೆ, ಹಿಂದೂ ಸಮಾಜದ ದಿಕ್ಸೂಚಿಯಾಗಲಿದೆ. ಉಡುಪಿಯಲ್ಲಿ ನವೆಂಬರ್ 24 ಮತ್ತು 25ರಂದು ನಡೆಯುತ್ತಿರುವ ಧರ್ಮ ಸಂಸದ್ ಅತ್ಯಂತ ಪ್ರಮುಖವಾದದ್ದು. ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಹೊರಟಿರುವ ಸಂಘಟನೆಗ ಳಿಗೆ ಭಾರತಾಂಬೆಯ ಕೃಪಾಶೀರ್ವಾದ ಇದ್ದೇ ಇರುತ್ತದೆ.
ಭಾರತೀಯ ಆಧ್ಯಾತ್ಮವು ಇಡೀ ವಿಶ್ವಕ್ಕೆ ತಾಯಿ ಬೇರಾಗಿ ನಿಂತಿದೆ. ದೇಶದಲ್ಲಿ ಸಾವಿರಾರು ಸಂಖ್ಯೆಯ ಜಾತಿ, ಹಲವು ಧರ್ಮಗಳಿದ್ದು, ಹಲವಾರು ಸಂಪ್ರ ದಾಯಗಳನ್ನು ಮೈಗೂಡಿ ಸಿಕೊಂಡಿದೆ. ಭಾರತೀಯ ಸಂಸ್ಕೃತಿ, ಪರಂಪರೆ ಅತ್ಯಂತ ಭಿನ್ನವಾಗಿದೆ. ಅತಿ ಮುಖ್ಯವಾಗಿ ಗುರು ಪರಂಪರೆಯನ್ನು ಈ ಹೊತ್ತಿನವರೆಗೂ ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ.
ದೇಶದ ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ಈಗಿನ ನಮ್ಮ ಹಿಂದೂ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆಯುತ್ತಿರುವುದು ಆತಂಕ ಮತ್ತು ಶೋಚನೀಯ ಸಂಗತಿಯಾಗಿದೆ. ಯುವ ಸಮೂಹವನ್ನು ಎಚ್ಚರಿಸಲು, ಮರೆತಿರುವುದನ್ನು ಜ್ಞಾಪಿಸಲು, ಧರ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಜನಸಾಮಾನ್ಯರನ್ನು, ಯುವಕರನ್ನು ಜಾಗೃತಗೊಳಿಸಲು
ಉಡುಪಿಯ ಶ್ರೀಕೃಷ್ಣನ ಪುಣ್ಯ ಕ್ಷೇತ್ರದ ಸನ್ನಿಧಾನದಲ್ಲಿ ಧರ್ಮ ಸಂಸದ್ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ. ಪೇಜಾವರ ಸ್ವಾಮೀಜಿ ಹಿಂದೂ ಧರ್ಮದ ಶಕ್ತಿಯ ಕೇಂದ್ರ ಬಿಂದುವಾಗಿ ನಿಂತು ಬೆಂಬಲ ನೀಡುತ್ತಿದ್ದಾರೆ. ಇದೊಂದು ಚಾರಿತ್ರಿಕ ಕಾರ್ಯಕ್ರಮವಾಗಲಿದೆ. ಹಿಂದೂಗಳಿಗೆ ಹಿಂದೂ ಎಂದು ಹೇಳಿಕೊಳ್ಳುವುದಕ್ಕೆ ಶಕ್ತಿ ತುಂಬುತ್ತಿರುವ ಹಿಂದೂ ಸಂಘಟನೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಈ ಸಮಾವೇಶಕ್ಕೆ ನಾವು ಕಾಯಾ, ವಾಚಾ, ಮನಸಾರೆ ಬೆಂಬಲಿಸಿ ಪಾಲ್ಗೊಳ್ಳುತ್ತಿದ್ದೇವೆ.
-ಶ್ರೀ ಸೇವಾಲಾಲ್ ಸರ್ದಾರ್, ಮಹಾಸ್ವಾಮಿಗಳು,
ಬಂಜಾರ (ಲಂಬಾಣಿ) ಗುರುಪೀಠಾಧ್ಯಕ್ಷರು.