Advertisement

ಪ್ರಗತಿ ಮೈದಾನ ದರೋಡೆ ಪ್ರಕರಣ: 1600 ಜನರ ವಿಚಾರಣೆ ನಡೆಸಿ ಐವರನ್ನು ಬಂಧಿಸಿದ ದೆಹಲಿ ಪೊಲೀಸರು

05:00 PM Jun 27, 2023 | Team Udayavani |

ಹೊಸದಿಲ್ಲಿ: ಕೆಲ ದಿನಗಳ ಹಿಂದೆ ದೆಹಲಿಯ ಪ್ರಗತಿ ಮೈದಾನ ಸುರಂಗ ರಸ್ತೆಯಲ್ಲಿ ಹಾಡುಹಗಲೆ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.

Advertisement

ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಡೆಲಿವರಿ ಏಜೆಂಟ್ ಇದ್ದ ಕ್ಯಾಬನ್ನು ಅಡ್ಡಗಟ್ಟಿ ಬಂದೂಕು ತೋರಿಸಿ ಎರಡು ಲಕ್ಷ ರೂ ದೋಚಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು.

ಪ್ರಕರಣದ ತನಿಖೆ ನಡೆದಿ ಪೊಲೀಸರು ಸುಮಾರು 1,600 ಜನರನ್ನು ವಿಚಾರಣೆ ನಡೆಸಿ ಸುಮಾರು 2,000 ವಾಹನಗಳನ್ನು ವಶಪಡಿಸಿಕೊಂಡಿದ್ದರು.

ವೀಡಿಯೊ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ರಾಷ್ಟ್ರ ರಾಜಧಾನಿಯ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪ್ರಶ್ನಿಸಿದ್ದರು.

ಇದನ್ನೂ ಓದಿ:ಬಾಲಕಿಯರ ಪಿಜಿ ಹೊರಗೆ ಹಸ್ತಮೈಥುನ ಮಾಡಿದ ವ್ಯಕ್ತಿ: ಮಹಿಳಾ ಆಯೋಗದಿಂದ ಕ್ರಮಕ್ಕೆ ಆಗ್ರಹ

Advertisement

ಚಾಂದನಿ ಚೌಕ್ ಮೂಲದ ಓಮಿಯಾ ಎಂಟರ್‌ ಪ್ರೈಸಸ್‌ ನ ಡೆಲಿವರಿ ಏಜೆಂಟ್ ಪಟೇಲ್ ಸಜನ್ ಕುಮಾರ್ ಮತ್ತು ಅವರ ಸಹವರ್ತಿ ಜಿಗರ್ ಪಟೇಲ್ ಶನಿವಾರ ಕ್ಯಾಬ್‌ ನಲ್ಲಿ ಗುರುಗ್ರಾಮ್‌ ಗೆ ತೆರಳುತ್ತಿದ್ದಾಗ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಅಡ್ಡಗಟ್ಟಿದ್ದಾರೆ. ಈ ವೇಳೆ ಇಬ್ಬರು ಪಿಲಿಯನ್ ರೈಡರ್‌ ಗಳು ಬೈಕ್‌ನಿಂದ ಇಳಿದು ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next