Advertisement

ಪಡಿತರ ಸಕ್ಕರೆ-ಕೇಂದ್ರದ ಅನುದಾನ ರದ್ದು: ಖಾದರ್‌

10:00 AM Feb 24, 2017 | Team Udayavani |

ಮಂಗಳೂರು: ಕೇಂದ್ರ ಸರಕಾರ  ಫೆ. 1ರಂದು ಮಂಡಿಸಿದ ಬಜೆಟ್‌ನಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ವಿತರಿಸುವ ಸಕ್ಕರೆಗೆ ಅನುದಾನ ರದ್ದುಪಡಿಸಿದ್ದು, ಇದು ಮುಂದಿನ ದಿನಗಳಲ್ಲಿ ಸಬ್ಸಿಡಿ ದರದ ಸಕ್ಕರೆ ವಿತರಣೆಯನ್ನು ರದ್ದುಪಡಿಸುವ ಮುನ್ಸೂಚನೆಯಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಸಕ್ಕರೆಯು ಜನರ ಆವಶ್ಯಕ ಆಹಾರ ವಸ್ತುಗಳಲ್ಲಿ ಒಂದಾಗಿದ್ದು, ಇದಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ರದ್ದುಪಡಿಸಬಾರದೆಂದು ಕೇಂದ್ರ ಸರಕಾರಕ್ಕೆ ಬರೆಯಲಾಗಿದೆ. ಇದೀಗ ಮತ್ತೂಮ್ಮೆ ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಬರೆಯಲಾಗುವುದು ಎಂದರು.

Advertisement

ಕೇಂದ್ರ ಸರಕಾರವು 18 ರೂ.ಗೆ ಸಕ್ಕರೆಯನ್ನು ರಾಜ್ಯ ಸರಕಾರಕ್ಕೆ ಒದಗಿಸುತ್ತಿದ್ದು, ರಾಜ್ಯ ಸರಕಾರವು ಸಾರ್ವಜನಿಕರಿಗೆ ವಿತರಿಸಲು ಉಳಿದ ವ್ಯತ್ಯಸ್ತ ದರವನ್ನು ಭರಿಸಿ ಬಿಡುಗಡೆ ಮಾಡುತ್ತದೆ ಎಂದವರು ವಿವರಿಸಿದರು.

ಇನ್ನೂ ಬಹಿರಂಗಪಡಿಸಿಲ್ಲ
ಸಕ್ಕರೆ ಸಬ್ಸಿಡಿಯನ್ನು ರದ್ದುಪಡಿಸಿರುವ ವಿಚಾರವನ್ನು ಕೇಂದ್ರ ಸರಕಾರವು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಹಿರಂಗ ಪಡಿಸದೆ ರಹಸ್ಯವಾಗಿಟ್ಟಿದೆ. ಕೇಂದ್ರದ ವಿವಿಧ ಬಜೆಟ್‌ ಅನುದಾನಗಳ ಪರಿಶೀಲನೆ ನಡೆಸುವಾಗ ಈ ವಿಷಯ ನಮ್ಮ ಗಮನಕ್ಕೆ ಬಂದಿದೆ ಎಂದು ಸಚಿವ ಖಾದರ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಡಿಪಿ ಸದಸ್ಯ ಪದ್ಮನಾಭ ನರಿಂಗಾನ, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಸದಸ್ಯ ಸಂತೋಷ್‌ ಶೆಟ್ಟಿ, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮದ್‌ ಮೋನು, ತಾ.ಪಂ. ಸದಸ್ಯರಾದ ಹೈದರ್‌, ಜಬ್ಟಾರ್‌, ಉಳ್ಳಾಲ ಪುರಸಭಾ ಸದಸ್ಯ ಬಾಸಿಲ್‌ ಡಿ’ಸೋಜಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next