Advertisement

ಗಂಗಾ ಎಕ್ಸ್‌ಪೆ‹ಸ್‌ ನಿರ್ಮಾಣಕ್ಕೆ ಅಸ್ತು

12:50 AM Jan 30, 2019 | Harsha Rao |

ಅಲಹಾಬಾದ್‌: ಮಹದೋದ್ದೇಶದ 600 ಕಿ.ಮೀ. ವ್ಯಾಪ್ತಿಯ ಗಂಗಾ ಎಕ್ಸ್‌ ಪ್ರಸ್‌ ಹೆದ್ದಾರಿ ನಿರ್ಮಾಣಕ್ಕೆ ಉತ್ತರ ಪ್ರದೇಶ ಸಂಪುಟ ಮಂಗಳವಾರ ಸಮ್ಮತಿ ನೀಡಿದೆ. ಕುಂಭಮೇಳ ನಡೆಯುತ್ತಿರುವ ಗಂಗಾ- ಯಮುನಾ-ಸರಸ್ವತಿ ನದಿಗಳ ಸಮ್ಮಿಲನ ಸ್ಥಳದಲ್ಲಿ ಮಂಗಳವಾರ ನಡೆಸಲಾದ ವಿಶೇಷ ಸಂಪುಟ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದೆ. 

Advertisement

ಅನೇಕ ಸಾಧು, ಸಂತರ ಜತೆಯಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಅವರ ಸಂಪುಟದ 25 ಸಚಿವರು ಗಂಗೆಯಲ್ಲಿ ಮುಳುಗೆದ್ದು ಬಂದರಲ್ಲದೆ, ಪೂಜೆ ನೆರವೇರಿಸಿ ಸಂಪುಟ ಸಭೆ ನಡೆಸಿದ್ದು ವಿಶೇಷವಾಗಿತ್ತು. ಸಭೆಯ ನಂತರ ಮಾತನಾಡಿದ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ, “”36,000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗಂಗಾ ಎಕ್ಸ್‌ ಪ್ರಸ್‌, ಇಡೀ ವಿಶ್ವದಲ್ಲೇ ಅತಿ ಉದ್ದದ ಹೆದ್ದಾರಿ ಆಗಲಿದೆ. ಇದರ ಜತೆಗೆ, ಬುಂದೇಲ್‌ಖಂಡ್‌ ಎಕ್ಸ್‌ಪ್ರೆಸ್‌ ಹೆದ್ದಾರಿ (2296 ಕಿ.ಮೀ.) ಹಾಗೂ ಪೂರ್ವಾಂಚಲ ಎಕ್ಸ್‌ಪ್ರೆಸ್‌ ವೇ (91 ಕಿ.ಮೀ.) ಕಾಮಗಾರಿಗಳಿಗೂ ಸಂಪುಟ ಒಪ್ಪಿಗೆ ಸೂಚಿಸಿದ್ದು, ಹಿಂದಿ ಚಿತ್ರ “ಉರಿ: ದ ಸರ್ಜಿಕಲ್‌ ಸ್ಟ್ರೈಕ್‌’ ಚಿತ್ರಕ್ಕೆ ರಾಜ್ಯದಲ್ಲಿ ಜಿಎಸ್‌ಟಿಯಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next