Advertisement

ವೃದ್ಧಾಶ್ರಮದಲ್ಲಿ ಟಿ.ಎನ್‌. ಶೇಷನ್‌

06:15 AM Jan 12, 2018 | Harsha Rao |

ಚೆನ್ನೈ: ಭಾರತದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿದ್ದವರು ಟಿ.ಎನ್‌.ಶೇಷನ್‌. ದೇಶದಲ್ಲಿ ಮೊದಲ ಬಾರಿಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಇದ್ದ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದು ಆಯೋಗದ ಮಹತ್ವವನ್ನು ದೇಶ ಅಷ್ಟೇ ಏಕೆ ವಿಶ್ವಕ್ಕೇ ತೋರಿಸಿಕೊಟ್ಟವರು ಶೇಷನ್‌. ಅಂಥ ವ್ಯಕ್ತಿ ಈಗ ತಮಿಳು ನಾಡಿನ ಚೆನ್ನೈನಲ್ಲಿರುವ ವೃದ್ಧಾಶ್ರಮದಲ್ಲಿ ತಮ್ಮ ಪತ್ನಿ ಜಯಲಕ್ಷ್ಮೀ ಜತೆ ಜೀವಿಸುತ್ತಿದ್ದಾರೆ. ಕೇರಳದ ಪಾಲಕ್ಕಾಡ್‌ನ‌ಲ್ಲಿ ಸ್ವಂತ ಮನೆ ಇದ್ದರೂ ಚೆನ್ನೈಯ ಹಳೆಯ ಗುರುಕುಲಂನಲ್ಲಿ ತಂಗಿದ್ದಾರೆ. ಜತೆಗೆ ಅಲ್ಲಿನ ಸಹಪಾಠಿಗಳಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ. 

Advertisement

ಪುಟ್ಟಪರ್ತಿ ಸಾಯಿಬಾಬಾ ಭಕ್ತರಾಗಿರುವ ಶೇಷನ್‌, ಸಾಯಿಬಾಬಾ ನಿಧನ ಅನಂತರ ಅವರ ಆರೋಗ್ಯ ಸಾಕಷ್ಟು ಹದಗೆಟ್ಟಿತ್ತು. ಬಳಿಕ ಅವರು ಈ ಗುರುಕುಲಂನಲ್ಲಿ ಮೂರು ವರ್ಷಗಳಿಂದ ವಾಸಿಸುತ್ತಿದ್ದಾರೆ. ಈ ದಂಪತಿಗೆ ಮಕ್ಕಳಿಲ್ಲ. ಕಳೆದ ಡಿಸೆಂಬರ್‌ 15ರಂದು ಅವರು ತಮ್ಮ 85ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next