ಚೆನ್ನೈ: ತಮಿಳುನಾಡಿನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರ ಪ್ರಾಣ ರಕ್ಷಿಸುವ ನಿಟ್ಟಿನಲ್ಲಿ “ಇನ್ನುಯಿರ್ ಕಾಪ್ಪನ್’ ಎಂಬ ಹೆಸರಿನ ಹೊಸ ಯೋಜನೆಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶನಿವಾರ ಚಾಲನೆ ನೀಡಿದ್ದಾರೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಮೊದಲ 48 ಗಂಟೆಗಳೊಳಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ.
ತಮಿಳುನಾಡಿನ ನಾಗರಿಕರು ಮತ್ತು ಆ ರಾಜ್ಯಕ್ಕೆ ಭೇಟಿ ನೀಡುವವರು ಅಪಘಾತದಲ್ಲಿ ಗಾಯಗೊಂಡರೆ ಘಟನೆ ನಡೆದ ಮೊದಲ 48 ಗಂಟೆಗಳ ಕಾಲ ಅವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಈ ಯೋಜನೆಯಡಿ ಸುಮಾರು 81 ಜೀವ ರಕ್ಷಕ ಪ್ರಕ್ರಿಯೆಗಳನ್ನು ಗುರುತಿಸಲಾಗಿದ್ದು, ಗರಿಷ್ಠ 1 ಲಕ್ಷ ರೂ.ಗಳವರೆಗಿನ ಮೊತ್ತದ ಚಿಕಿತ್ಸೆ ಉಚಿತವಾಗಿರಲಿದೆ.
ಇದನ್ನೂ ಓದಿ:ಒಂದೇ ನಂಬರಿನಿಂದ 20 ಕೋಟಿ ಸ್ಪ್ಯಾಮ್ ಕರೆ! ಟ್ರೂಕಾಲರ್ ವರದಿಯಲ್ಲಿ ಬಯಲು
ಅನಂತರದಲ್ಲೂ ಅವರು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಬಹುದು. ಆದರೆ ನಂತರದ ಚಿಕಿತ್ಸೆಗೆ ಹಣ ಪಾವತಿಸಬೇಕಾಗುತ್ತದೆ ಎಂದು ಸರಕಾರ ಹೇಳಿದೆ. ತಮಿಳುನಾಡಿನಾದ್ಯಂತ 408 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 609 ಆಸ್ಪತ್ರೆಗಳಿವೆ.