Advertisement

ಖ್ಯಾತ ವಯಲಿನ್‌ ವಾದಕ ಟಿ.ಎನ್‌. ಕೃಷ್ಣನ್‌ ನಿಧನ

12:15 AM Nov 04, 2020 | sudhir |

ಚೆನ್ನೈ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ವಯಲಿನ್‌ ವಾದಕ ಟಿ.ಎನ್‌.ಕೃಷ್ಣನ್‌(92) ಅವರು ಸೋಮವಾರ ಸಂಜೆ ನಿಧನ ಹೊಂದಿದ್ದಾರೆ.

Advertisement

ಪದ್ಮವಿಭೂಷಣ, ಸಂಗೀತ ಅಕಾಡೆಮಿಯ ಸಂಗೀತ ಕಲಾನಿಧಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿ ಕೊಂಡಿದ್ದ ಕೃಷ್ಣನ್‌ ಅವರ ನಿಧನಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಸರೋದ್‌ ದಿಗ್ಗಜ ಅಮ್ಜದ್‌ ಅಲಿ ಖಾನ್‌, ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಯಲಿನ್‌ ದಿಗ್ಗಜನ ನಿಧನಕ್ಕೆ ಕರ್ಣಾಟಿಕ್‌ ಸಂಗೀತ ಜಗತ್ತು ಕಂಬನಿ ಮಿಡಿದಿದೆ. 1928ರಲ್ಲಿ ಕೇರಳದಲ್ಲಿ ಜನಿಸಿದ ಟಿ.ಎನ್‌. ಕೃಷ್ಣನ್‌ ಅವರು, 11ನೇ ವಯಸ್ಸಿನಲ್ಲೇ ಸಾರ್ವಜನಿಕವಾಗಿ ಪ್ರದರ್ಶನ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next