ಚೆನ್ನೈ : ಕೋವಿಡ್-19 ನಿಂದ ಚೇತರಿಸಿಕೊಂಡು ಆಳ್ವಾರ್‌ಪೇಟೆಯ ಕಾವೇರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಸೋಮವಾರ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಿದರು.
ಮತದಾನ ಪ್ರಾರಂಭವಾದಾಗ ಬೆಳಗ್ಗೆ 10 ಗಂಟೆಗೆ ಸ್ಟಾಲಿನ್ ಅವರು ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್‌ನಲ್ಲಿ ಮೊದಲು ಮತ ಚಲಾಯಿಸಿದರು.
ಆಡಳಿತಾರೂಢ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಪ್ರತಿಪಕ್ಷಗಳ ಆಯ್ಕೆ, ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸುತ್ತಿವೆ. ಬಿಜೆಪಿಯಿಂದ ಕಣಕ್ಕಿಳಿದಿರುವ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ ಬೆಂಬಲಿಸುತ್ತಿದೆ.
ಸ್ಟಾಲಿನ್ ಅವರಿಗೆ ಜುಲೈ 12 ರಂದು ಕೋವಿಡ್ ಪಾಸಿಟಿವ್ ಕಂಡು ಬಂದಿತ್ತು ಮತ್ತು ಎರಡು ದಿನಗಳ ನಂತರ ಚಿಕಿತ್ಸೆ ಮತ್ತು ವೀಕ್ಷಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ : ರಾಷ್ಟ್ರಪತಿ ಚುನಾವಣೆ: ಕೇರಳದಲ್ಲಿ ಮತ ಹಾಕಿದ ಯುಪಿ ಬಿಜೆಪಿ ಶಾಸಕ