ಕೋಲ್ಕತ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಕಚೇರಿಯನ್ನು ಜಿಲ್ಲಾಡಳಿತ ಬುಧವಾರ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದೆ. ಟಿಎಂಸಿ ಆಡಳಿತಾರೂಢ ಸರ್ಕಾರವಿರುವ ರಾಜ್ಯದಲ್ಲಿ ಅದೇ ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿರುವ ಘಟನೆ ಇದೇ ಮೊದಲಬಾರಿಗೆ ವರದಿಯಾಗಿದೆ. ಬುರುವಾ ಪ್ರದೇಶದಲ್ಲಿ ಟಿಎಂಸಿ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಿರುವ ಹಿನ್ನೆಲೆ ಇತ್ತೀಚೆಗಷ್ಟೇ ಕೋಲ್ಕತ ಹೈಕೋರ್ಟ್ ಕಟ್ಟಡ ಧ್ವಂಸಗೊಳಿಸುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳ ಸಮ್ಮುಖದಲ್ಲಿಯೇ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಮಮತಾ ಬ್ಯಾನರ್ಜಿ ಅವರ ಆಡಳಿತದಲ್ಲೇ ಅವರದ್ದೇ ಪಕ್ಷದ ಕಚೇರಿಯನ್ನು ಆಡಳಿತಾಧಿಕಾರಿಗಳು ಧ್ವಂಸಗೊಳಿಸಿದ್ದು ಮಹತ್ವ ಪಡೆದುಕೊಂಡಿದೆ.
Advertisement
ಪ.ಬಂಗಾಳದಲ್ಲಿ TMC ಕಚೇರಿಯೇ ಧ್ವಂಸ!
10:05 PM May 24, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.