Advertisement

ಗೋವಾದಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮಿ ಯೋಜನೆ ಜಾರಿ

06:39 PM Dec 23, 2021 | Team Udayavani |

ಪಣಜಿ: ಗೋವಾದಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ 3.5 ಲಕ್ಷ ಕುಟುಂಬಗಳನ್ನು ಒಳಗೊಂಡಿರುವ ಪ್ರತಿ ಮನೆಯ ಮಹಿಳಾ ಸದಸ್ಯರ ಖಾತೆಗೆ “ಗೃಹ ಲಕ್ಷ್ಮಿ” ಯೋಜನೆಯ ಅಡಿಯಲ್ಲಿ ಮಾಸಿಕವಾಗಿ 5000 ರೂ. ನೀಡಲಿದೆ. ಈ ಯೋಜನೆಗಾಗಿ ಕಳೆದ 12 ದಿನಗಳ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಕುಟುಂಬಗಳು ನೋಂದಾಯಿಸಿಕೊಂಡಿವೆ ಎಂದು ಗೋವಾ ಟಿಎಂಸಿ ನಾಯಕ ಕಿರಣ್ ಕಾಂದೋಳಕರ್ ಮಾಹಿತಿ ನೀಡಿದರು.

Advertisement

ಗೋವಾದಲ್ಲಿ ಈ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾವು ಪ್ರಚಾರಕ್ಕೆ ತೆರಳಿದಾಗ ಮಹಿಳೆಯರಿಂದ ನಮಗೆ ಸಿಗುವ ಪ್ರತಿಕ್ರಿಯೆಯು ಈ ಯೋಜನೆಯ ಯಶಸ್ಸಿಗೆ ನೈಜ ಸಾಕ್ಷಿಯಾಗಿದೆ ಎಂದು ಕಿರಣ್ ಕಾಂದೋಳಕರ್ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next