Advertisement

ಟಿಎಲ್‌ಬಿಸಿ ರೈತರ ಸಮಸ್ಯೆ ನಿವಾರಣೆಗೆ ಆಗ್ರಹ

07:32 PM Aug 26, 2022 | Team Udayavani |

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ 85/3 ಉಪವಿತರಣೆ ಕಾಲುವೆ ವ್ಯಾಪ್ತಿಯಲ್ಲಿ ರೈತರು ಅಕ್ರಮ ನೀರಾವರಿ ಮಾಡಿಕೊಂಡಿದ್ದು, ಶೇ.90ರಷ್ಟು ಜಮೀನಿಗೆ ನೀರು ಬರುತ್ತಿಲ್ಲ. ಅಕ್ರಮವಾಗಿ ನಿರ್ಮಿಸಿದ ತಡೆಗೋಡೆಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಗುರುವಾರ ಸಿರವಾರ ತಾಲೂಕಿನ ಬಲ್ಲಟಗಿ ಹಾಗೂ ಶ್ರೀನಿವಾಸ ಕ್ಯಾಂಪ್‌, ಗುಡದಿನ್ನಿ ಕೆ. ಗ್ರಾಮಗಳ ರೈತರು ಪ್ರತಿಭಟಿಸಿದರು.

Advertisement

ಈ ಕುರಿತು ಜಿಲ್ಲಾ ಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಟಿಎಲ್‌ಬಿಸಿಯ 85/3ರ ಉಪವಿತರಣಾ ಕಾಲುವೆಯ ವ್ಯಾಪ್ತಿಯಲ್ಲಿ ಗೇಜ್‌ ಪ್ರಮಾಣದ ಬಗ್ಗೆ ಪರಿಶೀಲಿಸಬೇಕು. ಕರ್ನಾಟಕ ನೀರಾವರಿ ನಿಗಮದ ಅ ಧೀಕ್ಷಕ ಇಂಜನಿಯರ್‌ ಅವರಿಗೆ ಅಕ್ರಮ ನೀರಾವರಿ ಕುರಿತು ಸಾಕ್ಷಿ ಸಮೇತ ದೂರು ನೀಡಲಾಗಿತ್ತು. ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಕಾಲುವೆ ಮೇಲ್ಭಾಗದ ಬೇಕಾಬಿಟ್ಟಿ ತಡೆಗೋಡೆ ನಿರ್ಮಿಸಿದ್ದರಿಂದ ಕಾಲುವೆ ಮುಂದಿನ ಭಾಗದ ರೈತರಿಗೆ ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ ಬಿಸಿ) 85/3ರ ಉಪಕಾಲುವೆಯಲ್ಲಿ ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ರೈತರಾದ ಬಸನಗೌಡ ಮಾಲಿಪಾಟೀಲ್‌ ಬಲ್ಲಟಗಿ, ವಿಜಯ ಕುಮಾರ, ಶರಣಗೌಡ, ಬೀರಯ್ಯ ಸ್ವಾಮಿ, ನರಸಪ್ಪ, ವೀರನಗೌಡ ಮಾಲಿಪಾಟೀಲ್‌, ಸುರೇಶ ಶ್ರೀನಿವಾಸ ಕ್ಯಾಂಪ್‌, ನಾಗೇಶರಾವ್‌, ಟಿ.ಬ್ರಹ್ಮಜಿರಾವ್‌, ಟಿ.ರಾಜೇಶ್ವರ ರಾವ್‌, ವೀರಭದ್ರರೆಡ್ಡಿ ಸೇರಿ ಅನೇಕರು ರೈತರು ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next