Advertisement

ತೀಯಾ ಸಮಾಜ ಮುಂಬಯಿ: ವಾರ್ಷಿಕ ಸತ್ಯನಾರಾಯಣ ಮಹಾಪೂಜೆ

04:38 PM Mar 22, 2017 | Team Udayavani |

ಮುಂಬಯಿ: ತೀಯಾ ಸಮಾಜ ಮುಂಬಯಿ ಇದರ ಪಶ್ಚಿಮ ವಲಯ ಸಮಿತಿಯು ಈಗಾಗಲೇ ಯಶಸ್ವಿ ಹದಿನೈದು ವರ್ಷಗಳನ್ನು ಪೂರೈಸಿದ್ದು, ಇದರ ಹದಿನೈದನೆಯ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಮಾ.  19 ರಂದು ಸಂಜೆ ಜೋಗೇಶ್ವರಿ ಪೂರ್ವದ ಅಸ್ಮಿತಾ ಶಾಲೆಯ ಬಳಿ, ಸೀತಾ ನಗರ ಬಾಂದ್ರೆಕರ್ವಾಡಿಯ ಶ್ರೀ ಸಿದ್ದಿವಿನಾಯಕ ಮಂದಿರದಲ್ಲಿ ಜರಗಿತು.

Advertisement

ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ ಅವರ ನೇತೃತ್ವದಲ್ಲಿ ಜರಗಿದ ಈ ಧಾರ್ಮಿಕ ಕಾರ್ಯದಲ್ಲಿ ಸಮಾಜದ ಬೋರ್ಡ್‌ ಆಫ್‌ ಟ್ರಸ್ಟ್‌ನ ಕಾರ್ಯಾಧ್ಯಕ್ಷರಾದ ರೋಹಿದಾಸ ಬಂಗೇರ ಅವರು ಉಪಸ್ಥಿತರಿದ್ದು ಹದಿನೈದು ವರ್ಷಗಳ ಕಾಲ ಸಮಾಜ ಸೇವೆಯಲ್ಲಿ ನಿರತರಾದ ಸಮಾಜದ ಪ್ರಥಮ ವಲಯ ಸಮಿತಿಯ ಎಲ್ಲ  ಹಾಲಿ ಹಾಗೂ ಮಾಜಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.

ಪೂಜಾ ವಿಧಿಯನ್ನು ವೈಕುಂಠ ಭಟ್‌ ಅವರು  ನೆರವೇರಿಸಿದರು. ಸ್ಥಳೀಯ ಸಮಿತಿಯ ಸದಸ್ಯ ಆಶೋಕ ಸುವರ್ಣ ದಂಪತಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ತೀಯಾ ಸಮಾಜದ ಭಜನ ಮಂಡಳಿಯವರಿಂದ ಭಜನೆ ನಡೆಯಿತು. ಪಶ್ಚಿಮ ವಲಯ ಸಮಿತಿಯ ಕಾರ್ಯಾಧ್ಯಕ್ಷ  ಗಂಗಾಧರ ಕಲ್ಲಾಡಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಪೂಜಾ ಕಾರ್ಯಕ್ರಮದಲ್ಲಿ ಪಶ್ಚಿಮ ವಲಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಬಾಬು ಐಲ್‌, ಸುಧಾಕರ ಉಚ್ಚಿಲ, ನಾರಾಯಣ ಸಾಲ್ಯಾನ್‌, ಸಮಾಜದ ಟ್ರಸ್ಟಿ ಟಿ. ಬಾಬು ಬಂಗೇರ,   ಪೂರ್ವ ವಲಯದ ಕಾರ್ಯಾಧ್ಯಕ್ಷ ಮೋಹನ್‌ ಬಿ. ಎಂ.,   ವಲಯ ಸಮಿತಿಗಳ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ದಿವ್ಯಾ ಆರ್‌. ಕೋಟ್ಯಾನ್‌, ಪದ್ಮಿನಿ ಕೋಟೆಕಾರ್‌ ಉಪಸ್ಥಿತರಿದ್ದರು.

ಸಮಾಜದ ಅಧ್ಯಕ್ಷರಾದ ಚಂದ್ರಶೇಖರ ಬೆಳ್ಚಡ ಮತ್ತು ದಿವಿಜಾ ಚಂದ್ರಶೇಖರ್‌ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಮಾಜದ ನವ ದಂಪತಿಗಳನ್ನು ಸಮ್ಮಾನಿಸಿ ಶುಭ ಹಾರೈಸಿದರು. ತೀಯಾ ಸಮಾಜದ ಮಾಜಿ ಅಧ್ಯಕ್ಷ ಕೆ. ಪಿ. ಅರವಿಂದ, ಮಾಜಿ ಟ್ರಸ್ಟಿಗಳಾದ ಗೋಪಾಲ ಸಾಲ್ಯಾನ್‌ ಮತ್ತು ರವಿ ಮಂಜೇಶ್ವರ್‌ ಅವರು ಈ ಧಾರ್ಮಿಕ ಕಾರ್ಯಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು. ತೀಯಾ ಬೆಳಕು ಸಂಪಾದಕ ಶ್ರೀಧರ್‌ ಸುವರ್ಣ, ಸಮಾಜದ  ಕೋಶಾಧಿಕಾರಿ ರಮೇಶ್‌ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಈಶ್ವರ್‌ ಎಂ. ಐಲ… ಹಾಗೂ ಇತರ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಸಮಾಜ ಬಾಂಧವರು ಹಾಗೂ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. ಪದ್ಮನಾಭ ಸುವರ್ಣ,  ಚಂದ್ರಶೇಖರ ಸಾಲ್ಯಾನ್‌, ಗಣೇಶ್‌  ಉಚ್ಚಿಲ, ಪ್ರಕಾಶ್‌ ಎಂ. ಸುವರ್ಣ, ಬಾಬು ಕೋಟ್ಯಾನ್‌, ಕೃಷ್ಣ ಕೆ. ಸಾಲ್ಯಾನ್‌, ಭಾಸ್ಕರ ಕೋಟ್ಯಾನ್‌ ಮತ್ತಿತರರು ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next