Advertisement

ತೀಯಾ ಸಮಾಜ ಮುಂಬಯಿ ಪಶ್ಚಿಮ ವಲಯ ಬಿಸುಪರ್ಬ ಆಚರಣೆ

05:21 PM Apr 18, 2017 | Team Udayavani |

ಮುಂಬಯಿ: ತೀಯಾ ಸಮಾಜದ ಸ್ಥಳೀಯ ಸಮಿತಿಗಳು ಆಗಾಗ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿ ಸಮಾಜ ಬಾಂಧವರನ್ನು ಒಂದುಗೂಡಿಸುತ್ತಿರುವುದು ಪ್ರಶಂಸನೀಯ. ನಮ್ಮ ನಾಡಿನ ವಿಶು ಕಣಿಯಂತಹ ಧಾರ್ಮಿಕ ಚಟುವಟಿಕೆಗಳನ್ನು ನಮ್ಮವರು ಇಲ್ಲಿಯೂ ನಡೆಸುತ್ತಾ ಬರುತ್ತಿದ್ದು, ಇದು ಸ್ಥಳೀಯ ಸಮಿತಿಯ ಅಭಿವೃದ್ದಿಗೆ ಪೂರಕವಾಗಿದೆ ಎಂದು ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ ಅವರು ಅಭಿಪ್ರಾಯಪಟ್ಟರು.

Advertisement

ಎ. 14  ರಂದು ಅಪರಾಹ್ನ ಜೋಗೇಶ್ವರಿ ಪೂರ್ವ ಹೈವೇ ಬಳಿಯ  ಅಸ್ಮಿತಾ ಶಾಲೆಯ ಅಸ್ಮಿತಾ ಭವನದಲ್ಲಿ ತೀಯಾ ಸಮಾಜ ಮುಂಬಯಿ ಪಶ್ಚಿಮ ವಲಯ ಸಮಿತಿಯ ಮಹಿಳಾ ವಿಭಾಗದ ಆಶ್ರಯದಲ್ಲಿ ಜರಗಿದ ಬಿಸುಪರ್ಬ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಸಮಾಜದ ಇಬ್ಬರು ಸಾಧಕರನ್ನು ಸಮ್ಮಾನಿಸಿರುವುದು ಅಭಿನಂದನೀಯ. ಇಂದಿನ ಕಾರ್ಯಕ್ರಮವನ್ನು ನಡೆಸಿದ ಪಶ್ಚಿಮ ವಲಯ ಸಮಿತಿಯ ಕಾರ್ಯಾಧ್ಯಕ್ಷ ಗಂಗಾಧರ ಕಲ್ಲಾಡಿ, ಪಶ್ಚಿಮ ವಲಯ ಮಹಿಳಾ ವಿಭಾಗದ  ಕಾರ್ಯಾಧ್ಯಕ್ಷೆ ದಿವ್ಯಾ ಆರ್‌. ಕೋಟ್ಯಾನ್‌  ಮತ್ತವರ ತಂಡದ ಕಾರ್ಯವನ್ನು ಮೆಚ್ಚಿ ಮಾತನಾಡಿ ವಿಶು ಕಣಿಯ ಮಹತ್ವ ತಿಳಿಸಿದರು.

ಈ ಸಂಧರ್ಭದಲ್ಲಿ ಊರಿನಿಂದ ಆಗಮಿಸಿದ ಯುವ ಸಮಾಜ ಸೇವಕ, ಮಂಜೇಶ್ವರ ವಲಯ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಆದರ್ಶ್‌ ಬಿ. ಎಂ. ದಂಪತಿ ಹಾಗೂ ಯಕ್ಷಗುರು ಸಹದೇವ್‌ ಸಾಲ್ಯಾನ್‌ ದಂಪತಿಯನ್ನು  ಸಮ್ಮಾನಿಸಲಾಯಿತು.

ಭಗವತೀ ತೀಯಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಂತರ ಮಂಗಳಾರತಿ ಮತ್ತು ಕಣಿ ದರ್ಶನ ನಡೆಯಿತು. ವೇದಿಕೆಯಲ್ಲಿ ತೀಯಾ ಸಮಾಜದ ಟ್ರಸ್ಟಿ ಟಿ. ಬಾಬು ಬಂಗೇರ, ತೀಯಾ ಸಮಾಜ ಪೂರ್ವ ವಲಯದ ಕಾರ್ಯಾಧ್ಯಕ್ಷ ಮೋಹನ ಬಿ. ಎಂ.,  ಪೂರ್ವ ವಲಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಿನಿ ಕೋಟೆಕಾರ್‌, ಸಮಾಜದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಪ್ರತಿಮಾ ಬಂಗೇರ, ಸಮಾಜದ ಕೋಶಾಧಿಕಾರಿ ರಮೇಶ್‌ ಉಳ್ಳಾಲ…, ತೀಯಾ ಬೆಳಕು ಸಂಪಾದಕ ಶ್ರೀಧರ ಸುವರ್ಣ ಅವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಪಶ್ಚಿಮ ವಲಯ ಸಮಿತಿಯ ಉಪಕಾರ್ಯಾಧ್ಯಕ್ಷರಾದ ಪದ್ಮನಾಭ ಸುವರ್ಣ, ಮಹಿಳಾ ವಿಭಾಗದ ಕಾರ್ಯದರ್ಶಿ ಚಂದ್ರ ಎಂ. ಸುವರ್ಣ, ನಾರಾಯಣ ಸಾಲ್ಯಾನ್‌, ಹರೀಶ್‌ ಕುಂದರ್‌, ರಾಮಚಂದ್ರ ಕೋಟ್ಯಾನ್‌ ತೀಯಾ ಸಮಾಜದ ಕಾರ್ಯಕಾರಿ ಸಮಿತಿಯ ಇತರ ಪದಾಧಿಕಾರಿಗಳು, ಸದಸ್ಯರುಗಳು, ಉಪಸಮಿತಿಗಳ ಹಾಗೂ ಮಹಿಳಾ ವಿಭಾಗಗಳ ಇತರ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

Advertisement

 ಧಾರ್ಮಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮಗಳನ್ನು ಪಶ್ಚಿಮ ವಲಯದ ಕಾರ್ಯಾಧ್ಯಕ್ಷ ಗಂಗಾಧರ ಕಲ್ಲಾಡಿ ಅವರು ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next