Advertisement

ತೀಯಾ ಸಮಾಜ ಮಹಿಳಾ ವಿಭಾಗ: ಸಮಾಜ ಬಾಂಧವರಿಗೆ ಪ್ರತಿಭಾ ಸ್ಪರ್ಧೆ

12:23 PM Feb 02, 2018 | Team Udayavani |

ಮುಂಬಯಿ: ತೀಯಾ ಸಮಾಜ ಮುಂಬಯಿ ಇದರ ಮಹಿಳಾ ವಿಭಾಗ, ಪೂರ್ವ ವಲಯದ ಸದಸ್ಯ ಬಾಂಧವರ ಪರಿಶ್ರಮದಿಂದಾಗಿ ಇಂದಿನ ಕಾರ್ಯಕ್ರಮವು ಯಶಸ್ಸನ್ನು ಕಂಡಿದೆ. ಸಂಘದ ಸದಸ್ಯರು ಮತ್ತು ಮಕ್ಕಳ ಪ್ರತಿಭೆಗಳನ್ನು ಶೋಧಿಸಿ ಪ್ರೋತ್ಸಾಹಿಸುವ ಕಾರ್ಯ ಅಭಿನಂದನೀಯ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಸಂಘದ ವಿಶ್ವಸ್ತ ಸದಸ್ಯ, ಉದ್ಯಮಿ ಶಂಕರ್‌ ಸಾಲ್ಯಾನ್‌ ನುಡಿದರು.

Advertisement

ಜ. 21 ರಂದು ಎಸ್‌ಎನ್‌ಡಿಟಿ ಮಹಿಳಾ ಕಾಲೇಜು ಸಭಾಗೃಹದಲ್ಲಿ ತೀಯಾ ಸಮಾಜ ಮುಂಬಯಿ ಮಹಿಳಾ ವಿಭಾಗದ ವತಿಯಿಂದ ನಡೆದ ಪ್ರತಿಭಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ  ವಿಜೇತ ಸ್ಪರ್ಧಿಗಳಿಗೆ ಪ್ರಶಸ್ತಿ ಪ್ರದಾನಿಸಿ ಮಾತನಾಡಿ, ವಿಜೇತ ಸ್ಪರ್ಧಿಗಳಿಗೆ ಶುಭಹಾರೈಸಿದರು.

ಪೂರ್ವ ವಲಯದ ಸ್ಥಾಪಕ ಕಾರ್ಯಾಧ್ಯಕ್ಷ ರವಿ ಎಸ್‌. ಮಂಜೇಶ್ವರ ಅವರು ಮಾತನಾಡಿ, ನಮ್ಮ ಸದಸ್ಯರ ಹಾಗೂ ಮಕ್ಕಳ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ಇದರಿಂದ ಸಂಘಟನೆಯು ಬಲಗೊಳ್ಳುತ್ತದೆ ಎಂದರು.

ಸಸಿಹಿತ್ಲು ಭಗವತೀ ತೀಯಾ ಸಂಘ ಮುಂಬಯಿ ಸಂಸ್ಥೆಯ ಅಧ್ಯಕ್ಷ ಚಂದ್ರಹಾಸ ಪಾಲನ್‌ ಅವರು ಮಾತನಾಡಿ, ಸಂಘವು ಆಯೋಜಿಸುವ ಇಂತಹ ಕಾರ್ಯಕ್ರಮಗಳಲ್ಲಿ ಸದಸ್ಯರು ಉತ್ಸಾಹದಿಂದ ಸಹಭಾಗಿಗಳಾಗಬೇಕು. ಆ ಮೂಲಕ ನಮ್ಮ ಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಹೇಳಿದರು.

ವಿಶ್ವಸ್ತಸದಸ್ಯ ಡಾ| ದಯಾನಂದ ಕುಂಬ್ಳೆ ಅವರು ಮಾತನಾಡಿ, ಬಹುಸಂಖ್ಯೆಯಲ್ಲಿ ನಮ್ಮವರಿಗಾಗಿ ಇಂತಹ ಸ್ಪರ್ಧೆಯನ್ನು ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದು ಸಂತಸ ತಂದಿದೆ. ಬಾಂಧವ್ಯ ವೃದ್ಧಿಗಾಗಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದರು.
ವೇದಿಕೆಯಲ್ಲಿ ವಿಶ್ವಸ್ತ ಸದಸ್ಯರಾದ ಬಾಬು ಡಿ. ಬಂಗೇರ, ಅಪ್ಪುಂಜಿ ಬಂಗೇರ, ಪೂರ್ವ ವಲಯ ಮಹಿಳಾ ಕಾರ್ಯಾಧ್ಯಕ್ಷೆ ವೃಂದಾ ದಿನೇಶ್‌, ಉಜ್ವಲ ಚಂದ್ರಶೇಖರ್‌, ಪಶ್ಚಿಮ ವಲಯದ ಕಾರ್ಯಾಧ್ಯಕ್ಷ ಬಾಬು ಕೋಟ್ಯಾನ್‌, ಪಶ್ಚಿಮ ವಲಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಡಿ. ಉಳ್ಳಾಲ್‌, ಆರೋಗ್ಯನಿಧಿ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ  ತಿಮ್ಮಪ್ಪ ಬಂಗೇರ, ಉಮೇಶ್‌ ಮಂಜೇಶ್ವರ, ರೂಪೇಶ್‌ ರಾವ್‌, ಪೂರ್ವ ವಲಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಿನಿ ಕೋಟೆಕಾರ್‌ ಉಪಸ್ಥಿತರಿದ್ದರು.

Advertisement

ಅಡುಗೆ ಸ್ಪರ್ಧೆಯಲ್ಲಿ ಶೈಲಜಾ ಸುಂದರ್‌ ಪ್ರಥಮ, ಶ್ವೇತಾ ಉಮೇಶ್‌ ದ್ವಿತೀಯ, ಶಶಿಪ್ರಭಾ ಶೈಲೇಶ್‌ ತೃತೀಯ ಬಹುಮಾನ ಪಡೆದರು. ನಿರ್ಣಾಯಕರಾಗಿ ಶಂಕರ್‌ ಸಾಲ್ಯಾನ್‌, ಅಪ್ಪುಂಜ್ಞೆ ಬಂಗೇರ, ಬಾಬು ಟಿ. ಬಂಗೇರ, ಅಶೋಕ್‌ ಕೋಟ್ಯಾನ್‌, ಸುಜಾತಾ ಕೇಶವ, ದಿನೇಶ್‌ ನಾರಾಯಣ್‌ ಮೊದಲಾದವರು ಸಹಕರಿಸಿದರು.

ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರವಿ ಮಂಜೇಶ್ವರ, ಶಂಕರ ಸಾಲ್ಯಾನ್‌, ಬಾಬು ಟಿ. ಬಂಗೇರ, ಲತಾ ಡಿ. ಉಳ್ಳಾಲ್‌, ಪದ್ಮಿನಿ ಕೋಟೆಕಾರ್‌, ಪುಷ್ಪಾ ಕೆ. ಸಾಲ್ಯಾನ್‌, ಸುಶೀಲಾ ಸುವರ್ಣ, ತಿಮ್ಮಪ್ಪ ಬಂಗೇರ ಉಪಸ್ಥಿತರಿದ್ದರು. ನಿಧಿ ಬೆಳ್ಚಡ ಪ್ರಾರ್ಥನೆಗೈದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪೂರ್ವ ವಲಯ ಮಹಿಳಾ ವಿಭಾಗದ ಸದಸ್ಯೆಯರಾದ ಆಶಾ ಉಳ್ಳಾಲ್‌, ಕುಮುದಾ ಅಶೋಕ್‌, ಸುನೀತಾ ಸಾಲ್ಯಾನ್‌, ಶುಭಾ ಗುಜರನ್‌, ಸುಜಾತಾ ಕೇಶವ, ಲತಾ ತಾರಾನಾಥ್‌, ದಿವ್ಯಾ ಪ್ರವೀಣ್‌, ಶ್ವೇತಾ ಸಚಿನ್‌, ಉಜ್ವಲಾ ಚಂದ್ರ, ವೃಂದಾ ದಿನೇಶ್‌ ಅವರನ್ನು ಗೌರವಿಸಲಾಯಿತು.

ಜಯನ್‌ ತಾರಾನಾಥ್‌ ಕರ್ಕೇರ, ಆಕಾಂಕ್ಷಾ ಟಿ. ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ವಿವೇಕ್‌ ಚಂದ್ರಶೇಖರ್‌, ಶೈಲೇಶ್‌ ಬಂಗೇರ, ಕಿಶೋರ್‌ ಪುರುಷೋತ್ತಮ ಕೋಟೆಕಾರ್‌, ತಾರಾನಾಥ್‌, ಪ್ರಜ್ವಲ್‌, ಕೇಶವ ಸುವರ್ಣ, ಭಾಸ್ಕರ ಸಹಕರಿಸಿದರು. ಟಿ. ಸುಂದರ್‌, ಆನಂದ ಕರ್ಕೇರ, ಜನಾದ‌ìನ್‌ ಉಳ್ಳಾಲ್‌ ಮೊದಲಾದವರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು. ಬಾಬು ಬೆಳ್ಚಡ ವಂದಿಸಿದರು. ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
 

Advertisement

Udayavani is now on Telegram. Click here to join our channel and stay updated with the latest news.

Next