ಬೆಂಗಳೂರು: ಮೂರನೇ ಅಂತಾರಾಷ್ಟ್ರೀಯ ಯೋಗದಿನದ ಪ್ರಯುಕ್ತ ಜೂ.18ರಂದು ವಿಧಾನಸೌಧದ ಮುಂಭಾಗ ಸುಮಾರು 3000 ಯೋಗಪಟುಗಳಿಂದ 30 ಸೆಕೆಂಡ್‌ಗಳ ಕಾಲ “ಶೀರ್ಷಾಸನ’ ಪ್ರದರ್ಶಿಸಿ ಗಿನ್ನಿಸ್ ದಾಖಲೆ ನಿರ್ಮಿಸಲು ಆರ್ಟ್ ಆಫ್ ಲಿವಿಂಗ್, ಪತಂಜಲಿ ಸೇರಿ ಹಲವು ಸಂಸ್ಥೆಗಳು ಸಿದ್ಧತೆ ನಡೆಸಿವೆ.
ಎಸ್.ವ್ಯಾಸ, ಆರ್ಟ್ ಆಫ್ ಲಿವಿಂಗ್, ಪತಂಜಲಿ ಮತ್ತು ಯೋಗ ಶಿಕ್ಷಣ ಸಮಿತಿ ಸಹಭಾಗಿತ್ವದಲ್ಲಿ ಗಂಗೋತ್ರಿ ಸಂಸ್ಥೆಯ ನೇತೃತ್ವದಲ್ಲಿ ಎಲ್ಲ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಕಳೆದ ಮೂರು ತಿಂಗಳಿಂದ ಸುಮಾರು 100 ಯೋಗ ಕೇಂದ್ರಗಳಲ್ಲಿ ನೂರಾರು ಯೋಗಶಿಕ್ಷಕರಿಂದ “ಶೀರ್ಷಾಸನ’ ತರಬೇತಿ ಕೊಡಿಸಲಾಗುತ್ತಿದೆ ಎಂದು ಕಾರ್ಯಕ್ರಮದ ಆಯೋಜಕ ಯೋಗಗಂಗೋತ್ರಿ ಅಧ್ಯಕ್ಷ ಎನ್.ಆರಾಧ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆ ದಿನ ಬೆಳಗ್ಗೆ 6.30ಕ್ಕೆ ಪುರಭವನದಿಂದ “ಆರೋಗ್ಯದೆಡೆಗೆ ಯೋಗನಡಿಗೆ’ ಘೋಷವಾಕ್ಯದೊಂದಿಗೆ ಆರಂಭವಾಗುವ ಜಾಥಾ ಸುಮಾರು 7.30ಕ್ಕೆ ವಿಧಾನಸೌಧ ತಲುಪಲಿದೆ. ವಿಧಾನಸೌಧದ ಪೂರ್ವ ಭಾಗದಲ್ಲಿ 3000 ಯೋಗಪಟುಗಳಿಗೆ ಶೀರ್ಷಾಸನ ಮಾಡಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.
108 ಮಂದಿಯ ತಂಡ ಸಂಗೀತದ ಮೂಲಕ ನಾಡಗೀತೆ ಹಾಡಲಿದ್ದು, ನಂತರ ಯೋಗ ಪ್ರದರ್ಶನ ಆರಂಭವಾಗಲಿದೆ. ನಂತರ ವಿವಿಧ ಯೋಗ ಗುತ್ಛಗಳನ್ನು ಪ್ರದರ್ಶಿಸಲಾಗುತ್ತದೆ ಹಾಗೂ ಯೋಗ ಪ್ರಚಾರ ಮತ್ತು ಆರೋಗ್ಯ ಪಾಲನೆಗೆ ಯೋಗಾಸನಗಳ ಮಹತ್ವ ತಿಳಿಸಲಾಗುತ್ತದೆ ಎಂದು ಹೇಳಿದರು.
ಪ್ರದರ್ಶನದಲ್ಲಿ ಬೆಂಗಳೂರು ನಗರ ಮಾತ್ರವಲ್ಲದೇ, ತುಮಕೂರು, ರಾಮನಗರ, ಮಂಡ್ಯ, ಮೈಸೂರು ಮತ್ತು ಮಂಗಳೂರು, ಶಿವಮೊಗ್ಗ, ದಾವಣಗೆರೆ ಸೇರಿ ಹೊರರಾಜ್ಯಗಳಿಂದಲೂ ಯೋಗಪಟುಗಳು ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ 18 ವರ್ಷ ಮೇಲ್ಪಟ್ಟ ಪುರುಷ, ಮಹಿಳೆಯರು ಭಾಗವಹಿಸಬಹುದು. ವೆಬ್‌ಸೈಟ್ ಡಿಡಿಡಿ.yಟಜಚಜಚnಜಟಠಿrಜಿ.ಟ್ಟಜ ಅಥವಾ 88846 46108 ಮೂಲಕ ಆಸ್ತಕರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.